ಛೇ.. ರುಕ್ಕುಗೆ ಈ ರೀತಿ ಆಗಬಾರದಿತ್ತು; ಎಐ ಫೋಟೋಗಳು ವೈರಲ್
Rukmini Vasanth: ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರುಕ್ಮಿಣಿ ಅವರು ಯುವರಾಣಿಯಾಗಿ ಕಾಣಿಸಿಕೊಂಡಿದ್ದಾರೆ. ಕನಕವಲ್ಲಿ ಅವರ ಪಾತ್ರದ ಹೆಸರು. ಅವರು ಕತ್ತಿ ಹಿಡಿದು ಯೋಧೆಯಂತೆ ಹೋರಾಡುತ್ತಾರೆ. ಈ ರೀತಿ ಕತ್ತಿ ಹಿಡಿದ ಒಂದು ದೃಶ್ಯವನ್ನು ಕೆಲವರು ತಿರುಚಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

ದೃಶ್ಯ ಎಷ್ಟೇ ಅದ್ಭುತವಾಗಿರಲಿ, ಅದನ್ನು ಎಷ್ಟೇ ಚೆನ್ನಾಗಿ ಕಟ್ಟಿಕೊಟ್ಟಿರಲಿ ಅವುಗಳನ್ನು ಫನ್ ಆಗಿ ಬದಲಿಸುವ ಆಲೋಚನೆ ಅನೇಕರಿಗೆ ಇರುತ್ತದೆ. ಇತ್ತೀಚೆಗೆ ಬಿಡುಗಡೆ ಆದ ‘ಕಾಂತಾರ: ಚಾಪ್ಟರ್ 1’ (Kantara) ಸಿನಿಮಾದ ಪ್ರತಿ ದೃಶ್ಯಗಳು ಅದ್ಭುತವಾಗಿದೆ. ಈ ಟ್ರೇಲರ್ ನೋಡಿದ ಅನೇಕರಿಗೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಹೀಗಿರುವಾಗಲೇ ಟ್ರೇಲರ್ನಲ್ಲಿ ರುಕ್ಮಿಣಿ ವಸಂತ್ ಅವರ ಆ ಒಂದು ದೃಶ್ಯವನ್ನು ಎಐ ಟೂಲ್ ಬಳಸಿ ನಾನಾ ರೀತಿ ತಿರುಚಲಾಗಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರುಕ್ಮಿಣಿ ಅವರು ಯುವರಾಣಿಯಾಗಿ ಕಾಣಿಸಿಕೊಂಡಿದ್ದಾರೆ. ಕನಕವಲ್ಲಿ ಅವರ ಪಾತ್ರದ ಹೆಸರು. ಅವರು ಕತ್ತಿ ಹಿಡಿದು ಯೋಧೆಯಂತೆ ಹೋರಾಡುತ್ತಾರೆ. ಈ ರೀತಿ ಕತ್ತಿ ಹಿಡಿದ ಒಂದು ದೃಶ್ಯವನ್ನು ಕೆಲವರು ತಿರುಚಿದ್ದಾರೆ. ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗೆ ಟಾರ್ ಹಾಕುವಂತೆ, ಸೌಟು ಹಿಡಿದು ಅಡುಗೆ ಮಾಡಿದಂತೆಲ್ಲ ತೋರಿಸಲಾಗಿದೆ.
ಬೆಂಗಳೂರಿನ ರಸ್ತೆಗಳು ಗುಂಡಿ ಬಿದ್ದಿದ್ದು, ಓಡಾಡಲಾಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಬಗ್ಗೆ ಅನೇಕರು ಅಪಸ್ವರ ತೆಗೆದಿದ್ದಾರೆ. ಕೆಲವರು ಈ ಬಗ್ಗೆ ದೂರು ನೀಡಿದ್ದಾರೆ. ಇದಕ್ಕೆ ಎಚ್ಚೆತ್ತುಕೊಂಡಿರುವ ಸರ್ಕಾರ ಗುಂಡಿ ಮುಚ್ಚಿಸೋ ಕೆಲಸದಲ್ಲಿ ತೊಡಗಿಕೊಂಡಿದೆ. ಹೀಗಿರುವಾಗಲೇ ಅನೇಕರು ರುಕ್ಮಿಣಿ ಅವರೇ ರಸ್ತೆ ಮುಚ್ಚಿಸೋ ರೀತಿ ತೋರಿಸಿದ್ದರೆ.
ತಿಂಡಿ ಊಟ ಎಲ್ಲ ಆಯ್ತು… ನಡೀರಿ ಕೆಲಸ ಮಾಡುವ. pic.twitter.com/TH8ruELeuI
— ಮೀಮರ್ ಮುತ್ತಣ್ಣ (@ijnani) September 24, 2025
Her smile, her charm, her aura – everything speaks royalty 👑✨ #RukminiVasanth pic.twitter.com/70BAc80NJ4
— Filmy Focus (@FilmyFocus) September 23, 2025
‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅವರು ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಸೌಂದರ್ಯಕ್ಕೆ ಸಾಟಿಯೇ ಇಲ್ಲದಂತೆ ಆಗಿದೆ. ಅವರ ಸೌಂದರ್ಯವನ್ನು ಅನೇಕರು ಕೊಂಡಾಡಿದ್ದಾರೆ. ಕೆಲವರು ಅವರನ್ನು, ಏಂಜಲ್ ಎಂದೆಲ್ಲ ಕರೆದಿದ್ದಾರೆ.
ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ರಿಷಬ್ ಪಡೆದ ಸಂಭಾವನೆ ಎಷ್ಟು? ಊಹೆಗೂ ಮೀರಿದ್ದು
‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಅದ್ದೂರಿಯಾಗಿ ನಿರ್ಮಾಣ ಮಾಡಿದೆ. ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿ ಈ ಸಿನಿಮಾ ಮೂಡಿ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:03 am, Fri, 26 September 25








