ಐಎಂಡಿಬಿಯಲ್ಲಿ 249 ಚಿತ್ರಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬಂದ ‘ಕಾಂತಾರ’; ರಿಷಬ್ ಸಿನಿಮಾ ನಡೆದಿದ್ದೇ ಹಾದಿ
ಐಎಂಡಿಬಿಯಲ್ಲಿ ಪ್ರೇಕ್ಷಕರು ಸಿನಿಮಾಗಳಿಗೆ ರೇಟಿಂಗ್ ನೀಡುತ್ತಾರೆ. ಈ ರೇಟಿಂಗ್ ಆಧರಿಸಿ ಅನೇಕರು ಚಿತ್ರಮಂದಿರಕ್ಕೆ ತೆರಳುತ್ತಾರೆ. ಈಗ ‘ಕಾಂತಾರ’ ಚಿತ್ರಕ್ಕೆ ಐಎಂಡಿಬಿಯಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ವೋಟ್ ಮಾಡಿದ್ದು, 9.4 ರೇಟಿಂಗ್ ಸಿಕ್ಕಿದೆ.
‘ಆನೆ ನಡೆದಿದ್ದೇ ಹಾದಿ’ ಎಂಬ ಮಾತು ಕನ್ನಡದ ‘ಕಾಂತಾರ’ (Kantara Movie)ಸಿನಿಮಾಗೆ ಸರಿಯಾಗಿ ಅನ್ವಯ ಆಗುತ್ತದೆ. ಈ ಚಿತ್ರ ಸ್ಯಾಂಡಲ್ವುಡ್ ಮಾತ್ರವಲ್ಲ ಪರಭಾಷೆಯಲ್ಲೂ ಸಖತ್ ಸೌಂಡ್ ಮಾಡುತ್ತಿದೆ. ಈ ಚಿತ್ರ ಸೃಷ್ಟಿ ಮಾಡುತ್ತಿರುವ ದಾಖಲೆಗಳು ಹಲವು. ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಚಿತ್ರ ಅಬ್ಬರಿಸುತ್ತಿದೆ. ಈಗ ‘ಕಾಂತಾರ’ ಚಿತ್ರ ಐಎಂಡಿಬಿ ರೇಟಿಂಗ್ನಲ್ಲಿ ಟಾಪ್ ಸ್ಥಾನ ಪಡೆದುಕೊಂಡಿದೆ. ಭಾರತದ 250 ಟಾಪ್ ರೇಟೆಡ್ ಚಿತ್ರಗಳ ಪೈಕಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಸಿನಿಮಾಗೆ ಮೊದಲ ಸ್ಥಾನ ಸಿಕ್ಕಿದೆ.
ಐಎಂಡಿಬಿಯಲ್ಲಿ ಪ್ರೇಕ್ಷಕರು ಸಿನಿಮಾಗಳಿಗೆ ರೇಟಿಂಗ್ ನೀಡುತ್ತಾರೆ. ಈ ರೇಟಿಂಗ್ ಆಧರಿಸಿ ಅನೇಕರು ಚಿತ್ರಮಂದಿರಕ್ಕೆ ತೆರಳುತ್ತಾರೆ. ಈಗ ‘ಕಾಂತಾರ’ ಚಿತ್ರಕ್ಕೆ ಐಎಂಡಿಬಿಯಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ವೋಟ್ ಮಾಡಿದ್ದು, 9.4 ರೇಟಿಂಗ್ ಸಿಕ್ಕಿದೆ. ಹೀಗಾಗಿ ಭಾರತದ ಟಾಪ್ 250 ಚಿತ್ರಗಳ ಪೈಕಿ ಈ ಸಿನಿಮಾಗೆ ಅಗ್ರಸ್ಥಾನ ಸಿಕ್ಕಿದೆ. ‘ಪಿಕೆ’, ‘3 ಈಡಿಯಟ್ಸ್’, ‘ಜೈ ಭೀಮ್’, ‘96’, ‘ಅಸುರನ್’, ಸೇರಿ ಬೇರೆ ಬೇರೆ ಭಾಷೆಯ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ‘ಕಾಂತಾರ’ ಹಿಂದಿಕ್ಕಿದೆ. ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ 8ನೇ ಸ್ಥಾನದಲ್ಲಿದೆ. ‘ಲೂಸಿಯಾ’, ‘ಕೆಜಿಎಫ್ 1’, ದಿಯಾ ಮೊದಲಾದ ಕನ್ನಡದ ಚಿತ್ರಗಳು ಈ ಲಿಸ್ಟ್ನಲ್ಲಿವೆ.
India’s Current Top 250 Films:
What are your favourites from this list??
Regularly updated, the IMDb Top 250 is a collection of the most loved & highest-rated Indian films by fans. This list is as of 17th October, 2022.#IMDbTop250 pic.twitter.com/02sYGdDZHL
— IMDb India (@IMDb_in) October 17, 2022
ಬುಕ್ ಮೈ ಶೋನಲ್ಲಿ ಒಳ್ಳೆಯ ರೇಟಿಂಗ್
‘ಕಾಂತಾರ’ ಚಿತ್ರಕ್ಕೆ ಕನ್ನಡದವರು ನೀಡಿದ ಪ್ರತಿಕ್ರಿಯೆ ನೋಡಿ ಪರಭಾಷೆಯವರಿಗೂ ಕುತೂಹಲ ಮೂಡಿತು. ಕನ್ನಡದಲ್ಲೇ ಈ ಚಿತ್ರವನ್ನು ನೋಡಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದರು. ಆ ಬಳಿಕ ಬೇರೆ ಭಾಷೆಗೂ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡುವ ಒತ್ತಾಯ ಹೆಚ್ಚಿದ್ದರಿಂದ ಚಿತ್ರವನ್ನು ಹಿಂದಿ, ತೆಲುಗು, ತಮಿಳಿನಲ್ಲಿ ರಿಲೀಸ್ ಮಾಡಲಾಯಿತು. ಅಲ್ಲಿನವರಿಂದಲೂ ಸಿನಿಮಾಗೆ ಶಹಭಾಷ್ಗಿರಿ ಸಿಕ್ಕಿದೆ.
ಹಿಂದಿಯಲ್ಲಿ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ರಿಷಬ್ ಸಿನಿಮಾ ಕೋಟಿಕೋಟಿ ಕಲೆಕ್ಷನ್ ಮಾಡುತ್ತಿದೆ. ಬುಕ್ ಮೈ ಶೋನಲ್ಲಿ ಹಿಂದಿ ವರ್ಷನ್ಗೆ 26.5 ಸಾವಿರ ಮಂದಿ ವೋಟ್ ಮಾಡಿದ್ದು 9.5 ರೇಟಿಂಗ್ ಪಡೆದುಕೊಂಡಿದೆ. ತಮಿಳಿನಲ್ಲಿ ಈ ಸಿನಿಮಾಗೆ 5.8 ಸಾವಿರ ವೋಟ್ ಬಿದ್ದಿದ್ದು, 9.1 ರೇಟಿಂಗ್ ಸಿಕ್ಕಿದೆ. ತೆಲುಗಿನವರಂತೂ ಚಿತ್ರವನ್ನು ಸಖತ್ ಇಷ್ಟಪಟ್ಟಿದ್ದಾರೆ. 25 ಸಾವಿರಕ್ಕೂ ಅಧಿಕ ವೋಟಿಂಗ್ ಸಿಕ್ಕಿದ್ದು, 9.4 ರೇಟಿಂಗ್ ಸಿಕ್ಕಿದೆ. ಅಕ್ಟೋಬರ್ 20ರಂದು ಚಿತ್ರ ಮಲಯಾಳಂನಲ್ಲಿ ತೆರೆಗೆ ಬರುತ್ತಿದೆ.
Published On - 7:52 pm, Tue, 18 October 22