AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರೀಕರಣ ಬಂದ್ ಇಲ್ಲ, ಗಡುವು ಪಡೆದ ಫಿಲಂ ಚೇಂಬರ್, ಯೂನಿಟ್ ಮಾಲೀಕರ ಮೇಲೆ ನಿರ್ಮಾಪಕರ ಸಂಘ ದೂರು

Karnataka Film Chamber of Commerce: ಹೊರಾಂಗಣ ಚಿತ್ರೀಕರಣ ಕಾರ್ಮಿಕರ ಸಂಘವು ಕರೆ ನೀಡಿದ್ದ ಚಿತ್ರೀಕರಣ ಬಂದ್​ ಅನ್ನು ಮುಂದೂಡುವಲ್ಲಿ ಫಿಲಂ ಚೇಂಬರ್ ಯಶಸ್ವಿಯಾಗಿದೆ.

ಚಿತ್ರೀಕರಣ ಬಂದ್ ಇಲ್ಲ, ಗಡುವು ಪಡೆದ ಫಿಲಂ ಚೇಂಬರ್, ಯೂನಿಟ್ ಮಾಲೀಕರ ಮೇಲೆ ನಿರ್ಮಾಪಕರ ಸಂಘ ದೂರು
ಫಿಲಂ ಚೇಂಬರ್
ಮಂಜುನಾಥ ಸಿ.
|

Updated on: Jun 04, 2023 | 9:41 PM

Share

ಹೊರಾಂಗಣ ಚಿತ್ರೀಕರಣ (Outdor Shooting) ಕಾರ್ಮಿಕರ ಸಂಘವು (Shooting Labor) ವೇತನ ಹೆಚ್ಚಳ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೂನ್ 5ರಿಂದ ಚಿತ್ರೀಕರಣಕ್ಕೆ ಬಹಿಷ್ಕಾರ ಹೇಳಿದ್ದವು. ಆದರೆ ಫಿಲಂ ಚೇಂಬರ್ ಹಾಗೂ ನಿರ್ಮಾಪಕರ ಸಂಘವು (Producer) ಹೊರಾಂಗಣ ಚಿತ್ರೀಕರಣ ಕಾರ್ಮಿಕರ ಸಂಘದೊಟ್ಟಿಗೆ ಮಾತುಕತೆ ನಡೆಸಿದ್ದು ಬೇಡಿಕೆಗಳ ಈಡೇರಿಕೆಗೆ ಹದಿನೈದು ದಿನಗಳ ಗಡುವನ್ನು ಪಡೆದುಕೊಂಡಿದೆ. ಇದರ ಬೆನ್ನಲ್ಲೆ ನಿರ್ಮಾಪಕರ ಸಂಘವು ಲೈಟ್​ಮೆನ್ ಕಾರ್ಮಿಕರ ಸಂಘ, ಯೂನಿಕ್ ಮಾಲೀಕರ, ತಂತ್ರಜ್ಞರ ಸಂಘದ ವಿರುದ್ಧ ಸರಣಿ ದೂರುಗಳನ್ನು ಮಾಡಿದ್ದು, ಕೆಲವಾರು ಪ್ರಶ್ನೆಗಳನ್ನು ಸಹ ಮಾಡಿದೆ.

ಕ್ಯಾಮೆರಾಮನ್​ಗಳ ಬಳಿ ಕೆಲಸಕ್ಕೆ ಇರುವವರೇ ಪ್ರತ್ಯೇಕವಾಗಿ ಜನರೇಟರ್ ಇನ್ನಿತರೆ ಯೂನಿಟ್​ಗಳನ್ನು ಬಾಡಿಗೆಗೆ ನೀಡುತ್ತಿದ್ದಾರೆ. ಲೈಟ್​ಮೆನ್ ಹಾಗೂ ಇನ್ನಿತರೆ ಸಂಘಗಳ ಒಟ್ಟು ಸದಸ್ಯರ ಸಂಖ್ಯೆಯಾದರೂ ಗೊತ್ತಿದೆಯೇ? ಪ್ಯಾಕೇಜ್ ಹೆಸರಲ್ಲಿ ಕಡಿಮೆ ಹಣದ ಆಮಿಷ ತೋರಿಸಿ ಆ ಬಳಿಕ ಹೆಚ್ಚುವರಿ ಹಣ ಪೀಕಿಸುತ್ತಿರುವುದು ನಿರ್ಮಾಪಕರಿಗೆ ಹೊರೆಯಾಗುತ್ತಿದೆ. ಯುನಿಟ್ ಮಾಲೀಕರು ಒಪ್ಪಿಕೊಂಡ ಚಿತ್ರಗಳಿಗೆ ಯೂನಿಟ್​ನ ಸದಸ್ಯರೇ ಬೇರೆ ಯೂನಿಟ್​ನಿಂದ ಯಂತ್ರಗಳನ್ನು ಕರೆಸಿ ಹಾಕುತ್ತಿದ್ದಾರೆ. ಇದು ನಿಯಮಕ್ಕೆ ಬಾಹಿರವಲ್ಲವೆ? ಇತ್ಯಾದಿ ಪ್ರಶ್ನೆಗಳನ್ನು ನಿರ್ಮಾಪಕ ಸಂಘದವರು ಕೇಳಿದ್ದಾರೆ.

ಎಂಟು ಲೈಟ್​ಮೆನ್​ಗಳನ್ನು ಕೆಲಸಕ್ಕೆ ಕಳಿಸಿ 10 ಜನರ ಭತ್ಯೆ ಪಡೆದುಕೊಳ್ಳಲಾಗುತ್ತಿದೆ. ಯೂನಿಟ ಸದಸ್ಯರ ಮಾಹಿತಿ ಕೇಳಿದರೆ ನಾವು ಸಂಘದಲ್ಲಿಲ್ಲ ಎಂದು ಹೇಳುತ್ತಾರೆ, ಸಂಘದ ಸದಸ್ಯರಲ್ಲದೇ ಇರುವವರನ್ನು ಏಕೆ ಕೆಲಸಕ್ಕೆ ಕಳಿಸುತ್ತಿದ್ದೀರಿ? ನಿರ್ಮಾಪಕರಿಂದ ಹೆಚ್ಚಿನ ಹಣ ಪಡೆದು ಕಾರ್ಮಿಕರಿಗೆ ಕಡಿಮೆ ಹಣ ನೀಡುತ್ತಿರುವುದು ಸಹ ನಮ್ಮ ಗಮನಕ್ಕೆ ಬಂದಿದೆ. ಇದು ನಿರ್ಮಾಪಕರಿಗೆ ಮಾಡಿದ ಮೋಸ ಅಲ್ಲವೆ? 40-50 ಜನ ಯೂನಿಟ್ ಸರಬರಾಜು ಮಾಡುತ್ತಿದ್ದಾರೆ. ಇದರಲ್ಲಿ ಒಬ್ಬರೂ ಸಹ ವಾಣಿಜ್ಯ ಮಂಡಳಿ ಸದಸ್ಯರಾಗಿಲ್ಲ ಎಂದಿದೆ ನಿರ್ಮಾಪಕರ ಸಂಘ.

ಇನ್ನು ಈ ಒತ್ತಾಯ, ಪ್ರತಿಭಟನೆಗಳ ಬಗ್ಗೆ ಮಾತನಾಡಿರುವ ಫಿಲಂ ಚೇಂಬರ್ ಅಧ್ಯಕ್ಷ ಭಾಮಾ ಹರೀಶ್, ”ಹೊರಾಂಗಣ ಚಿತ್ರೀಕರಣ ಕಾರ್ಮಿಕರ ಭತ್ಯೆ ಹೆಚ್ಚಳದ ಬಗ್ಗೆ ಮೊದಲಿನಿಂದಲೂ ಬೇಡಿಕೆ ಇದೆ. ಕೋವಿಡ್ ಇದ್ದ ಕಾರಣದಿಂದ ಭತ್ಯೆ ಹೆಚ್ಚಳ ಮಾಡಿರಲಿಲ್ಲ. ಆ ಬಗ್ಗೆ ಸಮಿತಿ ರಚಿಸಲಾಗಿದ್ದು ಕೆ.ಮಂಜು, ರಾಕ್​ಲೈನ್ ವೆಂಕಟೇಶ್, ದಯಾಳು ಅವಿನಾಶ್, ಸೂರಪ್ಪ ಬಾಬು ಸಮಿತಿಯಲ್ಲಿದ್ದಾರೆ. ಇನ್ನು ಡ್ಯಾನ್ಸ್ ಹಾಗೂ ಫೈಟರ್ ಅಸೋಸಿಯೇಷನ್​ನ ಮೀಟಿಂಗ್ ಇದೆ. ಅದರ ಬಗ್ಗೆ ಚರ್ಚೆ ಮಾಡಿ ಅದನ್ನೂ ಸರಿಪಡಿಸುತ್ತೇವೆ. ಇನ್ನು ಯೂನಿಟ್ ಮಾಲೀಕರು ಹಾಗೂ ಅವರ ಕಾರ್ಮಿಕರ ನಡುವೆ ಭಿನ್ನಾಭಿಪ್ರಾಯ ಇತ್ತು ಅದನ್ನು ಸಹ ಸರಿಪಡಿಸುತ್ತೇವೆ” ಎಂದಿದ್ದಾರೆ.

ಶೂಟಿಂಗ್ ಬಂದ್ ಮಾಡುವ ಬೆದರಿಕೆ ಬಗ್ಗೆ ಮಾತನಾಡಿದ ಭಾಮಾ ಹರೀಶ್, ”ಶೂಟಿಂಗ್ ಬಂದ್ ಮಾಡುವ ಬಗ್ಗೆ ಕೆಲವರು ಹೇಳಿದ್ದರು. ಆದರೆ ಹಾಗಾಗಲು ಬಿಟ್ಟಿಲ್ಲ. ಅವರನ್ನು ಕಚೇರಿಗೆ ಕರೆಸಿ ಮಾತನಾಡಿದ್ದೇವೆ. ನಮ್ಮ ಕಾರ್ಯದರ್ಶಿಗಳು ಅವರೊಟ್ಟಿಗೆ ಮಾತನಾಡಿಸಿ ಸಂಧಾನ ಮಾಡಿದ್ದಾರೆ. ಜೂನ್ 5 ರಂದು ಚಿತ್ರೀಕರಣ ಬಂದ್ ಆಗುವುದಿಲ್ಲ. ಎಂದಿನಂತೆ ಸರಾಗವಾಗಿ ಶೂಟಿಂಗ್ ನಡೆಯಲಿದೆ” ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್