ಪುತ್ರಿ ಆಯ್ರಾಗೆ ಅಆಇಈ ಕಲಿಸುತ್ತಿರುವ ನಟ ಯಶ್; ವೀಕೆಂಡ್ ಸ್ಪೆಷಲ್ ಕ್ಲಾಸ್ನ ವಿಡಿಯೋ ಇಲ್ಲಿದೆ
ವರ್ಣಮಾಲೆಯ ಸ್ವರಗಳನ್ನು ಆಯ್ರಾ ಈಗಾಗಲೇ ಕಲಿತಿದ್ದಾಳೆ. ಇನ್ನೇನಿದ್ದರೂ ಆಕೆ ವ್ಯಂಜನಗಳನ್ನು ಕಲಿಯುವುದು ಮಾತ್ರ ಬಾಕಿ. ಅದನ್ನು ಕಲಿಸಲು ಯಶ್ ಪ್ರಯತ್ನಿಸುತ್ತಿದ್ದಾರೆ.
ನಟ ‘ರಾಕಿಂಗ್ ಸ್ಟಾರ್’ ಯಶ್ (Yash) ಅವರು ಸದ್ಯ ಸಿನಿಮಾ ಕೆಲಸಗಳಿಂದ ಕೊಂಚ ಬಿಡುವು ಪಡೆದುಕೊಂಡಿದ್ದಾರೆ. ಅವರ ನಟನೆಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗೆ ಕೊನೇ ಹಂತದ ಕೆಲಸಗಳು ಮಾತ್ರ ಬಾಕಿ ಇವೆ. ಈ ಬಿಡುವಿನ ಸಂದರ್ಭದಲ್ಲಿ ಅವರು ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಮಕ್ಕಳಾದ ಆಯ್ರಾ (Ayra Yash) ಮತ್ತು ಯಥರ್ವ್ ಸಲುವಾಗಿ ಹೆಚ್ಚಿನ ಸಮಯವನ್ನು ಯಶ್ ಮೀಸಲಿಡುತ್ತಿದ್ದಾರೆ. ತಮ್ಮ ಮುದ್ದು ಮಕ್ಕಳಿಗೆ ಆಟದ ಜೊತೆ ಪಾಠವನ್ನು ಕೂಡ ‘ರಾಕಿಂಗ್ ಸ್ಟಾರ್’ ಹೇಳಿಕೊಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ರಾಧಿಕಾ ಪಂಡಿತ್ ಅವರು ಹೊಸದೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಮುದ್ದಿನ ಮಗಳು ಆಯ್ರಾಗೆ ಯಶ್ ಅವರು ಕನ್ನಡ ವರ್ಣಮಾಲೆ ಹೇಳಿಕೊಡುತ್ತಿರುವ ದೃಶ್ಯ ಸೆರೆಯಾಗಿದೆ. ಆ ಕ್ಯೂಟ್ ವಿಡಿಯೋ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ರಾಧಿಕಾ ಪಂಡಿತ್ (Radika Pandit) ಅವರು ಈ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಷ ಕಳೆಯುವುದರೊಳಗೆ ಒಂದು ಲಕ್ಷಕ್ಕೂ ಅಧಿಕ ಮಂದಿ ಇದನ್ನು ನೋಡಿದ್ದಾರೆ. ಬಗೆಬಗೆಯ ಕಮೆಂಟ್ಗಳ ಮೂಲಕ ಅಭಿಮಾನಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಮನೆಯೇ ಮೊದಲ ಪಾಠಶಾಲೆ ಎಂಬ ಮಾತಿದೆ. ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರ ವಿಚಾರದಲ್ಲೂ ಈ ಮಾತು ಸತ್ಯ. ಅದಕ್ಕೆ ‘ರಾಕಿಂಗ್ ಸ್ಟಾರ್’ ಯಶ್ ಫ್ಯಾಮಿಲಿ ಕೂಡ ಹೊರತಲ್ಲ. ರಾಧಿಕಾ ಪಂಡಿತ್-ಯಶ್ ದಂಪತಿಯ ಮಗಳು ಆಯ್ರಾ ಈಗ ಮೂರು ವರ್ಷದ ಕಂದ. ನಿಧಾನವಾಗಿ ಆಕೆ ಅಕ್ಷರಾಭ್ಯಾಸ ಮಾಡುತ್ತಿದ್ದಾಳೆ. ಮನೆಯಲ್ಲಿ ಆಕೆಗೆ ಕನ್ನಡ ವರ್ಣಮಾಲೆಯನ್ನು ಹೇಳಿಕೊಡಲಾಗಿದೆ.
View this post on Instagram
(ರಾಧಿಕಾ ಪಂಡಿತ್ ಹಂಚಿಕೊಂಡಿರುವ ವಿಡಿಯೋ)
ವೀಕೆಂಡ್ನಲ್ಲಿ ಸಿನಿಮಾದ ಯಾವುದೇ ಕೆಲಸದಲ್ಲೂ ಯಶ್ ಭಾಗಿ ಆಗಿಲ್ಲ. ಮಗಳಿಗೆ ಅಆಇಈ ಹೇಳಿಕೊಡುವುದರಲ್ಲಿ ಅವರು ತನ್ಮಯರಾಗಿದ್ದಾರೆ. ಆ ವಿಡಿಯೋವನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್ ಅವರು ‘ವೀಕೆಂಡ್ ಸ್ಪೆಷಲ್ ಕ್ಲಾಸ್’ ಎಂದು ಕ್ಯಾಪ್ಷನ್ ನೀಡಿದ್ದಾರೆ. ವರ್ಣಮಾಲೆಯ ಸ್ವರಗಳನ್ನು ಆಯ್ರಾ ಈಗಾಗಲೇ ಕಲಿತಿದ್ದಾಳೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಇನ್ನೇನಿದ್ದರು ಆಕೆ ವ್ಯಂಜನಗಳನ್ನು ಕಲಿಯುವುದು ಮಾತ್ರ ಬಾಕಿ. ಅದನ್ನು ಕಲಿಸಲು ಯಶ್ ಪ್ರಯತ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ರಾಕಿಂಗ್ ದಂಪತಿಯ ಮುದ್ದು ಮಗಳಿಗೆ ಆಟದ ಜೊತೆ ಪಾಠ ನಡೆಯುತ್ತಿದೆ.
ಮಗಳು ಆಯ್ರಾ ಹಾಗೂ ಮಗ ಯಥರ್ವ್ ಯಶ್ ಆರೈಕೆಯಲ್ಲಿ ರಾಧಿಕಾ ಪಂಡಿತ್ ಬ್ಯುಸಿ ಆಗಿದ್ದಾರೆ. ಸದ್ಯ ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಸಂಸಾರದ ಕಡೆಗೆ ರಾಧಿಕಾ ಹೆಚ್ಚು ಗಮನ ನೀಡುತ್ತಿದ್ದಾರೆ. ಆದಷ್ಟು ಬೇಗ ಅವರು ನಟನೆಗೆ ಮರಳಲಿ ಎಂದು ಫ್ಯಾನ್ಸ್ ಅಪೇಕ್ಷಿಸುತ್ತಿದ್ದಾರೆ. ಒಳ್ಳೆಯ ಕಥೆ ಮತ್ತು ಪಾತ್ರ ಸಿಕ್ಕರೆ ರಾಧಿಕಾ ಶೀಘ್ರವೇ ಖಂಡಿತ ಕಮ್ಬ್ಯಾಕ್ ಮಾಡಲಿದ್ದಾರೆ.
ಆಯ್ರಾ ತುಂಬ ಚೂಟಿ ಇದ್ದಾಳೆ. ಅವಳನ್ನು ಕಂಡರೆ ಯಶ್-ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಸಖತ್ ಇಷ್ಟ. ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಹಂಚಿಕೊಳ್ಳುವ ಫೋಟೋಗಳಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಾರೆ. ಯಶ್ ಕೂಡ ಮಕ್ಕಳ ಫೋಟೋ ಮತ್ತು ವಿಡಿಯೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಾರೆ. ‘ಕೆಜಿಎಫ್: ಚಾಪ್ಟರ್ 1’ ಸಿನಿಮಾದ ದೊಡ್ಡ ಯಶಸ್ಸಿನ ಬಳಿಕ ‘ಕೆಜಿಎಫ್: ಚಾಪ್ಟರ್ 2’ ಚಿತ್ರಕ್ಕಾಗಿ ನಿರೀಕ್ಷೆ ಹೆಚ್ಚಿದೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಏ.14ರಂದು ಬಿಡುಗಡೆ ಆಗಲಿದೆ. ಆ ದಿನಾಂಕಕ್ಕಾಗಿ ಯಶ್ ಅಭಿಮಾನಿಗಳು ಕಾದಿದ್ದಾರೆ.
ಇದನ್ನೂ ಓದಿ:
ಆಫ್ರಿಕಾದಲ್ಲೂ ನಟ ಯಶ್ ಹವಾ; ‘ಕೆಜಿಎಫ್’ ಚಿತ್ರದ ಹಾಡಿಗೆ ಮರುಳಾದ ಕಿಲಿ ಪೌಲ್
ರಾಧಿಕಾ ಪಂಡಿತ್ ಮೊಬೈಲ್ನಲ್ಲಿ ಯಶ್ ಹೆಸರು ಏನೆಂದು ಸೇವ್ ಆಗಿದೆ? ವೈರಲ್ ಆಯ್ತು ವಿಡಿಯೋ