AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮಕ್ಕೆ ಅತ್ತೆಯ ಸೀರೆ ಉಟ್ಟ ಸುದೀಪ್ ಪತ್ನಿ ಸುಪ್ರಿಯಾ

ಕಿಚ್ಚ ಸುದೀಪ್ ಮತ್ತು ಸುಪ್ರಿಯಾ ದಂಪತಿ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಅತ್ಯಂತ ಭಾವನಾತ್ಮಕವಾಗಿ ಆಚರಿಸಿಕೊಂಡಿದ್ದಾರೆ. ಸುಪ್ರಿಯಾ ಅವರು ತಮ್ಮ ದಿವಂಗತ ಅತ್ತೆಯವರ ಮದುವೆ ಸೀರೆ ಧರಿಸಿ ಹಿರಿಯರನ್ನು ಸ್ಮರಿಸಿರುವ ಸುಂದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮಕ್ಕೆ ಅತ್ತೆಯ ಸೀರೆ ಉಟ್ಟ ಸುದೀಪ್ ಪತ್ನಿ ಸುಪ್ರಿಯಾ
ಸುದೀಪ್-ಪ್ರಿಯಾ
ರಾಜೇಶ್ ದುಗ್ಗುಮನೆ
|

Updated on: Oct 22, 2026 | 2:38 PM

Share

ಮುಖ್ಯಾಂಶಗಳು

  • 25ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ
  • ವಿಶೇಷ ವಿಡಿಯೋ ಹಂಚಿಕೊಂಡ ಸುಪ್ರಿಯಾ ಸುದೀಪ್
  • ಅತ್ತೆಯ ಮದುವೆ ಸೀರೆ ಹಾಗೂ ತಂದೆಯ ನೆನಪಿನ ಒಡವೆ ಧರಿಸಿ ಭಾವುಕ

ಕನ್ನಡ ಚಿತ್ರರಂಗದ ಜನಪ್ರಿಯ ನಟ ಕಿಚ್ಚ ಸುದೀಪ್ ಹಾಗೂ ಸುಪ್ರಿಯಾ ದಂಪತಿ ತಮ್ಮ ಜೀವನದ ಮಧುರ ಮೈಲಿಗಲ್ಲಾದ 25ನೇ ವಿವಾಹ ವಾರ್ಷಿಕೋತ್ಸವವನ್ನು ಅತ್ಯಂತ ಭಾವನಾತ್ಮಕವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದ ನೆನಪಿಗಾಗಿ ಸುಪ್ರಿಯಾ ಅವರು ಸುಂದರವಾದ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಹಿರಿಯರನ್ನು ಸ್ಮರಿಸುತ್ತಾ ಭಾವುಕ ನುಡಿಗಳನ್ನು ಬರೆದುಕೊಂಡಿದ್ದಾರೆ.

ಹಿರಿಯರ ನೆನಪು ಮತ್ತು ಪರಂಪರೆ

‘ಕಳೆದ ಇಪ್ಪತ್ತೈದು ವರ್ಷಗಳಿಂದ ಕೈಕೈ ಹಿಡಿದು ಈ ಸುಂದರ ಪ್ರಯಾಣವನ್ನು ನಡೆಸಿಕೊಂಡು ಬಂದಿದ್ದೇವೆ. ನನ್ನ ದಿವಂಗತ ಅತ್ತೆಯವರ ಮದುವೆ ಸೀರೆ ಹಾಗೂ ನನ್ನ ತಂದೆಯು ತಾಯಿಗೆ ಮಾಡಿಸಿಕೊಟ್ಟಿದ್ದ ಚಿನ್ನದ ಬಳೆಯನ್ನು ಧರಿದ್ದೆ. ಈ ಮೂಕ ಪ್ರೀತಿಯಿಂದ ನೀಡಲಾದ ಈ ಉಡುಗೊರೆಗಳನ್ನು, ಗೌರವಪೂರ್ವಕವಾಗಿ ನಾನು ಮುಂದುವರಿಸಿಕೊಂಡು ಬಂದಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ಆ ಸೀರೆಯ ಪ್ರತಿಯೊಂದು ಮಡಿಕೆಯಲ್ಲಿಯೂ, ಆ ಬಳೆಯ ಪ್ರತಿಯೊಂದು ಹೊಳಪಿನಲ್ಲಿಯೂ ಅವರು ಇನ್ನೂ ನಮ್ಮೊಂದಿಗೇ ಇದ್ದಾರೆ. ನಮ್ಮ ಹಿರಿಯರನ್ನು ಗೌರವಿಸುವುದೆಂದರೆ ಕೇವಲ ಅವರನ್ನು ನೆನಪಿಸಿಕೊಳ್ಳುವುದಷ್ಟೇ ಅಲ್ಲ. ನಾವು ಪ್ರೀತಿಸುವ ರೀತಿಯಲ್ಲಿ, ನಾವು ಕಟ್ಟುವ ಮನೆಗಳಲ್ಲಿ ಮತ್ತು ನಾವು ಪಾಲಿಸುವ ಸಂಪ್ರದಾಯಗಳ ಮೂಲಕ ಅವರನ್ನು ನಮ್ಮೊಳಗೆ ಜೀವಂತವಾಗಿರಿಸುವುದೂ ಹೌದು. ಸಂಪ್ರದಾಯವೆಂಬುದು ಒಂದು ಸಮೂಹ ಗಾಯನವಿದ್ದಂತೆ. ಇದರಲ್ಲಿ ನಮ್ಮ ಪೂರ್ವಜರು ಇನ್ನೂ ಹಾಡುತ್ತಿರುತ್ತಾರೆ ಮತ್ತು ಆ ಗಾಯನದ ಸ್ವರಗಳನ್ನು ಮುಂದುವರಿಸಿಕೊಂಡು ಹೋಗುವವರು ನಾವೇ ಆಗಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯ ಮೈಕ್ ಬೆಲೆ ಹೇಳಿದ ಸುದೀಪ್; ಈ ಪ್ರೈಸ್​ನಲ್ಲಿ ಬುಲೆಟ್ ಬೈಕ್ ಬರುತ್ತೆ

ಈ ವಿಶೇಷ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕುಟುಂಬದ ಎಲ್ಲ ಸದಸ್ಯರು ಒಟ್ಟಾಗಿ ಸೇರಿ ಹಿರಿಯರನ್ನು ಸ್ಮರಿಸಿದ್ದಾರೆ. ಸಾಂಪ್ರದಾಯಿಕ ಪೂಜೆ ಹಾಗೂ ವಿಧಿ-ವಿಧಾನಗಳೊಂದಿಗೆ ನಡೆದ ಈ ಸುಂದರ ಕಾರ್ಯಕ್ರಮದ ದೃಶ್ಯಗಳು ಅಭಿಮಾನಿಗಳ ಮನಗೆದ್ದಿವೆ. ಸುದೀಪ್ ಹಾಗೂ ಸುಪ್ರಿಯಾ ದಂಪತಿಗೆ ಆಪ್ತರು, ಸೆಲೆಬ್ರಿಟಿಗಳು ಹಾಗೂ ಕೋಟ್ಯಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹಾರೈಕೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More