AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhruva Sarja: ‘ಲವ್​ ಯೂ ಮಗಳೇ’ ಎಂದು ಮೊದಲ ಬಾರಿ ಪುತ್ರಿಯ ಫೋಟೋ ಹಂಚಿಕೊಂಡ ಧ್ರುವ ಸರ್ಜಾ

Dhruva Sarja Daughter Photo: ಧ್ರುವ ಸರ್ಜಾ ಅವರು ಮಗಳ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಇದರಲ್ಲಿ ಪುತ್ರಿಯ ಮುಖ ಕಾಣಿಸಿಲ್ಲ. ಫೋಟೋ ನೋಡಿದ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

Dhruva Sarja: ‘ಲವ್​ ಯೂ ಮಗಳೇ’ ಎಂದು ಮೊದಲ ಬಾರಿ ಪುತ್ರಿಯ ಫೋಟೋ ಹಂಚಿಕೊಂಡ ಧ್ರುವ ಸರ್ಜಾ
ಮಗಳ ಜೊತೆ ಧ್ರುವ ಸರ್ಜಾ
ಮದನ್​ ಕುಮಾರ್​
|

Updated on:Mar 10, 2023 | 4:16 PM

Share

ನಟ ಧ್ರುವ ಸರ್ಜಾ (Dhruva Sarja) ಅವರ ಬದುಕಿನಲ್ಲಿ ಮಗಳಿಂದಾಗಿ ಖುಷಿ ಹೆಚ್ಚಿದೆ. ಕಳೆದ ವರ್ಷ ಅಕ್ಟೋಬರ್ 2ರಂದು ಅವರ ಪತ್ನಿ ಪ್ರೇರಣಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈವರೆಗೂ ಪುತ್ರಿಯ (Dhruva Sarja Daughter) ಫೋಟೋವನ್ನು ಈ ದಂಪತಿ ಹಂಚಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಮಗಳ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಧ್ರುವ ಸರ್ಜಾ ಅವರು ಶೇರ್​ ಮಾಡಿಕೊಂಡಿದ್ದಾರೆ. ‘ನನ್ನ ಮಗಳು.. ಐ ಲವ್​ ಯೂ ಮಗಳೇ’ ಎಂದು ಅವರು ಈ ಫೋಟೋಗೆ ಕ್ಯಾಪ್ಷನ್​ ನೀಡಿದ್ದಾರೆ. ಧ್ರುವ ಸರ್ಜಾ ಅಭಿಮಾನಿಗಳ ವಲಯದಲ್ಲಿ ಈ ಫೋಟೋ ವೈರಲ್ ಆಗಿದೆ. ‘ಮಾರ್ಟಿನ್’​ ಸಿನಿಮಾ (Martin Movie) ಕೆಲಸಗಳಲ್ಲಿ ತೊಡಗಿಕೊಂಡಿರುವ ಅವರು ಬಿಡುವಿನ ಸಮಯದಲ್ಲಿ ಮಗಳ ಜೊತೆ ಕಾಲ ಕಳೆಯುತ್ತಿದ್ದಾರೆ.

ಧ್ರುವ ಸರ್ಜಾ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್​. ಕುಟುಂಬಕ್ಕೆ ಅವರು ಹೆಚ್ಚು ಸಮಯ ಮೀಸಲಿಡುತ್ತಾರೆ. ಮಗಳ ಆಗಮನದ ಬಳಿಕವಂತೂ ಫ್ಯಾಮಿಲಿ ಜೊತೆ ಅವರ ಅಟ್ಯಾಚ್​ಮೆಂಟ್​ ಇನ್ನಷ್ಟು ಹೆಚ್ಚಾಗಿದೆ. ಅವರು ಹಂಚಿಕೊಂಡಿರುವ ಫೋಟೋ ನೋಡಿ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ
Image
Dhruva Sarja: ಅಪ್ಪನಾದ ಖುಷಿಯಲ್ಲಿ ಆಸ್ಪತ್ರೆ ಎದುರು ಅಭಿಮಾನಿಗಳ ಜತೆ ಸೆಲ್ಫಿಗೆ ಪೋಸ್​ ಕೊಟ್ಟ ಧ್ರುವ ಸರ್ಜಾ
Image
ಧ್ರುವ ಸರ್ಜಾ-ಪ್ರೇರಣಾಗೆ ಹೆಣ್ಣು ಮಗು; ರಾಯನ್​ ಜತೆ ಬಂದು ಪ್ರತಿಕ್ರಿಯೆ ನೀಡಿದ ಮೇಘನಾ ರಾಜ್​
Image
Dhruva Sarja: ‘ಹೆಣ್ಮಕ್ಕಳ ಮೇಲೆ ಗೌರವ ಜಾಸ್ತಿ ಆಗಿದೆ’; ಮಗಳು ಜನಿಸಿದ ಬಳಿಕ ಧ್ರುವ ಸರ್ಜಾ ಫಸ್ಟ್​ ರಿಯಾಕ್ಷನ್
Image
Dhruva Sarja: ನಾ ಅಣ್ಣನನ್ನು ತುಂಬಾ ಮಿಸ್ ಮಾಡ್ಕೊತ್ತಿದ್ದೀನಿ: ಖುಷಿಯ ನಡುವೆ ಧ್ರುವ ಸರ್ಜಾರ ನೋವು..!

ಇದನ್ನೂ ಓದಿ: ಏಕಾಏಕಿ ದೇಹದ ತೂಕ ಇಳಿಸಿಕೊಂಡ್ರೆ ಸೈಡ್ ಎಫೆಕ್ಟ್ ಆಗುತ್ತಾ? ಧ್ರುವ ಸರ್ಜಾ ಹೇಳಿದ್ದಿಷ್ಟು

ಈ ಫೋಟೋದಲ್ಲಿ ಧ್ರುವ ಸರ್ಜಾ ಪುತ್ರಿಯ ಮುಖ ಕಾಣಿಸಿಲ್ಲ. ಅದು ಅಭಿಮಾನಿಗಳಿಗೆ ಸ್ವಲ್ಪ ಬೇಸರ ಮೂಡಿಸಿದೆ. ‘ಮಗಳು ತುಂಬ ಕ್ಯೂಟ್​ ಆಗಿದ್ದಾಳೆ. ಆದರೆ ಮುಖ ಕಾಣುವಂತಹ ಫೋಟೋ ಹಾಕಿ’ ಎಂದು ಅಭಿಮಾನಿಗಳು ಕಮೆಂಟ್​ ಬಾಕ್ಸ್​ನಲ್ಲಿ ರಿಕ್ವೆಸ್ಟ್​ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪುತ್ರಿಯ ಮುಖ ಕಾಣುವಂತಹ ಫೋಟೋವನ್ನು ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿ ಹಂಚಿಕೊಳ್ಳುತ್ತಾರೆ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ನಿರೀಕ್ಷೆ ಮೂಡಿಸಿದ ‘ಮಾರ್ಟಿನ್’​ ಸಿನಿಮಾ:

ಮಾಸ್​ ಸಿನಿಮಾಗಳ ಮೂಲಕ ಧ್ರುವ ಸರ್ಜಾ ಅವರು ಫೇಮಸ್​ ಆಗಿದ್ದಾರೆ. ಅವರ ‘ಮಾರ್ಟಿನ್​’ ಸಿನಿಮಾ ಕೂಡ ಸಿಕ್ಕಾಪಟ್ಟೆ ಮಾಸ್​ ಆಗಿ ಮೂಡಿಬರುತ್ತಿದೆ. ಕೆಲವೇ ದಿನಗಳ ಹಿಂದೆ ಈ ಚಿತ್ರದ ಟೀಸರ್​ ಬಿಡುಗಡೆ ಆಯಿತು. ಅದರಲ್ಲಿ ಕಾಣಿಸಿದ ಮೇಕಿಂಗ್​ ಝಲಕ್​ ನೋಡಿ ಸಿನಿಪ್ರಿಯರು ಫಿದಾ ಆಗಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಅಬ್ಬರಿಸೋದು ಗ್ಯಾರಂಟಿ ಎಂದು ಧ್ರುವ ಫ್ಯಾನ್ಸ್​ ಅಭಿಪ್ರಾಯ ತಿಳಿಸುತ್ತಿದ್ದಾರೆ.

ಇದನ್ನೂ ಓದಿ: Dhruva Sarja: ‘ಹೆಣ್ಮಕ್ಕಳ ಮೇಲೆ ಗೌರವ ಜಾಸ್ತಿ ಆಗಿದೆ’; ಮಗಳು ಜನಿಸಿದ ಬಳಿಕ ಧ್ರುವ ಸರ್ಜಾ ಫಸ್ಟ್​ ರಿಯಾಕ್ಷನ್

ಸೂಪರ್​ ಹಿಟ್​ ಆಗಿದೆ ‘ಮಾರ್ಟಿನ್’​ ಟೀಸರ್​:

ಎ.ಪಿ. ಅರ್ಜುನ್​ ಅವರು ‘ಮಾರ್ಟಿನ್’​ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅವರ ಮತ್ತು ಧ್ರುವ ಸರ್ಜಾ ಕಾಂಬಿನೇಷನ್​ನಲ್ಲಿ ‘ಅದ್ದೂರಿ’ ಸಿನಿಮಾ ಮೂಡಿಬಂದಿತ್ತು. ಈಗ ‘ಮಾರ್ಟಿನ್​’ ಮೂಲಕ ಅವರಿಬ್ಬರು ಮತ್ತೆ ಕೈ ಜೋಡಿಸಿರುವುದು ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ. ಯೂಟ್ಯೂಬ್​ನಲ್ಲಿ ಈ ಸಿನಿಮಾದ ಟೀಸರ್​ 77 ಮಿಲಿಯನ್​ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:16 pm, Fri, 10 March 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?