Meghana Raj: ಧ್ರುವ ಸರ್ಜಾ ಬರ್ತ್​ಡೇಗೆ ವಿಶೇಷವಾಗಿ ವಿಶ್​ ಮಾಡಿದ ಮೇಘನಾ ರಾಜ್​

Meghana Raj: ಧ್ರುವ ಸರ್ಜಾ ಬರ್ತ್​ಡೇಗೆ ವಿಶೇಷವಾಗಿ ವಿಶ್​ ಮಾಡಿದ ಮೇಘನಾ ರಾಜ್​
ಧ್ರುವ-ಚಿರು- ಮೇಘನಾ ರಾಜ್

Happy Birthday Dhruva Sarja: ಮೇಘನಾ ರಾಜ್​ ಇನ್​ಸ್ಟಾಗ್ರಾಮ್​ನಲ್ಲಿ ‘ಹ್ಯಾಪಿ ಬರ್ತ್​ಡೇ BIL​’ ಎಂದು ವಿಶ್​ ಮಾಡಿದ್ದಾರೆ. BIL ಎನ್ನುವ ಪದ​ ಎಲ್ಲರ ಗಮನ ಸೆಳೆದಿದೆ. BIL ಎಂದರೆ ‘ಬ್ರದರ್​ ಇನ್​ ಲಾ’ ಎಂದರ್ಥ

TV9kannada Web Team

| Edited By: Rajesh Duggumane

Oct 06, 2021 | 6:14 PM

ಇಂದು (ಅಕ್ಟೋಬರ್​ 6) ಧ್ರುವ ಸರ್ಜಾ ಬರ್ತ್​ಡೇ. ಈ ವಿಶೇಷ ದಿನದ ಅಂಗವಾಗಿ ಅನೇಕ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಇನ್ನು, ಧ್ರುವ ಕುಟುಂಬದವರು ಕೂಡ ವಿಶೇಷವಾಗಿ ವಿಶ್​ ಮಾಡುತ್ತಿದ್ದಾರೆ. ಈಗ ಧ್ರುವ ಸರ್ಜಾಗೆ ಮೇಘನಾ ರಾಜ್​ ಅವರು ವಿಶೇಷವಾಗಿ ವಿಶ್​ ಮಾಡಿದ್ದಾರೆ.

ಚಿರಂಜೀವಿ ಸರ್ಜಾ ಮೃತಪಟ್ಟಾಗ ಮೇಘನಾ ರಾಜ್​ ತೀವ್ರವಾಗಿ ಕುಸಿದು ಹೋಗಿದ್ದರು. ಚಿರುವನ್ನು ಕಳೆದುಕೊಂಡಿದ್ದು ಧ್ರುವ ಅವರಿಗೂ ತೀವ್ರ ನೋವನ್ನು ತಂದಿತ್ತು. ಆದರೂ, ಮೇಘನಾ ರಾಜ್​ ಅವರನ್ನು ಧ್ರುವ ಅಣ್ಣನಂತೆ ನಿಂತು ಸಮಾಧಾನ ಪಡಿಸಿದ್ದರು. ಹೀಗಾಗಿ, ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇದೆ. ಇಂದು ಮೇಘನಾ ರಾಜ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ‘ಹ್ಯಾಪಿ ಬರ್ತ್​ಡೇ BIL​’ ಎಂದು ವಿಶ್​ ಮಾಡಿದ್ದಾರೆ. BIL ಎನ್ನುವ ಪದ​ ಎಲ್ಲರ ಗಮನ ಸೆಳೆದಿದೆ. BIL ಎಂದರೆ ‘ಬ್ರದರ್​ ಇನ್​ ಲಾ’ ಎಂದರ್ಥ.

ಮೇಘನಾ ಪಾಲಿಗೆ ಅಕ್ಟೋಬರ್​ ವಿಶೇಷ ತಿಂಗಳು. ಮೇಘನಾ ರಾಜ್​ ಪತಿ ಚಿರಂಜೀವಿ ಸರ್ಜಾ, ಮಗ ರಾಯನ್​ ರಾಜ್​ ಸರ್ಜಾ, ಭಾವ ಧ್ರುವ ಹುಟ್ಟಿದ್ದು ಅಕ್ಟೋಬರ್​ ತಿಂಗಳಲ್ಲೇ. ಕೇವಲ ಐದು ದಿನಗಳ ಅಂತರದಲ್ಲಿ ಇಬ್ಬರ ಜನ್ಮದಿನ ಬರಲಿದೆ. ಅಕ್ಟೋಬರ್​ 17 ಚಿರಂಜೀವಿ ಜನ್ಮದಿನ.​ ರಾಯನ್​ ಹುಟ್ಟಿದ್ದು ಅಕ್ಟೋಬರ್​ 22ರಂದು.

ಅದ್ದೂರಿ, ಬಹದ್ದೂರ್​, ಭರ್ಜರಿ, ಪೊಗರು ಸಿನಿಮಾಗಳ ಮೂಲಕ ಧ್ರುವ ತಮ್ಮದೇ ಛಾಪು ಮೂಡಿಸಿದ್ದಾರೆ. ಇಂದು (ಅಕ್ಟೋಬರ್ 6) ಧ್ರುವ ಹುಟ್ಟುಹಬ್ಬದ ಗಿಫ್ಟ್ ಆಗಿ ‘ಮಾರ್ಟಿನ್’ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಐದು ಭಾಷೆಯಲ್ಲಿ ಮಾರ್ಟಿನ್ ಪೋಸ್ಟರ್ ರಿಲೀಸ್ ಮಾಡಿದ ಚಿತ್ರತಂಡ ಆ ಮೂಲಕ ವಿಶೇಷವಾಗಿ ನಟ ಧ್ರುವ ಸರ್ಜಾ ಅವರಿಗೆ ಶುಭ ಹಾರೈಸಿದೆ. ಇನ್ನು ಸೆಲೆಬ್ರಿಟಿಗಳು, ಅಭಿಮಾನಿಗಳು, ಸ್ನೇಹಿತರಿಂದ ಧ್ರುವ ಸರ್ಜಾ ಅವರಿಗೆ ಬರ್ತ್​ಡೇ ವಿಶ್​ ಹರಿದುಬರುತ್ತಿದೆ.

ಇದನ್ನೂ ಓದಿ: ಮೇಘನಾ ರಾಜ್​ ಮಗ ರಾಯನ್​ ರಾಜ್​ ಸರ್ಜಾಗೆ 11ನೇ ತಿಂಗಳ ಸಂಭ್ರಮ; ಇಲ್ಲಿದೆ ವಿಡಿಯೋ

ಮೇಘನಾ ರಾಜ್​ಗೆ ಅಕ್ಟೋಬರ್​ ತಿಂಗಳು ಸ್ಪೆಷಲ್​; ವಿಶೇಷ ಪೋಸ್ಟ್​ ಹಂಚಿಕೊಂಡ ನಟಿ

Follow us on

Related Stories

Most Read Stories

Click on your DTH Provider to Add TV9 Kannada