AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್​ವುಡ್​ ಡ್ರಗ್​ ಕೇಸ್​​; ಮಾಡೆಲ್​ ಸೋನಿಯಾ ಬಂಧನ

ಡಿ.ಜೆ. ಹಳ್ಳಿ ಠಾಣೆಯಲ್ಲಿ ಸೋನಿಯಾ ಅವರ ವಿಚಾರಣೆ ನಡೆಸಲಾಯಿತು. ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಿದರೆ ಇನ್ನಷ್ಟು ಹೆಸರುಗಳು ಹೊರಬರುವ ಸಾಧ್ಯತೆ ಇದೆ.

ಸ್ಯಾಂಡಲ್​ವುಡ್​ ಡ್ರಗ್​ ಕೇಸ್​​; ಮಾಡೆಲ್​ ಸೋನಿಯಾ ಬಂಧನ
ಮಾಡೆಲ್​ ಸೋನಿಯಾ
TV9 Web
| Edited By: |

Updated on: Aug 30, 2021 | 6:45 PM

Share

ಡ್ರಗ್​ ಕೇಸ್​ಗೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಟ್ಟಿದ್ದ ಮಾಡೆಲ್​ ಸೋನಿಯಾ ಅವರನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಸೋನಿಯಾ ನಿವಾಸದಲ್ಲಿ ಪೊಲೀಸರಿಗೆ 40 ಗ್ರಾಂ ಗಾಂಜಾ ಪತ್ತೆ ಆಯಿತು. ಬೆಂಗಳೂರಿನ ರಾಜಾಜಿನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಸೋನಿಯಾ ಇರಲಿಲ್ಲ. ನಾಪತ್ತೆ ಆಗಿದ್ದ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದರು. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಪ್ರಯತ್ನ ಮಾಡಿದ ಸೋನಿಯಾ ಅವರು ಬಾಯ್​ಫ್ರೆಂಡ್​ ಜೊತೆ ಪರಾರಿ ಆಗಿದ್ದರು.

ದಾಳಿಯ ಸುಳಿವು ಸಿಗುತ್ತಿದ್ದಂತೆಯೇ ಸೋನಿಯಾ ಬೆಂಗಳೂರಿನ ಖಾಸಗಿ ಹೋಟೆಲ್​ಗೆ ತೆರಳಿದ್ದರು. ಪೊಲೀಸರ ಕಣ್ಣಿಗೆ ಮಣ್ಣೆರೆಚಲು ಅವರು ಪುರುಷರ ಶೌಚಾಲಯಕ್ಕೆ ತೆರಳಿ ಅಡಗಿಕೊಂಡಿದ್ದರು. ಅಂತಿಮವಾಗಿ ಮಹಿಳಾ ಕಾನ್ಸ್​ಟೇಬಲ್​ ಸಹಾಯದಿಂದ ಅವರನ್ನು ಹೊರಗೆ ಕರೆತರಲಾಯಿತು. ಮಾಧ್ಯಮದ ಮುಂದೆ ಬಂದರೆ ಮರ್ಯಾದೆ ಹೋಗುತ್ತದೆ ಎಂದು ಅವರು ಇಷ್ಟೆಲ್ಲ ಡ್ರಾಮಾ ಮಾಡಿದರು.

ಡಿ.ಜೆ. ಹಳ್ಳಿ ಠಾಣೆಯಲ್ಲಿ ಸೋನಿಯಾ ಅವರ ವಿಚಾರಣೆ ನಡೆಸಲಾಯಿತು. ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಿದರೆ ಇನ್ನಷ್ಟು ಹೆಸರುಗಳು ಹೊರಬರುವ ಸಾಧ್ಯತೆ ಇದೆ.

ಮಾದಕ ವಸ್ತು ಜಾಲದಲ್ಲಿ ತೊಡಗಿಕೊಂಡಿರುವವರನ್ನು ಮಟ್ಟಹಾಕಲು ಬೆಂಗಳೂರು ಪೊಲೀಸರು ಕಾರ್ಯಚರಣೆ ಆರಂಭಿಸಿದ್ದಾರೆ. ಈಗಾಗಲೇ ಸಿಕ್ಕಿಬಿದ್ದಿರುವ ಡ್ರಗ್​ ಪೆಡ್ಲರ್​ಗಳು ನೀಡಿದ ಮಾಹಿತಿ ಆಧರಿಸಿ ಸೋಮವಾರ (ಆ.30) ಬೆಳಗ್ಗೆಯೇ ಕೆಲವರ ಮನೆ ಮೇಲೆ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ದಾಳಿ ನಡೆಸಿದ್ದರು. ಮಾಡೆಲ್​ ಸೋನಿಯಾ, ಉದ್ಯಮಿ ಭರತ್​ ಹಾಗೂ ಡಿಜೆ ವಚನ್​ ಚಿನ್ನಪ್ಪ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಮಾದಕವಸ್ತುಗಳು ಪತ್ತೆ ಆಗಿತ್ತು.

ಪ್ರಕರಣದ ಬಗ್ಗೆ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್ ಅವರು ಹೇಳಿಕೆ ನೀಡಿದ್ದಾರೆ. ‘ರಾಜಕೀಯ ಒತ್ತಡಕ್ಕೆ ಪೊಲೀಸರು ಮಣಿಯುವುದಿಲ್ಲ. ಯಾರನ್ನೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪುರುಷರ ಟಾಯ್ಲೆಟ್​ನಲ್ಲಿ ಅಡಗಿ ಕುಳಿತಿದ್ದ ಡ್ರಗ್ಸ್​ ಆರೋಪಿ ಸೋನಿಯಾ; ಕಡೆಗೂ​ ಪೊಲೀಸ್​ ಬಲೆಗೆ ಬಿದ್ದ ಮಾಡೆಲ್​

Follow Us
TV9 Web
TV9 Web

TV9 Kannada

Read More
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ