AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥೈಲ್ಯಾಂಡ್​ ಫೋಟೋಗೆ ಕೆಟ್ಟದಾಗಿ ಕಮೆಂಟ್ ಮಾಡಿದವರಿಗೆ ಪಾಯಲ್ ಚೆಂಗಪ್ಪ ಖಡಕ್ ಉತ್ತರ

ಪಾಯಲ್ ಚೆಂಗಪ್ಪ ಅವರ ಥೈಲ್ಯಾಂಡ್ ಬ್ಯಾಕ್‌ಲೆಸ್ ಫೋಟೋಗೆ ಬಂದ ನಕಾರಾತ್ಮಕ ಕಮೆಂಟ್‌ಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ಬೀಚ್ ಡ್ರೆಸ್ ಮತ್ತು ಟ್ರೋಲ್‌ಗಳ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಇಂತಹ ಕಾಮೆಂಟ್‌ಗಳು ತಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳುವ ಮೂಲಕ, ಸೆಲೆಬ್ರಿಟಿಗಳು ಟೀಕೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ. ನಕಲಿ ಖಾತೆಗಳಿಂದ ಬರುವ ಕಮೆಂಟ್‌ಗಳನ್ನು ನಿರ್ಲಕ್ಷಿಸುವುದನ್ನು ಕಲಿತಿದ್ದಾರೆ.

ಥೈಲ್ಯಾಂಡ್​ ಫೋಟೋಗೆ ಕೆಟ್ಟದಾಗಿ ಕಮೆಂಟ್ ಮಾಡಿದವರಿಗೆ ಪಾಯಲ್ ಚೆಂಗಪ್ಪ ಖಡಕ್ ಉತ್ತರ
ಪಾಯಲ್
TV9 Web
| Edited By: |

Updated on: Apr 25, 2026 | 7:46 AM

Share

ಪಾಯಲ್ ಚೆಂಗಪ್ಪ ಅವರು (Payal) ಇತ್ತೀಚೆಗೆ ಥೈಲ್ಯಾಂಡ್​​ಗೆ ತೆರಳಿದ್ದರು. ಅಲ್ಲಿ ಬ್ಯಾಕ್​​ಲೆಸ್ ಫೋಟೋ ಹಾಕಿ ಗಮನ ಸೆಳೆದಿದ್ದರು. ಈ ಫೋಟೋಗೆ ಸಾಕಷ್ಟು ಲೈಕ್ಸ್ ಸಿಕ್ಕಿವೆ. ಅವರನ್ನು ಬೋಲ್ಡ್ ಅವತಾರದಲ್ಲಿ ನೋಡಿ ಅನೇಕರಿಗೆ ಅಚ್ಚರಿ ಆಗಿದೆ. ಇನ್ನೂ ಕೆಲವರು ನೆಗೆಟಿವ್ ಕಮೆಂಟ್ ಮಾಡುವ ಕೆಲಸ ಮಾಡಿದ್ದಾರೆ. ಇದಕ್ಕೆ ಪಾಯಲ್ ಖಡಕ್ ಆಗಿ ಉತ್ತರಿಸಿದ್ದಾರೆ. ಅವರು ಟೀಕೆ ಮಾಡುವವರಿಗೆ ಸರಿಯಾಗಿ ಉತ್ತರ ಕೊಟ್ಟಿದ್ದಾರೆ. ಈ ರೀತಿಯ ಕಮೆಂಟ್​​ಗಳು ಅವರ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲವಂತೆ.

ಹೀರೋಯಿನ್​​ಗಳು ಥೈಲ್ಯಾಂಡ್ ಮೊದಲಾದ ಕಡೆಗಳಲ್ಲಿ ತೆರಳಿ ಬೀಚ್​​ಗಳಲ್ಲಿ ನಿಂತು ಪೋಸ್ ಕೊಡುತ್ತಾರೆ. ಕೆಲವರು ಬೋಲ್ಡ್ ಆಗಿ ಕಾಣಿಸುತ್ತಾರೆ. ಈ ಫೋಟೋಗಳನ್ನು ಹಂಚಿಕೊಳ್ಳುವುದರಲ್ಲಿ ಅವರಿಗೆ ಯಾವುದೇ ಹಿಂಜರಿಕೆ ಇರುವುದಿಲ್ಲ. ಆದರೆ, ಕೆಲವೊಮ್ಮೆ ಈ ಫೋಟೋಗಳ ಕಾರಣಕ್ಕೆ ಅವರು ಟೀಕೆ ಎದುರಿಸಬೇಕಾಗುತ್ತದೆ. ಈ ಟೀಕೆಗಳನ್ನು ಎಲ್ಲರೂ ಒಂದೇ ರೀತಿಯಲ್ಲಿ ತೆಗೆದುಕೊಳ್ಳುವುದಿಲ್ಲ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೇನೆ ಎಂದು ಪಾಯಲ್ ವಿವರಿಸಿದ್ದಾರೆ.

ಅದು ಬೀಚ್ ಡ್ರೆಸ್ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ ಪಾಯಲ್. ‘ಅದು ಬಿಕಿನಿ ಕೂಡ ಆಗಿರಲಿಲ್ಲ, ಬ್ಯಾಕ್​​ಲೆಸ್ ಟಾಪ್ ಆಗಿತ್ತು’ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ. ಸಾಕಷ್ಟು ಟ್ರೆಡಿಷನಲ್ ಫೋಟೋಗಳನ್ನು ಹಾಕಿದಾಗ ಯಾರೊಬ್ಬರೂ ಕಮೆಂಟ್ ಮಾಡದೆ, ಈ ರೀತಿಯ ಫೋಟೋ ಹಾಕಿದಾಗಷ್ಟೇ ಎಲ್ಲರೂ ಎದ್ದು ಬರೋದು ಏಕೆ ಎಂಬುದು ಪಾಯಲ್ ಪ್ರಶ್ನೆ ಮಾಡಿದ್ದಾರೆ.

ಇತ್ತೀಚೆಗೆ ನಕಲಿ ಖಾತೆ ಸೃಷ್ಟಿ ಮಾಡಿಕೊಂಡು ಕಮೆಂಟ್ ಹಾಕುವವರ ಸಂಖ್ಯೆ ಹೆಚ್ಚಿದೆ. ಈಗಲೂ ಅದೇ ಆಗಿದೆ ಎಂದು ಪಾಯಲ್ ಹೇಳುತ್ತಾರೆ. ಕಾಲೆಳೆಯುವ ಉದ್ದೇಶದಿಂದ ಈ ರೀತಿಯ ಖಾತೆ ಮಾಡಿಕೊಂಡು ಕಮೆಂಟ್ ಹಾಕುತ್ತಾರೆ ಎಂದು ಅವರು ಬಲವಾಗಿ ನಂಬುತ್ತಾರೆ. ಈ ಕಾರಣಕ್ಕೆ ಅವರು ಈ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಳ್ಳುವುದಿಲ್ಲ.

ಕೆಲವು ಸೆಲೆಬ್ರಿಟಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಆದರೆ, ಪಾಯಲ್ ಆ ರೀತಿ ಅಲ್ಲ. ಈ ರೀತಿಯ ಪರಿಸ್ಥಿತಿಯನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂಬುದು ಅವರಿಗೆ ಗೊತ್ತಿದೆಯಂತೆ. ಈ ಕಾರಣದಿಂದ ಅವರಿಗೆ ಇದು ಒತ್ತಡ ತರುವುದಿಲ್ಲ.

ಇದನ್ನೂ ಓದಿ: ಥೈಲ್ಯಾಂಡ್​ ಬೀಚ್​​ನಲ್ಲಿ ಮಿಂಚಿದ ನಟಿ ಪಾಯಲ್ ಚೆಂಗಪ್ಪ; ಇಲ್ಲಿವೆ ಫೋಟೋಸ್

ಪಾಯಲ್ ಅವರು ‘ಜೆರಾಕ್ಸ್’ ಹೆಸರಿನ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ನಾಗಭೂಷಣ್ ಮೊದಲಾದವರು ಇದರಲ್ಲಿ ನಟಿಸಿದ್ದು, ಜೀ5ನಲ್ಲಿ ಇದು ಪ್ರಸಾರ ಆರಂಭಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Web contact
Web contact

TV9 Kannada

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?