ರೇಣುಕಾ ಸ್ವಾಮಿ ಅಶ್ಲೀಲ ಮೆಸೇಜ್ಗೆ ಪವಿತ್ರಾ ಗೌಡ ಮಾಡಿದ ರಿಪ್ಲೇ ಏನು? ಪೊಲೀಸರಿಗೆ ಸಿಕ್ತು ಪಕ್ಕಾ ಮಾಹಿತಿ
ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದರಿಂದಲೇ ಈ ದುರಂತ ನಡೆಯಿತು. ಹಾಗಾದರೆ ಆ ಮೆಸೇಜ್ ಏನು ಹಾಗೂ ಅದಕ್ಕೆ ಪವಿತ್ರಾ ಗೌಡ ಯಾವ ರೀತಿ ಪ್ರತಿಕ್ರಿಯೆ ನೀಡಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ರೇಣುಕಾ ಸ್ವಾಮಿ ಮೊಬೈಲ್ ರಿಟ್ರೀವ್ ಮಾಡಿದ ಬಳಿಕ ಎಲ್ಲ ವಿವರಗಳು ಪೊಲೀಸರಿಗೆ ಸಿಕ್ಕಿವೆ.
ದೇಶಾದ್ಯಂತ ಸುದ್ದಿಯಾದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಹಾಗೂ ಸಹಚರರು ಜೈಲುವಾಸ ಅನುಭವಿಸುತ್ತಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿಯು ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣದಿಂದಲೇ ಈ ಕಿರಿಕ್ ಶುರುವಾಗಿದ್ದು. ಅಂತಿಮವಾಗಿ ಅದು ಕೊಲೆಯಲ್ಲಿ ಅಂತ್ಯವಾಯ್ತು. ಇಡೀ ದುರಂತಕ್ಕೆ ಕಾರಣವಾದ ಆ ಮೆಸೇಜ್ಗಳು ಯಾವವು ಎಂಬುದು ಈಗ ಪೊಲೀಸರಿಗೆ ಲಭ್ಯವಾಗಿವೆ. ಈ ಹೈಪ್ರೊಫೈಲ್ ಕೇಸ್ಗೆ ಪ್ರಮುಖ ಸಾಕ್ಷಿಯಾಗಿ ಈ ಮಾಹಿತಿ ಸಿಕ್ಕಿದೆ. ಸದ್ಯ ತನಿಖೆ ಪ್ರಗತಿಯಲ್ಲಿದೆ.
ಕೊಲೆ ಕೇಸ್ನಲ್ಲಿ ಎ1 ಪವಿತ್ರಾ ಗೌಡ, ಎ2 ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಬಲವಾದ ಸಾಕ್ಷಿ ಸಿಕ್ಕಂತಾಗಿದೆ. ತನಿಖೆ ನಡೆಸುತ್ತಿರುವ ಪೊಲೀಸರು ಅನೇಕ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಕೊಲೆ ನಡೆದ ಬಳಿಕ ರೇಣುಕಾ ಸ್ವಾಮಿ ಮೊಬೈಲ್ ಅನ್ನು ಡಿ ಗ್ಯಾಂಗ್ನವರು ಮೋರಿಯಲ್ಲಿ ಎಸೆದಿದ್ದರು. ಆ ಮೊಬೈಲ್ಗಾಗಿ ಪೊಲೀಸರು ಸಿಕ್ಕಾಪಟ್ಟೆ ಹುಡುಕಾಟ ನಡೆಸಿದ್ದರು. ಕಡೆಗೂ ಪೊಲೀಸರಿಗೆ ಆ ಮೊಬೈಲ್ನಲ್ಲಿದ್ದ ಸಂಪೂರ್ಣ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ದರ್ಶನ್ ಮನೆ ಸಿಸಿಟಿವಿಯಲ್ಲಿ ಶಾಕಿಂಗ್ ವಿಚಾರ ಬಯಲು; ಕೊಲೆ ಕೇಸ್ನಲ್ಲಿ ನಟನಿಗೆ ಹೆಚ್ಚಿತು ಸಂಕಷ್ಟ
ರೇಣುಕಾ ಸ್ವಾಮಿಯ ಮೊಬೈಲ್ ರಿಟ್ರೀವ್ನಿಂದಾಗಿ ದರ್ಶನ್ಗೆ ಕಂಟಕ ಎದುರಾಗಿದೆ. ರೇಣುಕಾ ಸ್ವಾಮಿ ಬಳಸಿದ್ದ ನಂಬರ್ನಲ್ಲೇ ಹೊಸ ಸಿಮ್ ಪಡೆದುಕೊಂಡು ಡೇಟಾ ರಿಟ್ರೀವ್ ಮಾಡಲಾಯಿತು. ಆತ ಬಳಕೆ ಮಾಡಿದ್ದ ವಾಟ್ಸಪ್ ,ಇನ್‌ಸ್ಟಾಗ್ರಾಂ, ಫೇಸ್ ಬುಕ್ ಮುಂತಾದ ಆ್ಯಪ್ಗಳ ಮಾಹಿತಿ ಈಗ ಪೊಲೀಸರ ಕೈ ಸೇರಿದೆ. ಯಾರಿಗೆಲ್ಲ ಆತ ಸಂದೇಶ ಕಳಿಸಿದ್ದ? ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಕಳಿಸಿದ ಮೆಸೇಜ್ ಏನು? ಅದಕ್ಕೆ ಪವಿತ್ರಾ ನೀಡಿದ್ದ ರಿಪ್ಲೇ ಏನು ಎಂಬುದು ಪೊಲೀಸರಿಗೆ ಗೊತ್ತಾಗಿದೆ.
ಇದನ್ನೂ ಓದಿ: ದರ್ಶನ್ ಜೈಲುವಾಸ ಮುಂದುವರಿಯಲು ಪೊಲೀಸರು ಕೋರ್ಟ್ಗೆ ನೀಡಿದ ಮುಖ್ಯ ಕಾರಣಗಳು ಇಲ್ಲಿವೆ..
ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಮೇಜರ್ ಸಾಕ್ಷಿ ಆಗಲಿದೆ. ಜೊತೆಗೆ, ವಾಹನದಲ್ಲಿ ಮೃತದೇಹ ಸಾಗಾಟ ಮಾಡಿದ್ದವರ ಫಿಂಗರ್ ಪ್ರಿಂಟ್ ಹೊಂದಿಕೆ ಆಗಿದೆ. ಕೊಲೆಯಾದ ಮೂರು ದಿನಗಳ ಸಿಸಿಟಿವಿ ದೃಶ್ಯಗಳನ್ನು ಕೂಡ ರಿಟ್ರೀವ್ ಮಾಡಲಾಗಿದೆ. ದರ್ಶನ್ ಮನೆಗೆ ಸಿಸಿಟಿವಿಯಲ್ಲಿ ಜೂನ್ 8, 9 ಹಾಗೂ 10ರಂದು ಸೆರೆಯಾದ ದೃಶ್ಯಗಳನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ. ಸಾಕ್ಷಿ ನಾಶದ ಉದ್ದೇಶದಿಂದ ಡಿಲೀಟ್ ಆಗಿದ್ದ ದೃಶ್ಯಗಳೆಲ್ಲ ಪೊಲೀಸರಿಗೆ ಸಿಕ್ಕಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.