AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಂಬಂಧಿಕರೇ ಏನೇನೋ ಮಾತನಾಡೋ ಈ ಕಾಲದಲ್ಲಿ, ಇನ್ನು ಇವರೆಲ್ಲ..’;  ರಚಿತಾ ರಾಮ್

ನಟಿ ರಚಿತಾ ರಾಮ್ ಅವರ ಮೇಲೆ ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಪ್ರಚಾರಕ್ಕೆ ಬಾರದಿರುವುದು ಚರ್ಚೆ ಆಗಿದೆ. ‘ಉಪ್ಪಿ ರಪ್ಪಿ’ ತಂಡದೊಂದಿಗಿನ ವಿವಾದದ ಕುರಿತು ದೂರು ದಾಖಲಾಗಿದೆ. ಈ ಮಧ್ಯೆ ರಚಿತಾ ಅವರು ಹಿಂದೆ ನೀಡಿದ ಸಂದರ್ಶನದ ಭಾಗಗಳು ವೈರಲ್ ಆಗುತ್ತಿವೆ. ಅವರ ಮೌನಕ್ಕೆ ಕಾರಣಗಳ ಕುರಿತು ಚರ್ಚೆ ನಡೆಯುತ್ತಿದೆ.

‘ಸಂಬಂಧಿಕರೇ ಏನೇನೋ ಮಾತನಾಡೋ ಈ ಕಾಲದಲ್ಲಿ, ಇನ್ನು ಇವರೆಲ್ಲ..’;  ರಚಿತಾ ರಾಮ್
ರಚಿತಾ ರಾಮ್
ರಾಜೇಶ್ ದುಗ್ಗುಮನೆ
|

Updated on: Jun 19, 2025 | 12:34 PM

Share

ರಚಿತಾ ರಾಮ್ ಅವರು ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ರೀ ರಿಲೀಸ್ ಆದಾಗ ಪ್ರಚಾರಕ್ಕೆ ಬಂದಿಲ್ಲ ಎಂದು ನಿರ್ದೇಶಕ ನಾಗಶೇಖರ್ ಅವರು ಫಿಲ್ಮ್ ಚೇಂಬರ್​ಗೆ ದೂರು ನೀಡಿದ್ದಾರೆ. ಅವರ ದೂರನ್ನು ಚಲನಚಿತ್ರ ಮಂಡಳಿ ಮನ್ನಿಸಿದ್ದು, ಸೂಕ್ತ ವಿಚಾರಣೆ ನಡೆಸೋದಾಗಿ ಹೇಳಿದೆ. ಈ ಮಧ್ಯೆ ‘ಉಪ್ಪಿ ರಪ್ಪಿ’ ತಂಡ ಕೂಡ ರಚಿತಾ ಅವರಿಂದ ತಮಗೆ ಸಮಸ್ಯೆ ಆಗಿದೆ ಎಂದು ಹೇಳಿಕೊಂಡಿದೆ. ಈ ಮಧ್ಯೆ ರಚಿತಾ ಅವರು ನೀಡಿದ್ದ ಹಳೆಯ ಸಂದರ್ಶನದ ಡೈಲಾಗ್​​ಗಳನ್ನು ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ.

ರಚಿತಾ ರಾಮ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಇದರ ಜೊತೆಗೆ ಅವರು ಕೆಲವು ವಿವಾದಗಳನ್ನು ಕೂಡ ಮೈ ಮೇಲೆ ಎಳೆದುಕೊಂಡಿದ್ದಾರೆ. ಈ ಮೊದಲು ಅವರ ಹೆಸರು ರಾಜಕೀಯ ನಾಯಕರ ಜೊತೆ ತಳುಕು ಹಾಕಿಕೊಂಡಿತ್ತು. ಆ ಸಂದರ್ಭದಲ್ಲಿ ಮಾತನಾಡಿದ್ದ ರಚಿತಾ ರಾಮ್ ಅವರು, ಈ ವದಂತಿಯನ್ನು ನೇರವಾಗಿ ತಳ್ಳಿ ಹಾಕಿದ್ದರು.

‘ತಂದೆ, ತಾಯಿ, ಒಡ ಹುಟ್ಟಿದ್ದವರು ಬಿಟ್ಟರೆ ಸಂಬಂಧಿಕರೇ ನಮ್ಮ ಬಗ್ಗೆ ಮಾತನಾಡುತ್ತಾರೆ. ನಾವು ನಮ್ಮ ಕೆಲಸ ಮಾಡಬೇಕು. ಅವಶ್ಯಕತೆ ಇದ್ದಲ್ಲಿ ಮಾತ್ರ ಮಾತನಾಡುತ್ತೇನೆ’ ಎಂದು ರಚಿತಾ ರಾಮ್ ಅವರು ಆ ಸಂದರ್ಭದಲ್ಲಿ ಹೇಳಿದ್ದರು. ಈಗ ಅವರು ಮೌನವಾಗಿರಲು ಕೂಡ ಇದೇ ಕಾರಣವೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ
Image
ಖ್ಯಾತ ನಟ ಆಶಿಶ್ ವಿದ್ಯಾರ್ಥಿ ಫುಡ್ ವ್ಲಾಗರ್ ಆಗಿದ್ದೇಕೆ?
Image
ಪ್ರೆಗ್ನೆಂಟ್ ಕಿಯಾರಾಗೆ ವಿಶೇಷ ಸಹಾಯ ಮಾಡಿದ ಯಶ್; ಆಹಾ ಎಷ್ಟೊಳ್ಳೆ ಮನಸ್ಸು
Image
ಭಾರತದ ಸಿನಿಮಾ ಇತಿಹಾಸದಲ್ಲೇ ದುಬಾರಿ ಸೆಟ್ ನಿರ್ಮಿಸಿದ ರಾಜಮೌಳಿ
Image
ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಧನರಾಜ್, ಪತ್ನಿ

‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಈ ಮೊದಲು ರಿಲೀಸ್ ಆಗಿತ್ತು. ಆ ಸಂದರ್ಭದಲ್ಲಿ ರಚಿತಾ ಅವರು ಪ್ರಚಾರಕ್ಕೆ ಬಂದಿದ್ದರು. ಎರಡನೇ ಬಾರಿ ಸಿನಿಮಾ ರಿಲೀಸ್ ಆಗುತ್ತಿದೆ ಎಂದಾಗ ಅವರು ಪ್ರಚಾರಕ್ಕೆ ಬರಲು ನಿರಾಕರಿಸಿರಬಹುದು. ಇದು ರಚಿತಾ ರಾಮ್​ಗೆ ಸರಿ ಎನಿಸಿರಬಹುದು. ಈ ಕಾರಣದಿಂದಲೇ ಅವರು ಮೌನ ತಾಳಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ

ರಚಿತಾ ರಾಮ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸದ್ಯದ ವಿವಾದದ ಬಗ್ಗೆ ಅವರು ವಿಡಿಯೋ ಮಾಡಿ ಹರಿಬಿಡಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ರಚಿತಾ ಪರ ಅವರ ಅಭಿಮಾನಿಗಳು ಬ್ಯಾಟ್ ಬೀಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.