AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Upendra: ಉಪ್ಪಿ ಹುಟ್ಟುಹಬ್ಬಕ್ಕೆ ರಾಮ್ ಗೋಪಾಲ್ ವರ್ಮಾ ನೀಡಿದ್ರು ಬಿಗ್ ಸರ್ಪ್ರೈಸ್; ಸುದ್ದಿ ಕೇಳಿ ಥ್ರಿಲ್ ಆದ ಅಭಿಮಾನಿಗಳು

Upendra Rao: ಉಪೇಂದ್ರ ಅವರ ಜನ್ಮದಿನಕ್ಕೆ ಅಭಿಮಾನಿಗಳಿಗೆ ಸರ್ಪ್ರೈಸ್ ಸುದ್ದಿಯೊಂದು ಎದುರಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

Upendra: ಉಪ್ಪಿ ಹುಟ್ಟುಹಬ್ಬಕ್ಕೆ ರಾಮ್ ಗೋಪಾಲ್ ವರ್ಮಾ ನೀಡಿದ್ರು ಬಿಗ್ ಸರ್ಪ್ರೈಸ್; ಸುದ್ದಿ ಕೇಳಿ ಥ್ರಿಲ್ ಆದ ಅಭಿಮಾನಿಗಳು
ರಾಮ್ ಗೋಪಾಲ್ ವರ್ಮಾ, ಉಪೇಂದ್ರ (Credits: Ram Gopal Varma/ Twitter)
TV9 Web
| Updated By: shivaprasad.hs|

Updated on:Sep 18, 2021 | 2:55 PM

Share

ಸ್ಯಾಂಡಲ್​ವುಡ್ ರಿಯಲ್ ಸ್ಟಾರ್ ಉಪೇಂದ್ರ ಇಂದು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಪ್ರಯುಕ್ತ ಅವರ ಹೊಸ ಸಿನಿಮಾಗಳು ಅನೌನ್ಸ್ ಆಗುತ್ತಿವೆ. ಹಾಗೆಯೇ ಅವರು ನಟಿಸುತ್ತಿರುವ ಚಿತ್ರಗಳ ಪೋಸ್ಟರ್, ಟೀಸರ್ ಕೂಡ ಬಿಡುಗಡೆಯಾಗಲಿವೆ. ಎಲ್ಲವುಗಳಿಗಿಂತ ಅಭಿಮಾನಿಗಳು ಹೆಚ್ಚು ಕುತೂಹಲದಿಂದ ಕಾಯುತ್ತಿರುವುದು ಉಪ್ಪಿ ನಿರ್ದೇಶನಕ್ಕೆ ಕಮ್​ಬ್ಯಾಕ್ ಮಾಡುತ್ತಿರುವ ಕುರಿತ ಅಪ್ಡೇಟ್​ಗೆ. ಹೊಸ ಚಿತ್ರದ ಕುರಿತು ಮಾಹಿತಿ ನೀಡುವುದಾಗಿ ಉಪ್ಪಿ ಈ ಹಿಂದೆಯೇ ತಿಳಿಸಿದ್ದಾರೆ. ಇದೀಗ ಅಭಿಮಾನಿಗಳಿಗೆ ಸರ್ಪ್ರೈಸ್ ಒಂದು ಎದುರಾಗಿದೆ. ಹೌದು. ಬಾಲಿವುಡ್, ಟಾಲಿವುಡ್​ನ ಹಿಟ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಉಪ್ಪಿ ಜೊತೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.

ಆರ್​ಜಿವಿ ಟ್ವಿಟರ್​ನಲ್ಲಿ ಸದಾ ಆಕ್ಟಿವ್ ಇರುತ್ತಾರೆ. ಅಲ್ಲಿ ತಮ್ಮ ಮುಂದಿನ ಯೋಜನೆಗಳ ಕುರಿತಾಗಿಯೂ ಅವರು ಮಾಹಿತಿ ಹಂಚಿಕೊಳ್ಳುತ್ತಾರೆ. ಇದೀಗ ಉಪೇಂದ್ರ ಅವರ ಜನ್ಮದಿನಕ್ಕೆ ಶುಭಾಶಯಗಳನ್ನು ತಿಳಿಸಿರುವ ಅವರು, ಅಭಿಮಾನಿಗಳಿಗೆ ಸರ್ಪ್ರೈಸ್ ಸುದ್ದಿಯನ್ನೂ ನೀಡಿದ್ದಾರೆ. ಅದೇನೆಂದರೆ, ಉಪೇಂದ್ರ ಹಾಗೂ ಆರ್​ಜಜಿವಿ ಕಾಂಬಿನೇಷನ್​ನಲ್ಲಿ ಹೊಸ ಆಕ್ಷನ್ ಚಿತ್ರವೊಂದು ಮೂಡಿಬರಲಿದೆ. ಅದನ್ನು ಸದ್ಯದಲ್ಲಿಯೇ ಪ್ರಾರಂಭಿಸುವುದಾಗಿಯೂ ಆರ್​ಜಿವಿ ಘೋಷಿಸಿದ್ದಾರೆ. ಅಚ್ಚರಿಯ ಈ ಸುದ್ದಿಗೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಆರ್​ಜಿವಿ ಹಂಚಿಕೊಂಡಿರುವ ಟ್ವೀಟ್:

 ಇಂದು ಬಿಡುಗಡೆಯಾಗಲಿದೆ ‘ಕಬ್ಜ’ ಚಿತ್ರದ ಮೋಷನ್ ಪೋಸ್ಟರ್:

ಉಪೇಂದ್ರ ವೃತ್ತಿ ಜೀವನದಲ್ಲಿಯೇ ವಿನೂತನ ಮಾದರಿಯ ಚಿತ್ರವಾಗಿರುವ ‘ಕಬ್ಜ’ ಚಿತ್ರತಂಡವೂ ಕೂಡ ಚಿತ್ರದ ಕುರಿತ ಬಹುದೊಡ್ಡ ಅಪ್ಡೇಟ್ ನೀಡಲಿದೆ. ಚಿತ್ರದ ಮೋಷನ್ ಪೋಸ್ಟರ್​​ ಬಿಡುಗಡೆಗೊಳಿಸಲು ಚಿತ್ರದ ನಿರ್ದೇಶಕ ಆರ್​.ಚಂದ್ರು ನಿರ್ಧರಿಸಿದ್ಧಾರೆ. ಜೊತೆಗೆ ಚಿತ್ರದ ಟೀಸರ್ ಬಿಡುಗಡೆಯ ದಿನಾಂಕವನ್ನೂ ಇಂದು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಕೂಡ ಬಣ್ಣ ಹಚ್ಚುತ್ತಿದ್ದು, ಅಭಿಮಾನಿಗಳು ಈಗಾಗಲೇ ಚಿತ್ರದ ಪೋಸ್ಟರ್ ನೋಡಿ ಫಿದಾ ಆಗಿದ್ದಾರೆ.

ಉಪೇಂದ್ರ ಉಪ್ಪಿ 2 ನಿರ್ದೇಶನದ ನಂತರ ಮತ್ತೆ ಟೈರೆಕ್ಷನ್ ಕ್ಯಾಪ್ ತೊಡಲಿದ್ದು, ಆ ಚಿತ್ರ ಕೂಡ ಇಂದು ಅನೌನ್ಸ್ ಆಗಲಿದೆ. ಹಾಗಾಗಿ ಇಂದು ಉಪ್ಪಿ ಅಭಿಮಾನಿಗಳು ಬಹಳ ಕಾತರದಿಂದ ಆ ಕ್ಷಣಕ್ಕೆ ಕಾಯುತ್ತಿದ್ದಾರೆ.

ಇದನ್ನೂ ಓದಿ:

Vishnuvardhan Birthday: ವಿಷ್ಣುವರ್ಧನ್ ಕುರಿತ ಅಪರೂಪದ ಸಂಗತಿಗಳು ಹಾಗೂ ಅವರು ಪಡೆದ ಪ್ರಶಸ್ತಿಗಳ ವಿವರ ಇಲ್ಲಿವೆ

ಸಲ್ಮಾನ್​ ಖಾನ್​ ಮಾಡಿದ 30 ಸೆಕೆಂಡ್​ ಕೆಲಸಕ್ಕೆ 50 ಲಕ್ಷ ರೂ. ಸಂಬಳ; ಸಲ್ಲು ಬರೆದಿದ್ದು ಒಂದೇ ವಾಕ್ಯ

(Ram Gopal Varma announces his new film with Upendra on his birthday)

Published On - 11:03 am, Sat, 18 September 21

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ