AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rathnan Prapancha: ಡಾಲಿ ಧನಂಜಯ​ ಕೆಲಸಕ್ಕೆ ರಮ್ಯಾ ಮೆಚ್ಚುಗೆ; ಚಿತ್ರರಂಗದತ್ತ ಹೆಚ್ಚುತ್ತಿದೆ ಸ್ಯಾಂಡಲ್​ವುಡ್​ ಕ್ವೀನ್​ ಆಸಕ್ತಿ

Ramya Divya Spandana: ಕನ್ನಡ ಚಿತ್ರರಂಗದಲ್ಲಿ ತಯಾರಾಗುತ್ತಿರುವ ಎಲ್ಲ ಸಿನಿಮಾಗಳ ಮೇಲೂ ರಮ್ಯಾ ಒಂದು ಕಣ್ಣು ಇಟ್ಟಂತಿದೆ. ದಿನದಿಂದ ದಿನಕ್ಕೆ ಅವರು ಸ್ಯಾಂಡಲ್​ವುಡ್​ ಸಿನಿಮಾಗಳ ಮೇಲೆ ತೋರುತ್ತಿರುವ ಆಸಕ್ತಿ ಹೆಚ್ಚುತ್ತಿದೆ.

Rathnan Prapancha: ಡಾಲಿ ಧನಂಜಯ​ ಕೆಲಸಕ್ಕೆ ರಮ್ಯಾ ಮೆಚ್ಚುಗೆ; ಚಿತ್ರರಂಗದತ್ತ ಹೆಚ್ಚುತ್ತಿದೆ ಸ್ಯಾಂಡಲ್​ವುಡ್​ ಕ್ವೀನ್​ ಆಸಕ್ತಿ
ರಮ್ಯಾ, ಡಾಲಿ ಧನಂಜಯ
TV9 Web
| Edited By: |

Updated on: Oct 16, 2021 | 7:53 AM

Share

ನಟಿ ರಮ್ಯಾ ಅವರು ನಟನೆಯಿಂದ ದೂರ ಉಳಿದುಕೊಂಡು ತುಂಬ ಕಾಲ ಆಗಿದೆ. ಆದರೂ ಅವರು ಚಿತ್ರರಂಗದ ಜೊತೆ ನಂಟು ಇಟ್ಟುಕೊಂಡಿದ್ದಾರೆ. ಇತ್ತೀಚೆಗಂತೂ ಅನೇಕ ಸಿನಿಮಾಗಳ ಬಗ್ಗೆ ಅವರು ಆಸಕ್ತಿ ತೋರಿಸುತ್ತಿದ್ದಾರೆ. ಈಗ ಡಾಲಿ ಧನಂಜಯ ನಟನೆಯ ‘ರತ್ನನ್​ ಪ್ರಪಂಚ’ ಸಿನಿಮಾ ಟ್ರೇಲರ್​ ನೋಡಿ ಅವರು ಸಖತ್​ ಇಷ್ಟಪಟ್ಟಿದ್ದಾರೆ. ಇದು ಧನಂಜಯ ಅಭಿಮಾನಿಗಳಿಗೆ ಖುಷಿ ನೀಡಿದೆ.

ಕನ್ನಡ ಚಿತ್ರರಂಗದಲ್ಲಿ ತಯಾರಾಗುತ್ತಿರುವ ಎಲ್ಲ ಸಿನಿಮಾಗಳ ಮೇಲೂ ರಮ್ಯಾ ಒಂದು ಕಣ್ಣು ಇಟ್ಟಂತಿದೆ. ದಿನದಿಂದ ದಿನಕ್ಕೆ ಅವರು ಸ್ಯಾಂಡಲ್​ವುಡ್​ ಸಿನಿಮಾಗಳ ಮೇಲೆ ತೋರುತ್ತಿರುವ ಆಸಕ್ತಿ ಹೆಚ್ಚುತ್ತಿದೆ. ರಾಜಕೀಯಕ್ಕೆ ಗುಡ್​ಬೈ ಹೇಳಿದ ಬಳಿಕ ಅವರು ಸಿನಿಮಾಗಳತ್ತ ಗಮನ ಹರಿಸುವುದನ್ನು ಹೆಚ್ಚು ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ‘ನಿನ್ನ ಸನಿಹಕೆ’ ಮತ್ತು ‘ಕೋಟಿಗೊಬ್ಬ 3’ ಸಿನಿಮಾಗಳ ಟ್ರೇಲರ್​ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಈಗ ಅವರಿಗೆ ‘ರತ್ನನ್ ಪ್ರಪಂಚ’ ಟ್ರೇಲರ್​ ಮೆಚ್ಚುಗೆ ಆಗಿದೆ. ಅದನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ವ್ಯಕ್ತಪಡಿಸಿದ್ದಾರೆ.

‘ನನಗೆ ನಗು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಈ ಸಿನಿಮಾ ನೋಡಲು ಕಾಯುತ್ತಿದ್ದೇನೆ. ಧನಂಜಯ​ ಸೂಪರ್​. ಅನು ಪ್ರಭಾಕರ್​, ವೈನಿಧಿ ಜಗದೀಶ್​, ಉಮಾಶ್ರೀ, ಶ್ರುತಿ, ಅಚ್ಯುತ್​ ಕುಮಾರ್​ ಇವರೆಲ್ಲ ಅದ್ಭುತ ಕಲಾವಿದರು. ನಿರ್ಮಾಪಕರಾದ ಕಾರ್ತಿಕ್​ ಮತ್ತು ಯೋಗಿ ಜಿ. ರಾಜ್​ಗೆ ಗೆಲುವು’ ಎಂದು ರಮ್ಯಾ ಬರೆದುಕೊಳ್ಳುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಚಿತ್ರಕ್ಕೆ ರೋಹಿತ್​ ಪದಕಿ ನಿರ್ದೇಶನ ಮಾಡಿದ್ದಾರೆ. ಅಜನೀಶ್​ ಬಿ. ಲೋಕನಾಥ್​ ಸಂಗೀತ ನಿರ್ದೇಶನ, ಶ್ರೀಶ ಕುದುವಳ್ಳಿ ಛಾಯಾಗ್ರಹಣ, ದೀಪು ಎಸ್​. ಕುಮಾರ್​ ಸಂಕಲನ ಮಾಡಿದ್ದಾರೆ. ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ಅ.22ರಂದು ‘ರತ್ನನ್​ ಪ್ರಪಂಚ’ ಬಿಡುಗಡೆ ಆಗಲಿದೆ.

(ರತ್ನನ್​ ಪ್ರಪಂಚ ಟ್ರೇಲರ್​)

ಡಾಲಿ ಧನಂಜಯ ಅವರಿಗೆ ಎಲ್ಲ ಭಾಷೆಯ ಚಿತ್ರರಂಗದಲ್ಲೂ ಸಖತ್​ ಬೇಡಿಕೆ ಇದೆ. ಹೀರೋ ಮತ್ತು ಖಳನಟನಾಗಿ ಅವರು ಮಿಂಚುತ್ತಿದ್ದಾರೆ. ಪೋಷಕ ಪಾತ್ರಗಳನ್ನೂ ಒಪ್ಪಿಕೊಂಡು ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಸಲಗ’ ಸಿನಿಮಾದಲ್ಲಿ ಅವರು ಪೊಲೀಸ್​ ಅಧಿಕಾರಿ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಇದರ ಬೆನ್ನಲ್ಲೇ ‘ರತ್ನನ್​ ಪ್ರಪಂಚ’ ಬಿಡುಗಡೆ ಆಗುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ಅವರು ಮಧ್ಯಮವರ್ಗದ ಹುಡುಗನ ಪಾತ್ರ ನಿಭಾಯಿಸಿದ್ದಾರೆ. ಅವರಿಗೆ ಜೋಡಿಯಾಗಿ ರೆಬಾ ಮೋನಿಕಾ ಜಾನ್​ ಅಭಿನಯಿಸಿದ್ದಾರೆ.

ಇದನ್ನೂ ಓದಿ:

ವಯಸ್ಸಿನ ಬಗ್ಗೆ ರಮ್ಯಾ ಆಡಿದ ಮಾತಿಗೆ ಕಿಚ್ಚನ ಪ್ರತಿಕ್ರಿಯೆ; ‘ಕೋಟಿಗೊಬ್ಬ 3’ ಸುದ್ದಿಗೋಷ್ಠಿಯಲ್ಲಿ ಸುದೀಪ್​ ಹೇಳಿದ್ದೇನು?

ರಮ್ಯಾ ಬರೆದ ಚಿತ್ರ ನೋಡಿ ತಲೆ ಕೆರೆದುಕೊಂಡ ಫ್ಯಾನ್ಸ್​; ಜೀವನದ ಅರ್ಥ ವಿವರಿಸಿದ ಗೆರೆಗಳು​

Follow Us
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್