AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣವೀರ್ ಶ್ರೇಷ್ಠ ಬಹುಮುಖ ಪ್ರತಿಭೆಯ ನಟ ಎಂದವರಿಗೆ ರಾಜ್​​ಕುಮಾರ್​ ನೆನಪಿಸಿದ ಕನ್ನಡಿಗರು

ರಣವೀರ್ ಸಿಂಗ್ ಅವರ ಬಹುಮುಖಿ ಪ್ರತಿಭೆಯ ಬಗ್ಗೆ ನಡೆದ ಚರ್ಚೆಯಲ್ಲಿ ದಕ್ಷಿಣ ಭಾರತದ ಅಭಿಮಾನಿಗಳು ತಮ್ಮ ನೆಚ್ಚಿನ ನಟರಾದ ಡಾ. ರಾಜ್‌ಕುಮಾರ್, ಕಮಲ್ ಹಾಸನ್ ಮತ್ತು ಸೂರ್ಯ ಅವರನ್ನು ನೆನಪಿಸಿದ್ದಾರೆ. ‘ದಕ್ಷಿಣದಲ್ಲಿ ಇಂತಹ ಬಹುಮುಖ ನಟರಿಲ್ಲ’ ಎಂಬ ಹೇಳಿಕೆಗೆ ರಾಜ್‌ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ, ವಿಭಿನ್ನ ಪಾತ್ರಗಳ ಅವರ ಕೊಲಾಜ್ ಪೋಸ್ಟ್ ಮಾಡಿ ಉತ್ತರ ನೀಡಿದ್ದಾರೆ.

ರಣವೀರ್ ಶ್ರೇಷ್ಠ ಬಹುಮುಖ ಪ್ರತಿಭೆಯ ನಟ ಎಂದವರಿಗೆ ರಾಜ್​​ಕುಮಾರ್​ ನೆನಪಿಸಿದ ಕನ್ನಡಿಗರು
ರಾಜ್​​ಕುಮಾರ್-ರಣವೀರ್
ರಾಜೇಶ್ ದುಗ್ಗುಮನೆ
|

Updated on: Feb 04, 2026 | 11:44 AM

Share

ರಣವೀರ್ ಸಿಂಗ್ (Ranveer Singh) ಉತ್ತಮ ಕಲಾವಿದ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ವಿವಿಧ ಪಾತ್ರಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಅವರೇ ಶ್ರೇಷ್ಠ ಎಂದು ಅವರ ಫ್ಯಾನ್ಸ್ ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ದಕ್ಷಿಣದ ಅಭಿಮಾನಿಗಳು ಕಮಲ್ ಹಾಸನ್, ಸೂರ್ಯ, ಕಮಲ್ ಹಾಸನ್, ರಜನಿಕಾಂತ್ ಅವರನ್ನು ನೆನಪಿಸಿದ್ದಾರೆ.

ರಣವೀರ್ ಸಿಂಗ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ಬ್ಯಾಂಡ್ ಬಜಾ ಭಾರತ್’ ಚಿತ್ರದ ಮೂಲಕ. ಆ ಬಳಿಕ ಅವರು ಐತಿಹಾಸಿಕ ಸಿನಿಮಾಗಳನ್ನು ಮಾಡಿದರು. ‘ಪದ್ಮಾವತ್’ ಸಿನಿಮಾದಲ್ಲಿನ ಖಿಲ್ಜಿ ಪಾತ್ರಕ್ಕೆ ಫ್ಯಾನ್ಸ್ ಹಾಗೂ ವಿಮರ್ಶಕರು ಫುಲ್ ಮಾರ್ಕ್ಸ್ ಕೊಟ್ಟರು. ‘ಧುರಂಧರ್’ ಸಿನಿಮಾದಲ್ಲಿ ಅವರ ನಟನೆ ಬೇರೊಂದು ಹಂತಕ್ಕೆ ಹೋಗಿದೆ. ಅವರ ವಿವಿಧ ಸಿನಿಮಾಗಳ ಪಾತ್ರಗಳನ್ನು ಸೇರಿಸಿ ಒಂದು ಪೋಸ್ಟರ್ ಮಾಡಲಾಗಿದೆ.

ಇದನ್ನೂ ಓದಿ: ‘ಧುರಂಧರ್ 2’ ಪೋಸ್ಟರ್​ಗೆ ಯಶ್ ಸಿನಿಮಾ ಸ್ಫೂರ್ತಿ? ಟ್ರೆಂಡ್ ಸೆಟ್ಟರ್ ಆದ ರಾಕಿಭಾಯ್ ‘ದಕ್ಷಿಣ ಸಿನಿಮಾ ರಂಗದಲ್ಲಿ ಇಂತಹ ಓರ್ವ ಬಹುಮುಖ ನಟನನ್ನು ನನಗೆ ತೋರಿಸಿ, ನಾನು ನನ್ನ ಖಾತೆಯನ್ನು ಡಿಲೀಟ್ ಮಾಡುತ್ತೇನೆ’ ಎಂದು ಅದಿತಿ ಎಂಬುವವರು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ರಾಜ್​​ಕುಮಾರ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ರಾಜ್​​ಕುಮಾರ್ ನಟಿಸಿದ ಪಾತ್ರಗಳ ಫೋಟೋಗಳ ಕೊಲ್ಯಾಜ್​​ನ ಕಮೆಂಟ್ ಬಾಕ್ಸ್ ಅಲ್ಲಿ ಹಾಕಲಾಗಿದ್ದು, ‘ನಿಮ್ಮ ಖಾತೆಯನ್ನು ಡಿಲೀಟ್ ಮಾಡುವ ಸಮಯ ಬಂದಿದೆ’ ಎಂದು ಬರೆಯಲಾಗಿದೆ.

ಕಮಲ್ ಹಾಸನ್, ಸೂರ್ಯ ಮೊದಲಾದ ಕಲಾವಿದರ ಅಭಿಮಾನಿಗಳು ಕೂಡ ತಮ್ಮಿಷ್ಟದ ನಟರ ಸಿನಿಮಾಗಳ ವಿವಿಧ ಪೋಸ್ಟರ್​​​ಗಳನ್ನು ಸೇರಿಸಿ ಕಮೆಂಟ್ ಬಾಕ್ಸ್​ ಅಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಈ ಮೂಲಕ ಉತ್ತರ ನೀಡುವ ಕೆಲಸ ಮಾಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಹುಬ್ಬಳ್ಳಿ ಸ್ಟೇಡಿಯಂ ಪೆವಿಲಿಯನ್​ಗೆ ಸುನಿಲ್ ಜೋಶಿ ಹೆಸರು ನಾಮಕರಣ
ಹುಬ್ಬಳ್ಳಿ ಸ್ಟೇಡಿಯಂ ಪೆವಿಲಿಯನ್​ಗೆ ಸುನಿಲ್ ಜೋಶಿ ಹೆಸರು ನಾಮಕರಣ
ಎಕ್ಸಾಂನಲ್ಲಿ ಟೈಮ್ ಮ್ಯಾನೇಜ್​ಮೆಂಟ್ ಮಾಡೋಕೆ ಆಗ್ತಾ ಇಲ್ವಾ?
ಎಕ್ಸಾಂನಲ್ಲಿ ಟೈಮ್ ಮ್ಯಾನೇಜ್​ಮೆಂಟ್ ಮಾಡೋಕೆ ಆಗ್ತಾ ಇಲ್ವಾ?
ತಡರಾತ್ರಿ ಗ್ರಾಮದಲ್ಲಿ ಓಡಾಡಿದ ಕಾಡಾನೆಗಳ ಹಿಂಡು!
ತಡರಾತ್ರಿ ಗ್ರಾಮದಲ್ಲಿ ಓಡಾಡಿದ ಕಾಡಾನೆಗಳ ಹಿಂಡು!
ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ಅಶೋಕ್​​ ಸ್ಫೋಟಕ ಆರೋಪ
ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ಅಶೋಕ್​​ ಸ್ಫೋಟಕ ಆರೋಪ
ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ನಿರಾಕರಣೆ ನಡುವೆಯೂ ಬೃಹತ್​ ಪ್ರತಿಭಟನೆ
ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ನಿರಾಕರಣೆ ನಡುವೆಯೂ ಬೃಹತ್​ ಪ್ರತಿಭಟನೆ
ಪೊಲೀಸರ ವಿರೋಧದ ಮಧ್ಯೆಯೇ ಜಯನಗರ ವೃತ್ತದ ಕಡೆಗೆ ಯುವಕರ ಮೆರವಣಿಗೆ!
ಪೊಲೀಸರ ವಿರೋಧದ ಮಧ್ಯೆಯೇ ಜಯನಗರ ವೃತ್ತದ ಕಡೆಗೆ ಯುವಕರ ಮೆರವಣಿಗೆ!
Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!
ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!
ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ತನಿಖಾಧಿಕಾರಿಗಳಿಂದ ನಡೆದಿದೆ ಎಡವಟ್ಟು?
ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ತನಿಖಾಧಿಕಾರಿಗಳಿಂದ ನಡೆದಿದೆ ಎಡವಟ್ಟು?
ಮನೆಯಲ್ಲಿ ಅಗ್ನಿ ಅವಘಡ, ಅವಳಿ ಶಿಶುಗಳು ಸೇರಿ ಆರು ಮಂದಿ ಸಜೀವದಹನ
ಮನೆಯಲ್ಲಿ ಅಗ್ನಿ ಅವಘಡ, ಅವಳಿ ಶಿಶುಗಳು ಸೇರಿ ಆರು ಮಂದಿ ಸಜೀವದಹನ