ಜ್ಯೂ.ಎನ್​ಟಿಆರ್​ಗೆ ಇರುವ ಕನ್ನಡ ಪ್ರೇಮ ರಶ್ಮಿಕಾಗೇಕಿಲ್ಲ? ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸ್ತಾರಾ ಕೊಡಗಿನ ಬೆಡಗಿ?

ಜ್ಯೂ.ಎನ್​ಟಿಆರ್​ಗೆ ಇರುವ ಕನ್ನಡ ಪ್ರೇಮ ರಶ್ಮಿಕಾಗೇಕಿಲ್ಲ? ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸ್ತಾರಾ ಕೊಡಗಿನ ಬೆಡಗಿ?
ಜ್ಯೂ.ಎನ್​ಟಿಆರ್​-ರಶ್ಮಿಕಾ

ಇತ್ತೀಚೆಗೆ ‘ಪುಷ್ಪ’ ಸಿನಿಮಾದ ಟ್ರೇಲರ್ ರಿಲೀಸ್​ ಆಗಿದೆ. ಈ ಚಿತ್ರಕ್ಕೆ ರಶ್ಮಿಕಾ ನಾಯಕಿ. ‘ಪುಷ್ಪ’ದಲ್ಲಿ ಅವರು ಭಿನ್ನ ಗೆಟಪ್​ ತಾಳಿದ್ದಾರೆ. ಹೀಗಾಗಿ, ಅವರ ಅಭಿಮಾನಿಗಳು ಈ ಸಿನಿಮಾ ನೋಡೋಕೆ ಕಾದು ಕೂತಿದ್ದಾರೆ.

TV9kannada Web Team

| Edited By: Rajesh Duggumane

Dec 11, 2021 | 7:00 AM

ರಶ್ಮಿಕಾ ಮಂದಣ್ಣ ಸಿನಿಮಾ ವಿಚಾರದಲ್ಲಿ ಸಾಕಷ್ಟು ಖ್ಯಾತಿ ಗಳಿಸಿರಬಹುದು. ಪರಭಾಷೆಯಲ್ಲಿ ಅವರಿಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಇರಬಹುದು. ಆದರೆ, ರಶ್ಮಿಕಾ ಭಾಷಾ ವಿಚಾರಕ್ಕೆ ಟ್ರೋಲ್​ ಆಗುತ್ತಲೇ ಇರುತ್ತಾರೆ. ಅವರಿಗೆ ಕನ್ನಡದ ಬಗ್ಗೆ ಗೌರವ ಇಲ್ಲ ಎನ್ನುವ ಆರೋಪ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಇದಕ್ಕೆ ನಟಿಯ ಕಡೆಯಿಂದ ಯಾವ ಸಂದರ್ಭದಲ್ಲೂ ಸ್ಪಷ್ಟನೆ ಸಿಕ್ಕಿಲ್ಲ. ಈಗ ರಶ್ಮಿಕಾ ಇದೇ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಏನದು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಇತ್ತೀಚೆಗೆ ‘ಪುಷ್ಪ’ ಸಿನಿಮಾದ ಟ್ರೇಲರ್ ರಿಲೀಸ್​ ಆಗಿದೆ. ಈ ಚಿತ್ರಕ್ಕೆ ರಶ್ಮಿಕಾ ನಾಯಕಿ. ‘ಪುಷ್ಪ’ದಲ್ಲಿ ಅವರು ಭಿನ್ನ ಗೆಟಪ್​ ತಾಳಿದ್ದಾರೆ. ಹೀಗಾಗಿ, ಅವರ ಅಭಿಮಾನಿಗಳು ಈ ಸಿನಿಮಾ ನೋಡೋಕೆ ಕಾದು ಕೂತಿದ್ದಾರೆ. ಈ ಚಿತ್ರ ತೆಲುಗು ಮಾತ್ರವಲ್ಲದೆ, ಕನ್ನಡದಲ್ಲೂ ತೆರೆಗೆ ಬರುತ್ತಿದೆ. ಹೀಗಾಗಿ ಟ್ರೇಲರ್​ಅನ್ನು ಕನ್ನಡದಲ್ಲೂ ರಿಲೀಸ್​ ಮಾಡಲಾಗಿದೆ. ಆದರೆ, ರಶ್ಮಿಕಾ ಕನ್ನಡ ಅವತರಣಿಕೆಗೆ ಡಬ್​ ಮಾಡಿಲ್ಲ.

ಡಿಸೆಂಬರ್​ 9ರಂದು ‘ಆರ್​ಆರ್​ಆರ್​’ ಸಿನಿಮಾದ ಟ್ರೇಲರ್​ ರಿಲೀಸ್​ ಆಗಿದೆ. ಈ ಚಿತ್ರದ ಟ್ರೇಲರ್ ನೋಡಿದ ಫ್ಯಾನ್ಸ್ ಫಿದಾ ಆಗಿದ್ದಾರೆ. ಇಲ್ಲೊಂದು ಅಚ್ಚರಿ ವಿಚಾರವಿದೆ. ‘ಆರ್​ಆರ್​ಆರ್​’ ಚಿತ್ರದ ಕನ್ನಡ ಅವತರಣಿಕೆಗೆ ಜ್ಯೂ.ಎನ್​ಟಿಆರ್, ರಾಮ್​ ಚರಣ್​ ಅವರೇ ಡಬ್​ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಗ ‘ಪುಷ್ಪ’ ಮತ್ತು ‘ಆರ್​ಆರ್​ಆರ್​’ ಟ್ರೇಲರ್​ ವಿಚಾರ ಇಟ್ಟುಕೊಂಡು ಚರ್ಚೆ ಮಾಡಲಾಗುತ್ತಿದೆ.

ಜ್ಯೂ.ಎನ್​ಟಿಆರ್​ ಅಂತಹ ಪರಭಾಷೆ ಕಲಾವಿದರು ಕನ್ನಡದಲ್ಲಿ ಡಬ್​ ಮಾಡಿದ್ದಾರೆ. ಪರಭಾಷೆಯವರು ಕಷ್ಟವಾದರೂ ಆದಷ್ಟು ಪ್ರಯತ್ನಿಸಿ ಕನ್ನಡ ಮಾತನಾಡುತ್ತಿದ್ದಾರೆ. ಹೀಗಿರುವಾಗ, ಕರ್ನಾಟಕದವರಾಗಿ, ಕನ್ನಡ ಅವತರಣಿಕೆಯನ್ನು ರಶ್ಮಿಕಾ ಡಬ್​ ಮಾಡುವುದಿಲ್ಲ ಎಂದರೆ ಅದು ಎಷ್ಟು ಸರಿ? ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ರಶ್ಮಿಕಾ ಕಡೆಯಿಂದ ಇನ್ನೂ ಉತ್ತರ ಬಂದಿಲ್ಲ. ಅವರು ಈ ಕಮೆಂಟ್​ಗಳಿಗೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

‘ಪುಷ್ಪ’ ಚಿತ್ರಕ್ಕೆ ಸುಕುಮಾರ್​ ಅವರ ನಿರ್ದೇಶನವಿದೆ. ಡಾಲಿ ಧನಂಜಯ್​, ಫಹಾದ್​ ಫಾಸಿಲ್​, ಜಗಪತಿ ಬಾಬು ಪ್ರಕಾಶ್​ ರಾಜ್​ ಮುಂತಾದ ಸ್ಟಾರ್​ ಕಲಾವಿದರು ಕೂಡ ‘ಪುಷ್ಪ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಎರಡು ಪಾರ್ಟ್​ಗಳಲ್ಲಿ ಈ ಚಿತ್ರ ತಯಾರಾಗಿದ್ದು, ಡಿ.17ರಂದು ಮೊದಲ ಪಾರ್ಟ್​ ಮಾತ್ರ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ: ‘ಪುಷ್ಪ’ ಐಟಂ ಸಾಂಗ್​ನಲ್ಲಿ ಹಾಟ್ ಆಗಿ ಮಿಂಚಿದ ಸಮಂತಾ; ಇಲ್ಲಿದೆ ವಿಶೇಷ ಹಾಡು

‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಡಿಫರೆಂಟ್​ ಗೆಟಪ್​

Follow us on

Related Stories

Most Read Stories

Click on your DTH Provider to Add TV9 Kannada