ದುಬೈನಲ್ಲಿ ರಿಷಬ್-ಪ್ರಗತಿ ದಂಪತಿ; ಹಳೆಯ ವಿಡಿಯೋ ವೈರಲ್
ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಪ್ರತಿ ಸಿನಿಮಾ ಆದ ಬಳಿಕವೂ ಒಂದು ಬ್ರೇಕ್ ಪಡೆದುಕೊಳ್ಳುತ್ತಾರೆ. ರಿಷಬ್ ಶೆಟ್ಟಿ ಕೂಡ ಹಾಗೆಯೇ ಮಾಡಿದ್ದರು. ‘ಕಾಂತಾರ’ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ದರು. ಆ ಬಳಿಕ ಸಿನಿಮಾ ಗೆದ್ದು ಬೀಗಿತ್ತು. ಇದಾದ ಬಳಿಕ ಅವರು ದುಬೈ ಪ್ರವಾಸ ಮಾಡಿದ್ದರು.

ರಿಷಬ್ ಶೆಟ್ಟಿ (Rishab Shetty) ಹಾಗೂ ಪ್ರಗತಿ ಶೆಟ್ಟಿ ಅವರು ಈಗ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಲೆಯಲ್ಲಿ ತೇಲುತ್ತಾ ಇದ್ದಾರೆ. ಕಳೆದ ಮೂರು ವರ್ಷಗಳಿಂದ ಅವರು ಪಟ್ಟ ಶ್ರಮಕ್ಕೆ ಸಿಕ್ಕ ಪ್ರತಿಫಲ ಇದು ಎಂದರೂ ತಪ್ಪಾಗಲಿಕ್ಕಿಲ್ಲ. ಈ ಸಿನಿಮಾ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬೀಗುತ್ತಿದೆ. ಹೀಗಿರುವಾಗಲೇ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ದುಬೈನಲ್ಲಿ ಸಮಯ ಕಳೆದ ಕ್ಷಣಗಳಿವೆ.
ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಪ್ರತಿ ಸಿನಿಮಾ ಆದ ಬಳಿಕವೂ ಒಂದು ಬ್ರೇಕ್ ಪಡೆದುಕೊಳ್ಳುತ್ತಾರೆ. ರಿಷಬ್ ಶೆಟ್ಟಿ ಕೂಡ ಹಾಗೆಯೇ ಮಾಡಿದ್ದರು. ‘ಕಾಂತಾರ’ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ದರು. ಆ ಬಳಿಕ ಸಿನಿಮಾ ಗೆದ್ದು ಬೀಗಿತ್ತು. ಇದಾದ ಬಳಿಕ ಅವರು ದುಬೈ ಪ್ರವಾಸ ಮಾಡಿದ್ದರು. ಅಲ್ಲಿ ಕಳೆದ ಸುಂದರ ಕ್ಷಣವನ್ನು ವಿಡಿಯೋ ರೂಪದಲ್ಲಿ ಹಂಚಿಕೊಂಡಿದ್ದರು. ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಈ ವಿಡಿಯೋನ ಅಭಿಮಾನಿಗಳು ಈಗ ಮತ್ತೆ ವೈರಲ್ ಮಾಡುತ್ತಿದ್ದಾರೆ. ಕೆಲವರಂತೂ ಇದು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಯಶಸ್ಸಿನ ಬಳಿಕ ತೆರಳಿದ ವಿಡಿಯೋ ಎಂದೆಲ್ಲ ಸುದ್ದಿ ಮಾಡಿದ್ದಾರೆ. ಆದರೆ, ಅಸಲಿಗೆ ಹಾಗಿಲ್ಲ. ಇದರ ಅಸಲಿಯತ್ತು ಬೇರೆಯದೇ ಇದೆ. ಇದನ್ನು ಕೆಲವರು ತಿಳಿಸಿ ಹೇಳುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ: ರಿಷಬ್ ಶೆಟ್ಟಿಯ ನಂಬಿ ನೂರಾರು ಕೋಟಿ ಹೂಡಿಕೆ ಮಾಡಿದ್ದೇಕೆ ಹೊಂಬಾಳೆ?
‘ಕಾಂತಾರ: ಚಾಪ್ಟರ್ 1’ ಸಿನಿಮಾ ರಿಷಬ್ ಶೆಟ್ಟಿಗೆ ನಿರ್ದೇಶಕನಾಗಿ, ನಟನಾಗಿ ದೊಡ್ಡ ಯಶಸ್ಸು ತಂದುಕೊಟ್ಟಿದೆ. ಇಷ್ಟೇ ಅಲ್ಲ, ಈ ಸಿನಿಮಾ ಮೂಲಕ ಕಾಸ್ಟ್ಯೂಮ್ ಡಿಸೈನರ್ ಆಗಿ ಪ್ರಗತಿ ಶೆಟ್ಟಿಗೆ ದೊಡ್ಡ ಯಶಸ್ಸು ನೀಡಿದೆ.
ಈ ಬಾರಿಯೂ ತೆರಳುತ್ತಾರೆ ಟ್ರಿಪ್?
ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಸಾಕಷ್ಟು ಶ್ರಮ ಹಾಕಿದ್ದಾಗಿ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳನ್ನು ಈ ಚಿತ್ರಕ್ಕಾಗಿ ಮುಡಿಪಿಟ್ಟಿದ್ದಾಗಿ ಹೇಳುತ್ತಲೇ ಬರುತ್ತಿದ್ದಾರೆ. ಹಗಲು ರಾತ್ರಿ ಎನ್ನದೆ ಸಿನಿಮಾ ಶೂಟ್ ಮಾಡಿದ್ದಾರೆ. ಈ ಕಾರಣಕ್ಕೆ ಅವರಿಗೆ ಒಂದು ದೊಡ್ಡ ಬ್ರೇಕ್ನ ಅವಶ್ಯಕತೆ ಇದೆ. ಈ ಚಿತ್ರದಿಂದ ಅದನ್ನು ನೆರವೇರಿಸಿಕೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:30 pm, Fri, 10 October 25



