Radhika Pandit: ರಾಧಿಕಾ ಪಂಡಿತ್ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿದ ಯಶ್
ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬವನ್ನು ಯಶ್ ಮತ್ತು ಆಪ್ತರೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. ವಿವಾಹದ ನಂತರ ರಾಧಿಕಾ ನಟನೆಯಿಂದ ದೂರವಿದ್ದಾರೆ, ಆದರೆ ಅವರ ಅಭಿಮಾನಿಗಳು ಅವರು ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ನಟಿ ರಾಧಿಕಾ ಪಂಡಿತ್ ಅವರು ಮಾರ್ಚ್ 7ರಂದು ಬರ್ತ್ಡೇ ಆಚರಿಸಿಕೊಂಡರು. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಈ ಮೊದಲು ಯಶ್ ಬರ್ತ್ಡೇನ ರಾಧಿಕಾ ಪಂಡಿತ್ ಅವರು ಗೊವಾದ ಬೀಚ್ ಪಕ್ಕ ಆಚರಿಸಿದ್ದರು. ಅದೇ ರೀತಿ ಯಶ್ ಅವರು ಪತ್ನಿ ಬರ್ತ್ಡೇನ ಸೆಲೆಬ್ರೇಟ್ ಮಾಡಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿ ಗಮನ ಸೆಳೆದಿವೆ. ರಾಧಿಕಾ (Radhika Pandit) ಹಾಗೂ ಯಶ್ ಜೋಡಿಯನ್ನು ನೋಡಿ ಫ್ಯಾನ್ಸ್ ಸಂಭ್ರಮಿಸಿದ್ದಾರೆ.
ರಾಧಿಕಾ ಹಾಗೂ ಯಶ್ ಅವರು ಪ್ರೀತಿಸಿ ಮದುವೆ ಆದವರು. ಧಾರಾವಾಹಿಯಲ್ಲಿ ನಟಿಸುತ್ತಿದ್ದ ಕಾಲದಿಂದಲೇ ಇದ್ದ ಪರಿಚಯ ವರ್ಷಗಳು ಕಳೆದಂತೆ ಪ್ರೀತಿಗೆ ತಿರುಗಿತು. ಇಬ್ಬರೂ ಆ ಬಳಿಕ ಮದುವೆ ಆಗುವ ನಿರ್ಧಾರ ತೆಗೆದುಕೊಂಡು. ಕಳೆದ 9 ವರ್ಷಗಳಿಂದ ಇವರು ಹಾಯಾಗಿ ಸಂಸಾರ ನಡೆಸುಕೊಂಡು ಬರುತ್ತಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಈಗ ರಾಧಿಕಾ ಜನ್ಮದಿನದ ಫೋಟೋ ವೈರಲ್ ಆಗಿದೆ.
ಯಶ್ ಹಾಗೂ ಆಪ್ತರ ಜೊತೆಯಲ್ಲಿ ರಾಧಿಕಾ ಪಂಡಿತ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆಯ್ರಾ ಹಾಗೂ ಯಥರ್ವ್ ಕೂಡ ಇದ್ದರು. ರಾಧಿಕಾ ಯಶ್ ಜೋಡಿಯನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
Exclusive 🤩@TheNameIsYash #YashBOSS #ToxicTheMovie pic.twitter.com/jmLRkcYRkM
— Shashi Yashᵀᵒˣᶦᶜ (@ShashiYash20) March 7, 2025
B’day Celebration🎉🎊🍾#YashBOSS #ToxicTheMovie #radhikapandit pic.twitter.com/oCCkqXA9vZ
— 𝐀𝐊 ☣︎ (@nameisakshay03) March 8, 2025
Exclusive snaps ✨#YashBOSS #ToxicTheMovie #radhikapandit pic.twitter.com/R7n5Xoe5Nl
— 𝐀𝐊 ☣︎ (@nameisakshay03) March 8, 2025
ರಾಧಿಕಾ ಪಂಡಿತ್ ಅವರು ಚಿತ್ರರಂಗದಿಂದ ದೂರವೇ ಇದ್ದಾರೆ. ವಿವಾಹದ ಬಳಿಕ ಅವರು ನಟನೆಯಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅವರು ಮತ್ತೆ ಸಿನಿಮಾಗಳನ್ನು ಮಾಡಲಿ ಎಂದು ಫ್ಯಾನ್ಸ್ ಬಯಸುತ್ತಾ ಇದ್ದಾರೆ. ಆದರೆ, ಸದ್ಯಕ್ಕಂತೂ ಅದು ನೆರವೇರುವುದು ಅನುಮಾನವೇ.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಈ ವ್ಯಕ್ತಿಗೆ ಬಾಸ್ ಎಂದು ಕರೆಯುತ್ತಾರೆ ಯಶ್
ಯಶ್ ಸಿನಿಮಾ ವಿಚಾರಕ್ಕೆ ಬರೋದಾದರೆ ‘ಟಾಕ್ಸಿಕ್’ ಸಿನಿಮಾ ಶೂಟ್ನಲ್ಲಿ ಬ್ಯುಸಿ ಇದ್ದಾರೆ. ‘ರಾಮಾಯಣ’ ಸಿನಿಮಾದಲ್ಲಿ ಯಶ್ ರಾವಣನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅವರು ನಿರ್ಮಾಪಕ ಕೂಡ ಹೌದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:41 am, Sat, 8 March 25








