AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸು ಫ್ರಮ್ ಸೋ’ನಲ್ಲಿ ಭಾನು ಆಗಿ ಮನಗೆದ್ದ ಸಂಧ್ಯಾ ಅರಕೆರೆ ಬಗೆಗಿನ ಅಪರೂಪದ ಮಾಹಿತಿ

ಸಂಧ್ಯಾ ಅರಕೆರೆ ಅವರು ‘ಸು ಫ್ರಮ್ ಸೋ’ ಚಿತ್ರದ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದ ಇವರು, ಆಕಸ್ಮಿಕವಾಗಿ ಸಿನಿಮಾ ರಂಗಕ್ಕೆ ಪ್ರವೇಶಿಸಿದರು. ‘ಸು ಫ್ರಮ್ ಸೋ’ ಚಿತ್ರದಲ್ಲಿನ ಭಾನು ಪಾತ್ರದ ಮೂಲಕ ಮೆಚ್ಚುಗೆ ಪಡೆದಿದ್ದಾರೆ. ಇವರ ಯಶಸ್ಸಿನ ಹಿಂದೆ ಕಠಿಣ ಪರಿಶ್ರಮ ಇದೆ.

‘ಸು ಫ್ರಮ್ ಸೋ’ನಲ್ಲಿ ಭಾನು ಆಗಿ ಮನಗೆದ್ದ ಸಂಧ್ಯಾ ಅರಕೆರೆ ಬಗೆಗಿನ ಅಪರೂಪದ ಮಾಹಿತಿ
ಸಂಧ್ಯಾ
ರಾಜೇಶ್ ದುಗ್ಗುಮನೆ
|

Updated on:Jul 28, 2025 | 3:14 PM

Share

ಸಂಧ್ಯಾ ಅರಕೆರೆ ಹೆಸರು ಈಗ ಎಲ್ಲ ಕಡೆಗಳಲ್ಲಿ ಪ್ರಚಲಿತದಲ್ಲಿದೆ. ಇದಕ್ಕೆ ಕಾರಣ ರಾಜ್ ಬಿ. ಶೆಟ್ಟಿ ಅವರ ನಿರ್ಮಾಣದ ‘ಸು ಫ್ರಮ್ ಸೋ’ (Su From So) ಸಿನಿಮಾ. ಈ ಚಿತ್ರದಲ್ಲಿ ಭಾನು ಹೆಸರಿನ ಪಾತ್ರದಲ್ಲಿ ಸಂಧ್ಯಾ ನಟಿಸಿದ್ದಾರೆ. ಇಡೀ ಸಿನಿಮಾದ ದಿಕ್ಕನ್ನೇ ಇವರು ಬದಲಿಸುತ್ತಾರೆ ಎಂದರೂ ತಪ್ಪಾಗಲಾರದು. ರಂಗಭೂಮಿ ಹಿನ್ನೆಲೆ ಹೊಂದಿರುವ ಇವರು ಸಿನಿಮಾ ರಂಗಕ್ಕೆ ಬಂದಿದ್ದೇ ಆಕಸ್ಮಿಕ. ಅವರು ರಂಗಭೂಮಿ, ಸಿನಿಮಾ ಹಾಗೂ ‘ಸು ಫ್ರಮ್ ಸೋ’ ಜರ್ನಿ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.

ಟೋಬಿಯಲ್ಲಿ ನಟನೆ

ರಾಜ್ ಬಿ. ಶೆಟ್ಟಿ ಪರಿಚಯ ಬೆಳೆದಿದ್ದು ಹೇಗೆ ಎಂಬುದನ್ನು ಸಂಧ್ಯಾ ವಿವರಿಸಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದೆ. ನಂತರ ಟೋಬಿ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಮತ್ತೆ ಆ ತಂಡದಿಂದ ಮತ್ತೆ ಆಫರ್ ಬರುತ್ತದೆ ಎಂದುಕೊಂಡಿರಲಿಲ್ಲ. ರಾಜ್ ಅವರು ನನಗೆ ಈ ಆಫರ್ ಕೊಟ್ಟರು. ನಾನು ಖುಷಿಯಿಂದ ಒಪ್ಪಿ ನಟಿಸಿದೆ’ ಎನ್ನುತ್ತಾರೆ ಸಂಧ್ಯಾ.

ಎಲ್ಲ ಕ್ರೆಡಿಟ್ ನಿರ್ದೇಶಕರಿಗೆ

‘ಭಾನು ಆಗಿ ತೆರೆಮೇಲೆ ಏನೇ ಬಂದಿದ್ದರೂ ಅದರ ಕ್ರೆಡಿಟ್ ನಿರ್ದೇಶಕ ಜೆಪಿ ತುಮಿನಾಡ್​ಗೆ ಸಲ್ಲುತ್ತದೆ. ಅವರು ಪಾತ್ರವನ್ನು ಬರೆದು ಜೀವಿಸಿದವರು. ಅವರು ಹೇಳಿದಂತೆ ನಟಿಸಿದ್ದೇನೆ. ರಾಜ್ ಬಿ ಶೆಟ್ಟಿ ಅವರಿಗೆ ನಾನು ಈ ಪಾತ್ರಕ್ಕೆ ಸೂಕ್ತ ಅನಿಸಿತು. ಅವರಿಗೆ ನಾನು ಸೂಕ್ತ ಅಲ್ಲ ಎಂದು ಅನಿಸಿದ್ದರೆ ನನಗೆ ಈ ಕಥೆಯನ್ನು ಕೇಳಲು ಸಾಧ್ಯವೇ ಆಗುತ್ತಿರಲಿಲ್ಲ. ಅವರಿಗೂ ಧನ್ಯವಾದ ಹೇಳಬೇಕು. ಪಾತ್ರ ಕೇಳುವಾಗ ಮೈ ಜುಂ ಎಂದಿತ್ತು. ಜೆಪಿ ಅವರು ನರೇಟ್ ಮಾಡುವಾಗ ಅವರೇ ಭಾನು ಎನ್ನುವ ರೀತಿ ಅನಿಸುತ್ತಿತ್ತು. ನಂಗೆ ಗಂಟಲು ಕಟ್ಟುತ್ತಿತ್ತು’ ಎಂದಿದ್ದಾರೆ ಸಂಧ್ಯಾ.

ಇದನ್ನೂ ಓದಿ
Image
‘ಕನಿಷ್ಠ ಸಭ್ಯತೆ ಇರಲಿ’; ದರ್ಶನ್ ಅಭಿಮಾನಿಗಳ ಬಳಿ ಕೋರಿದ್ರಾ ರಕ್ಷಿತಾ
Image
ಶಾರುಖ್ ಖಾನ್ ಈ ಮೂಢನಂಬಿಕೆಯನ್ನು ತುಂಬಾನೇ ನಂಬುತ್ತಾರೆ
Image
‘ಭರ್ಜರಿ ಬ್ಯಾಚುಲರ್ಸ್ 2’ ವಿನ್ನರ್ ಸುನೀಲ್​; ಸಿಕ್ಕಿದ್ದು ಇಷ್ಟೊಂದು ಹಣವಾ
Image
‘ಸು ಫ್ರಮ್ ಸೋ’ ಬ್ಲಾಕ್​ಬಸ್ಟರ್ ಕಲೆಕ್ಷನ್; ‘ಎಕ್ಕ’ ದಾಖಲೆ ಉಡೀಸ್

ಅರಕೆರೆ ನನ್ನೂರು

‘ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅರಕೆರೆ ನನ್ನೂರು. ಸಿನಿಮಾ ಮಾಡುವ ಯಾವುದೇ ಆಲೋಚನೆ ನನಗೆ ಇರಲಿಲ್ಲ. ಅರ

ಕೆರೆಯಲ್ಲಿ ಪಿಯುಸಿ ಮಾಡಿದೆ. ಮೈಸೂರಿನಲ್ಲಿ ಡಿಗ್ರಿ ಮಾಡಿದೆ. ನಂತರ ನೀನಾಸಂ ಸೇರಿದೆ. 2015ರಲ್ಲಿ ಥಿಯೇಟರ್​ನಲ್ಲಿ ಎಂಎ ಮಾಡಬೇಕು ಎಂದು ಬೆಂಗಳೂರಿಗೆ ಬಂದಿದ್ದೆ. ಆಗ ಒಂದು ಸಿನಿಮಾಗೆ ಅವಕಾಶ ಸಿಕ್ಕಿತ್ತು. ನಂತರ ಸಾಲು ಸಾಲು ಸಿನಿಮಾ ಆಫರ್​ಗಳು ಬಂದವು’ ಎಂದು ಖುಷಿಯಿಂದ ಹೇಳುತ್ತಾರೆ ಸಂಧ್ಯಾ.

ಯಾವುದೂ ಪ್ಲ್ಯಾನ್ ಮಾಡಿದ್ದಲ್ಲ..

ಒಂದು ಸಿನಿಮಾ ಹಿಟ್ ಆದರೆ ಮುಂದೆ ಸಾಲು ಸಾಲು ಆಫರ್​ಗಳು ಬರುತ್ತವೆ. ಸಂಧ್ಯಾ ಆ ಬಗ್ಗೆ ಯೋಚಿಸಿಲ್ಲ. ‘ಜೀವನದಲ್ಲಿ ನಾನು ಪ್ಲ್ಯಾನ್ ಮಾಡಿ ಏನನ್ನೂ ಮಾಡಿಲ್ಲ. ಅದಾಗಿಯೇ ಆಗುತ್ತಿದೆ. ನಾನು ನಾಟಕಕ್ಕೆ ಬಂದಿದ್ದು ಆಕಸ್ಮಿಕ, ಸಿನಿಮಾ ಆಫರ್​ ಬಂದಿದ್ದೂ ಆಕಸ್ಮಿಕ. ಸು ಫ್ರಮ್ ಸೋ ಚಿತ್ರಕ್ಕೆ ಇಷ್ಟು ದೊಡ್ಡ ಗೆಲುವು ಸಿಗುತ್ತದೆ ಎಂದು ನಾನು ಊಹಿಸಿರಲಿಲ್ಲ. ನಾನು ಲಕ್ಕಿ ಎಂದು ಯಾವಾಗಲೂ ಅನಿಸುತ್ತದೆ. ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಮುಂದೆ ಅವಕಾಶ ಸಿಗಲಿ’ ಎಂದು ಮನಃಪೂರ್ವಕವಾಗಿ ಕೋರುತ್ತಾರೆ ಅವರು.

ಪರಿಕಲ್ಪನೆ ಬದಲಿಸಿದ ರಾಜ್

‘ರಾಜ್ ಬಿ. ಶೆಟ್ಟಿ ಅವರನ್ನು ಭೇಟಿ ಆದ ಬಳಿಕ ಸಿನಿಮಾ ಬಗ್ಗೆ ಇರುವ ಪರಿಕಲ್ಪನೆ ಬದಲಾಯಿತು. ಅವರು ಕೆಲಸ ಮಾಡುವ ರೀತಿಯೇ ಬೇರೆ. ಸಿನಿಮಾ ಮಾಡೋದು, ರಿಲೀಸ್ ಮಾಡೋದು, ಸಿನಿಮಾ ಗೆದ್ದಿತು ಅಥವಾ ಸೋತಿತು ಎಂದು ಹೇಳುವುದು ಮಾತ್ರ ಸಿನಿಮಾ ಜರ್ನಿ ಅಲ್ಲ. ಅವರ ಜೊತೆ ಸೇರಿದಾಗ ಮಾತ್ರ ಆ ಅನುಭವ ಸಿಗಲು ಸಾಧ್ಯ, ರಾಜ್ ತಂಡದಲ್ಲಿ ಎಲ್ಲರೂ ಸಿಂಪಲ್ ಆಗಿರುತ್ತಾರೆ, ಪ್ರೀತಿಯಿಂದ ಇರುತ್ತಾರೆ’ ಎನ್ನುತ್ತಾರೆ ಸಂಧ್ಯಾ.

ಇದನ್ನೂ ಓದಿ: ‘ಸು ಫ್ರಮ್ ಸೋ’ ಗೆದ್ದ ಬೆನ್ನಲ್ಲೇ ರಾಜ್ ಬಿ. ಶೆಟ್ಟಿಗೆ ಪ್ರೀತಿಯ ಸಂದೇಶ ಕೊಟ್ಟ ರಿಷಬ್

ಹಲವು ಸಿನಿಮಾ-ನಾಟಕ

‘ಸುಳಿ’ ಸಂಧ್ಯಾ ಅವರ ಮೊದಲ ಸಿನಿಮಾ. ಪ್ರಕಾಶ್ ರೈ ಪ್ರೆಸೆಂಟ್ ಮಾಡಿದ್ದ ‘ಫೋಟೋ’, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಭೀಮ ಸೇನ ನಳ ಮಹರಾಜ’, ‘ಒಂದಲ್ಲ ಎರಡಲ್ಲ’, ‘ಬೈ ಟು ಲವ್’ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. ರಂಗಭೂಮಿ ಹಿನ್ನೆಲೆಯವರಾದ್ದರಿಂದ ನಾಟಕಗಳನ್ನೂ ಮಾಡಿದ್ದಾರೆ. ‘ಗಾಂಧಿ vs ಗಾಂಧಿ’, ‘ಅಂಬೇಡ್ಕರ್’, ‘ಸೀತಾ ಸ್ವಯಂವರ’ ಈ ರೀತಿಯ ಹಲವು ನಾಟಕಗಳಲ್ಲಿ ಅವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:10 pm, Mon, 28 July 25

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!