AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶಾಂತಿ-ಕ್ರಾಂತಿ’ ಸಿನಿಮಾ ರೀ-ರಿಲೀಸ್ ಬಗ್ಗೆ ರವಿಚಂದ್ರನ್ ಹೇಳಿದ್ದೇನು?

Shanti Kranti movie: ಸಿನಿಮಾ ಪ್ರೇಮಿಗಳು, ಅಭಿಮಾನಿಗಳು ‘ಶಾಂತಿ-ಕ್ರಾಂತಿ’ ಸಿನಿಮಾ ಅನ್ನು ರೀ-ರಿಲೀಸ್ ಮಾಡಿ ಎಂದು ಬೇಡಿಕೆ ಇಡುತ್ತಿದ್ದಾರೆ. ಮೊದಲು ಬಿಡುಗಡೆ ಆಗಿದ್ದ ಸೋತಿದ್ದ ಸಿನಿಮಾವನ್ನು ಈಗ ಗೆಲ್ಲಿಸಬೇಕು ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ಗಳು ಹರಿದಾಡುತ್ತಿವೆ. ‘ಶಾಂತಿ-ಕ್ರಾಂತಿ’ ಸಿನಿಮಾದ ನಟ, ನಿರ್ದೇಶಕ ರವಿಚಂದ್ರನ್ ಅವರು ಇದೀಗ ‘ಶಾಂತಿ-ಕ್ರಾಂತಿ’ ಸಿನಿಮಾದ ಮರು ಬಿಡುಗಡೆಗೆ ಇರುವ ಸಮಸ್ಯೆಗಳನ್ನು ವಿವರಿಸಿದ್ದಾರೆ.

‘ಶಾಂತಿ-ಕ್ರಾಂತಿ’ ಸಿನಿಮಾ ರೀ-ರಿಲೀಸ್ ಬಗ್ಗೆ ರವಿಚಂದ್ರನ್ ಹೇಳಿದ್ದೇನು?
V Ravichandran
ಮಂಜುನಾಥ ಸಿ.
|

Updated on: Sep 01, 2026 | 3:18 PM

Share

ಮುಖ್ಯಾಂಶಗಳು

  • ‘ಶಾಂತಿ-ಕ್ರಾಂತಿ’ ಕನ್ನಡದ ಕಲ್ಟ್ ಸಿನಿಮಾ
  • ‘ಶಾಂತಿ-ಕ್ರಾಂತಿ’ ಸಿನಿಮಾ ಮರು ಬಿಡುಗಡೆ ಮಾಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
  • ಸಿನಿಮಾ ಮರು ಬಿಡುಗಡೆಗೆ ಇರುವ ಸಮಸ್ಯೆ ಬಗ್ಗೆ ರವಿಚಂದ್ರನ್ ಮಾತನಾಡಿದ್ದಾರೆ.

‘ಶಾಂತಿ-ಕ್ರಾಂತಿ’ (Shanti Kranthi) ಸಿನಿಮಾ ರೀ ರಿಲೀಸ್ ಬಗ್ಗೆ ಬೇಡಿಕೆ ಶುರುವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಹಳೆಯ ಸಿನಿಮಾದ ರೀ ರಿಲೀಸ್​​ಗೆ ಪ್ರೇಕ್ಷಕರಿಂದಲೇ ಇಷ್ಟೋಂದು ಬೇಡಿಕೆ ಬಂದಿರುವುದು ಇದೇ ಮೊದಲು. ಹಲವಾರು ಮಂದಿ ಸಿನಿಮಾ ಪ್ರೇಮಿಗಳು, ಅಭಿಮಾನಿಗಳು ‘ಶಾಂತಿ-ಕ್ರಾಂತಿ’ ಸಿನಿಮಾ ಅನ್ನು ರೀ-ರಿಲೀಸ್ ಮಾಡಿ ಎಂದು ಬೇಡಿಕೆ ಇಡುತ್ತಿದ್ದಾರೆ. ಮೊದಲು ಬಿಡುಗಡೆ ಆಗಿದ್ದ ಸೋತಿದ್ದ ಸಿನಿಮಾವನ್ನು ಈಗ ಗೆಲ್ಲಿಸಬೇಕು ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ಗಳು ಹರಿದಾಡುತ್ತಿವೆ. ‘ಶಾಂತಿ-ಕ್ರಾಂತಿ’ ಸಿನಿಮಾದ ನಟ, ನಿರ್ದೇಶಕ ರವಿಚಂದ್ರನ್ ಅವರು ಇದೀಗ ‘ಶಾಂತಿ-ಕ್ರಾಂತಿ’ ಸಿನಿಮಾದ ಮರು ಬಿಡುಗಡೆಗೆ ಇರುವ ಸಮಸ್ಯೆಗಳನ್ನು ವಿವರಿಸಿದ್ದಾರೆ.

ಎಫ್​​ಪಿಎಲ್ (ಫಾದರ್ಸ್ ಪ್ರೀಮಿಯರ್ ಲೀಗ್) ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾಗ ಈ ಬಗ್ಗೆ ಮಾತನಾಡಿದ ನಟ ರವಿಚಂದ್ರನ್, ‘ಸಿನಿಮಾ ಬಿಡುಗಡೆ ಮಾಡುವುದು ನನ್ನ ತಮ್ಮನ ಕೈಯಲ್ಲಿದೆ. ಏಕೆಂದರೆ ಆ ಸಿನಿಮಾಕ್ಕೆ ಆತನೇ ಪ್ರೊಪರೇಟರ್. ಸಿನಿಮಾದ ಮರು ಬಿಡುಗಡೆ ಮಾಡಲು ಇರುವ ಇನ್ನೊಂದು ಸಮಸ್ಯೆ ಎಂದರೆ ಆ ಸಿನಿಮಾದ ನೆಗೆಟಿವ್​​ಗಳು ಈಗ ಇಲ್ಲ. ಪ್ರಸಾದ್ ಲ್ಯಾಬ್ ಅಲ್ಲಿ ‘ಶಾಂತಿ ಕ್ರಾಂತಿ’ ಸಿನಿಮಾದ ನೆಗೆಟಿವ್​​ಗಳು ಇದ್ದವು. ಆದರೆ 25 ವರ್ಷಕ್ಕೂ ಹೆಚ್ಚು ಅವಧಿ ಆಗಿದ್ದರಿಂದ ಅದೆಲ್ಲ ಕರಗಿ ಹೋಗಿವೆ, ಹಾಳಾಗಿವೆ’ ಎಂದಿದ್ದರು.

‘ಬೇರೆ ಎಲ್ಲಾದರೂ ‘ಶಾಂತಿ-ಕ್ರಾಂತಿ’ ಸಿನಿಮಾದ ನೆಗೆಟಿವ್​​ಗಳು ಇವೆ ಎಂದು ಹುಡಬೇಕು. ಅವರನ್ನು ಈಗ ತಂತ್ರಜ್ಞಾನ ಬಳಸಿ ಅದನ್ನೆಲ್ಲ ರಿಟ್ರೀವ್ ಮಾಡಬೇಕು ಅದಕ್ಕೆಲ್ಲ ಬಹಳ ಟೈಂ ಹಿಡಿಯುತ್ತದೆ. ಮಾತ್ರವೇ ಅಲ್ಲದೆ, ಮತ್ತೆ 2 ರಿಂದ 3 ಕೋಟಿ ರೂಪಾಯಿ ಹಣವನ್ನೂ ಸಹ ನಾವು ಹೂಡಿಕೆ ಮಾಡಬೇಕಾಗುತ್ತದೆ. ಸಿನಿಮಾದ ಸಂಗೀತವನ್ನು ಮತ್ತೆ ಮಾಡಿಸಬೇಕು ಮತ್ತೆ ಆರ್ಕೇಸ್ಟ್ರಾ ಎಲ್ಲವನ್ನೂ ಮಾಡಿಸಬೇಕು. ಆಗಿನ ಕಾಲಕ್ಕೆ ಬಹು ದೊಡ್ಡ ಆರ್ಕೆಸ್ಟ್ರಾ ಅನ್ನು ನಾವು ಅರೇಂಜ್ ಮಾಡಿಸಿದ್ದೆವು’ ಎಂದು ರವಿಚಂದ್ರನ್ ಹೇಳಿದ್ದಾರೆ.

ಇದನ್ನೂ ಓದಿ:ಶ್ರೀಮಂತಿಕೆಯಲ್ಲಿ ಹೃತಿಕ್ ರೋಷನ್, ಅಮಿತಾಬ್ ಬಚ್ಚನ್ ಅನ್ನೂ ಹಿಂದಿಕ್ಕಿದ ನಟಿ

ಕೆಲ ದಿನಗಳ ಮುಂಚೆ ರವಿಚಂದ್ರನ್ ಅವರ ಸಹೋದರ ಬಾಲಾಜಿ ಸಹ ಇದೇ ವಿಷಯವಾಗಿ ವಿಡಿಯೋ ಒಂದನ್ನು ಮಾಡಿ ಮಾಹಿತಿ ಹಂಚಿಕೊಂಡಿದ್ದರು. ‘ಶಾಂತಿ-ಕ್ರಾಂತಿ’ ಸಿನಿಮಾ ಅನ್ನು ಮರು ಬಿಡುಗಡೆ ಮಾಡುವ ಕೆಲಸಕ್ಕೆ ಚಾಲನೆ ನೀಡಿದ್ದೇವೆ. ಆದರೆ ಆ ಸಿನಿಮಾ ಅನ್ನು ಉತ್ತಮ ಗುಣಮಟ್ಟದಲ್ಲಿ ಮರು ಬಿಡುಗಡೆ ಮಾಡಬೇಕು ಎಂದರೆ ಕನಿಷ್ಟ ಒಂದು ವರ್ಷ ಸಮಯ ಹಿಡಿಯುತ್ತದೆ ಎಂದಿದ್ದರು.

‘ಶಾಂತಿ-ಕ್ರಾಂತಿ’ ಒಂದು ರೀತಿಯಲ್ಲಿ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಆ ಸಿನಿಮಾವನ್ನು ರವಿಚಂದ್ರನ್ ನಿರ್ದೇಶನ ಮಾಡಿದ್ದರು. ಒಟ್ಟಿಗೆ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣ ಮಾಡಿದ್ದರು ರವಿಚಂದ್ರನ್. ಈಗಿನಂತೆ ಬೇರೆ ಭಾಷೆಗಳಿಗೆ ಡಬ್ಬಿಂಗ್ ಅಲ್ಲ ಬದಲಿಗೆ ಆಯಾ ಭಾಷೆಯಲ್ಲಿ ಶೂಟಿಂಗ್ ಸಹ ಮಾಡಿದ್ದರು. ಆಗಿನ ಕಾಲಕ್ಕೆ (1991) ಆ ಸಿನಿಮಾಕ್ಕೆ ಸುಮಾರು 18 ಕೋಟಿ ಖರ್ಚು ಮಾಡಿದ್ದರಂತೆ. ರವಿಚಂದ್ರನ್ ಅವರೇ ಹೇಳಿರುವಂತೆ ಆ ಸಿನಿಮಾದ ಒಂದು ದಿನದ ಶೂಟಿಂಗ್ ಖರ್ಚು 6 ಲಕ್ಷ ರೂಪಾಯಿ ಆಗುತ್ತಿತ್ತಂತೆ. ಪ್ರತಿ ದಿನ ಸಿನಿಮಾದ ಸೆಟ್​​ನಲ್ಲಿ ಸುಮಾರು 5000 ಜನರಿಗೆ ಊಟ ತಯಾರಾಗುತ್ತಿತ್ತಂತೆ. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಫ್ಲಾಪ್ ಆಗಿತ್ತು. ಆದರೆ ಇದೀಗ ಆ ಸಿನಿಮಾ ಅನ್ನು ಮರು ಬಿಡುಗಡೆ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ