AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬ್ರಹ್ಮರಾಕ್ಷಸ’ ತಂಡದಿಂದ ‘ಶ್ರೀಕೃಷ್ಣ’ ಸಿನಿಮಾ: ಉಧೋ ಉಧೋ ಯಲ್ಲವ್ವ ಹಾಡು ರಿಲೀಸ್

ಈ ಹಿಂದೆ ‘ಬ್ರಹ್ಮರಾಕ್ಷಸ’ ಸಿನಿಮಾದಲ್ಲಿ ಕೆಲಸ ಮಾಡಿದ್ದ ಬಹುತೇಕರು ಸೇರಿಕೊಂಡು ಈಗ ‘ಶ್ರೀಕೃಷ್ಣ’ ಸಿನಿಮಾ ಮಾಡಿದ್ದಾರೆ, ಈ ಸಿನಿಮಾದ ‘ಉಧೋ ಉಧೋ ಯಲ್ಲವ್ವ’ ಹಾಡು ಸಿರಿ ಮ್ಯೂಸಿಕ್ ಮೂಲಕ ರಿಲೀಸ್ ಮಾಡಲಾಗಿದೆ. ಈ ವೇಳೆ ‘ಶ್ರೀಕೃಷ್ಣ’ ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

‘ಬ್ರಹ್ಮರಾಕ್ಷಸ’ ತಂಡದಿಂದ ‘ಶ್ರೀಕೃಷ್ಣ’ ಸಿನಿಮಾ: ಉಧೋ ಉಧೋ ಯಲ್ಲವ್ವ ಹಾಡು ರಿಲೀಸ್
Udho Udho Yellavva
ಮದನ್​ ಕುಮಾರ್​
|

Updated on: Mar 30, 2026 | 9:54 PM

Share

ಕನ್ನಡ ಚಿತ್ರರಂಗದಲ್ಲಿ ಯಲ್ಲಮ್ಮನ (Yellamma) ಕುರಿತು ಒಂದಷ್ಟು ಹಾಡುಗಳು ಬಂದಿವೆ. ಈಗ ಅವುಗಳ ಸಾಲಿಗೆ ಮತ್ತೊಂದು ಹೊಸ ಗೀತೆ ಸೇರ್ಪಡೆ ಆಗಿದೆ. ಈ ಹಿಂದೆ ‘ಬ್ರಹ್ಮರಾಕ್ಷಸ’ ಸಿನಿಮಾ ಮಾಡಿದ್ದ ಶಂಕರ್ ರಾಜ ವರ್ಮ ಅವರು ಈಗ ‘ಶ್ರೀಕೃಷ್ಣ’ (Shri Krishna) ಎಂಬ ಹೊಸ ಚಿತ್ರವನ್ನು ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ಲ್ಯಾನ್ ಇದೆ. ಈಗ ಇದೇ ಸಿನಿಮಾದಿಂದ ‘ಉಧೋ ಉಧೋ ಯಲ್ಲವ್ವ..’ (Udho Udho Yellavva) ಹಾಡನ್ನು ರಿಲೀಸ್ ಮಾಡಲಾಗಿದೆ.

ಈ ಹಾಡಿಗೆ ಎಂ.ಎಸ್‍. ತ್ಯಾಗರಾಜ್‍ ಅವರು ಸಾಹಿತ್ಯ ಬರೆದು, ಸಂಗೀತ ನೀಡಿದ್ದಾರೆ. ಅಲ್ಲದೇ, ಅವರೇ ಧ್ವನಿಯಾಗಿದ್ದಾರೆ. ಅವರ ಜೊತೆಗೆ ಸರಯೂ ಕೂಡ ಹಾಡಿದ್ದಾರೆ. ‘ಸಿರಿ ಮ್ಯೂಸಿಕ್‍’ ಮೂಲಕ ಈ ಲಿರಿಕಲ್‍ ಹಾಡು ಬಿಡುಗಡೆ ಆಗಿದೆ. ಹಾಡಿನ ಬಿಡುಗಡೆ ಕಾರ್ಯಕ್ರಮದ ವೇಳೆ ಚಿತ್ರತಂಡದವರು ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ಬೃಹಸ್ಪತಿ ಕ್ರಿಯೇಷನ್ಸ್’ ಬ್ಯಾನರ್‍ ಮೂಲಕ ಶಂಕರ್‍ ರಾಜ ವರ್ಮ ಮತ್ತು ಅಜಯ್‍ ಕುಮಾರ್ ಪಿ.ಎಂ. ಅವರು ‘ಶ್ರೀಕೃಷ್ಣ’ ಸಿನಿಮಾ ನಿರ್ಮಿಸುತ್ತಿದ್ದಾರೆ. ಶಿವಲಿಂಗಯ್ಯ ಸಿ.ಎಂ, ಉಲ್ಲಾಸ್‍ ಕೆ.ಸಿ.ಎಸ್., ಚಾಣುಕ್ಯ ಆರ್‍, ‘ನೆನಪಿರಲಿ’ ಮೋಹನ್‍ ಹಾಗೂ ಲತಾ ಮಂಜುನಾಥ್‍ ಸಹ ನಿರ್ಮಾಪಕರಾಗಿದಾರೆ.

Shri Krishna Movie Team

Shri Krishna Movie Team

ನಟ-ನಿರ್ದೇಶಕ ಶಂಕರ್ ರಾಜ ವರ್ಮ ಮಾತನಾಡಿ, ‘ನಾನು ನಿರ್ದೇಶಕನಾಗುತ್ತೇನೆ, ಒಂದು ಸಂಸ್ಥೆ ಕಟ್ಟಿ ಇಷ್ಟು ದೂರ ಸಾಗುತ್ತೇನೆ ಎಂದು ಯಾವತ್ತೂ ಯೋಚಿಸಿರಲಿಲ್ಲ. ಅದಕ್ಕೆ ಕಾರಣರಾದವರು ನಮ್ಮ ತಂದೆ-ತಾಯಿ, ಕುಟುಂಬದವರು ಮತ್ತು ಸ್ನೇಹಿತರು. ಅವರೆಲ್ಲರ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರ ಸಾಧ್ಯವಾಗಿದೆ. ‘ಬ್ರಹ್ಮರಾಕ್ಷಸ’ ಚಿತ್ರದಲ್ಲಿ ಬಹುತೇಕ ಯಾರೆಲ್ಲಾ ಕೆಲಸ ಮಾಡಿದ್ದಾರೋ, ಅವರೆಲ್ಲರೂ ಈ ಚಿತ್ರತಂಡದಲ್ಲಿದ್ದಾರೆ’ ಎಂದು ಹೇಳಿದರು.

ಉಧೋ ಉಧೋ ಯಲ್ಲವ್ವ ಹಾಡು:

ಕಥೆ ಬಗ್ಗೆ ಕೂಡ ಅವರು ಮಾಹಿತಿ ನೀಡಿದರು. ‘ಮೂವರು ಅನಾಥರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಸಿನಿಮಾ ಹೇಳುತ್ತದೆ. ಇಲ್ಲಿ ನಾಯಕಿ ಸಹ ಅನಾಥೆ. ಎಲ್ಲರೂ ಜೊತೆಯಾಗಿರುವಾಗ ಅವರ ಜೀವನದಲ್ಲೊಂದು ಘಟನೆ ನಡೆಯುತ್ತದೆ. ಇದರಿಂದ ಅವರು ಜೈಲಿಗೆ ಹೋಗಬೇಕಾಗುತ್ತದೆ. ಜೈಲಿಂದ ತಪ್ಪಿಸಿಕೊಂಡು ಬಂದ ನಂತರ ಅವರು ಏನೆಲ್ಲಾ ಮಾಡುತ್ತಾರೆ ಎನ್ನುವುದೇ ಚಿತ್ರದ ಕಥೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಯಲ್ಲಮ್ಮ’ ಸಿನಿಮಾದಿಂದ ಹೊರನಡೆದ ಸಾಯಿ ಪಲ್ಲವಿ, ಕಾರಣವೇನು?

ಅನಿರುದ್ಧ್ ಅವರ ಛಾಯಾಗ್ರಹಣ, ಕೀರ್ತಿರಾಜು ಅವರ ಸಂಕಲನ ‘ಶ್ರೀಕೃಷ್ಣ’ ಚಿತ್ರಕ್ಕಿದೆ. ಚೈತ್ರಾ ತೋಟದ್ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಹುಬ್ಬಳ್ಳಿ ಮೂಲದ ಅವರು ‘ಬ್ರಹ್ಮರಾಕ್ಷಸ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಿದ್ದರು. ಈಗ ನಾಯಕಿಯಾಗಿದ್ದಾರೆ. ಪ್ರದೀಪ್‍ ಪೂಜಾರಿ, ಭುವನ್‍ ಗೌಡ, ಸ್ನೇಹಾ, ಈಶ್ವರ್‍ ಶೆಟ್ಟಿ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ತಂಡದಿಂದ ಹೊರಹಾಕಿದ ಸಿಎಸ್​ಕೆ ವಿರುದ್ಧ ಮಿಂಚಿದ ಜಡೇಜಾ
ತಂಡದಿಂದ ಹೊರಹಾಕಿದ ಸಿಎಸ್​ಕೆ ವಿರುದ್ಧ ಮಿಂಚಿದ ಜಡೇಜಾ
BJP ರೋಡ್ ಶೋಗೆ ಕಾಂಗ್ರೆಸ್ ಧ್ವಜ ಹಿಡಿದು 'ಕೈ' ಕಾರ್ಯಕರ್ತರ ಎಂಟ್ರಿ!
BJP ರೋಡ್ ಶೋಗೆ ಕಾಂಗ್ರೆಸ್ ಧ್ವಜ ಹಿಡಿದು 'ಕೈ' ಕಾರ್ಯಕರ್ತರ ಎಂಟ್ರಿ!
ಕೈ ಮುಖಂಡನ ಹತ್ಯೆ ಯತ್ನ: ಚಾಕುವಿನಿಂದ ಚುಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕೈ ಮುಖಂಡನ ಹತ್ಯೆ ಯತ್ನ: ಚಾಕುವಿನಿಂದ ಚುಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಗ್ಯಾಸ್ ರೀಫಿಲ್ ಮಾಡುವಾಗ ಏಕಾಏಕಿ ಸಿಲಿಂಡರ್​ ಸ್ಫೋಟ: ಮನೆ ಛಿದ್ರಛಿದ್ರ
ಗ್ಯಾಸ್ ರೀಫಿಲ್ ಮಾಡುವಾಗ ಏಕಾಏಕಿ ಸಿಲಿಂಡರ್​ ಸ್ಫೋಟ: ಮನೆ ಛಿದ್ರಛಿದ್ರ
ಐಪಿಎಲ್ ಮ್ಯಾಚ್ ನೋಡಲು ಹೋಗುವ ಕ್ರಿಕೆಟ್ ಅಭಿಮಾನಿಗಳೇ ಈ ಮಹಿಳೆಯ ಮಾತು ಕೇಳಿ
ಐಪಿಎಲ್ ಮ್ಯಾಚ್ ನೋಡಲು ಹೋಗುವ ಕ್ರಿಕೆಟ್ ಅಭಿಮಾನಿಗಳೇ ಈ ಮಹಿಳೆಯ ಮಾತು ಕೇಳಿ
ಸೇತುವೆಯಿಂದ ಹಳ್ಳಕ್ಕೆ ಬಿದ್ದ ಬಸ್‌: ಪ್ರಯಾಣಿಕರು ಬದುಕುಳಿದಿದ್ದೇ ಪವಾಡ
ಸೇತುವೆಯಿಂದ ಹಳ್ಳಕ್ಕೆ ಬಿದ್ದ ಬಸ್‌: ಪ್ರಯಾಣಿಕರು ಬದುಕುಳಿದಿದ್ದೇ ಪವಾಡ
ಅಪಘಾತದಲ್ಲಿ ನವ ದಂಪತಿ ಸ್ಥಳದಲ್ಲೇ ದುರ್ಮರಣ: ಆಪ್ತರ ನೋವಿನ ಮಾತು
ಅಪಘಾತದಲ್ಲಿ ನವ ದಂಪತಿ ಸ್ಥಳದಲ್ಲೇ ದುರ್ಮರಣ: ಆಪ್ತರ ನೋವಿನ ಮಾತು
ಹೋಟೆಲ್​​ ಮಾಲೀಕರಿಗೆ ಗುಡ್​​ನ್ಯೂಸ್​​ ಕೊಟ್ಟ ಸಚಿವ ಮುನಿಯಪ್ಪ
ಹೋಟೆಲ್​​ ಮಾಲೀಕರಿಗೆ ಗುಡ್​​ನ್ಯೂಸ್​​ ಕೊಟ್ಟ ಸಚಿವ ಮುನಿಯಪ್ಪ
ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ 5 ದಿನ ಕ್ಯಾಂಪೇನ್​​​ಗೆ ಶ್ರೀರಾಮುಲು ವ್ಯಂಗ್ಯ
ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ 5 ದಿನ ಕ್ಯಾಂಪೇನ್​​​ಗೆ ಶ್ರೀರಾಮುಲು ವ್ಯಂಗ್ಯ
ಚಕ್ರದ ಅಡಿಯಲ್ಲಿ ಸಿಲುಕಿದ ಕರು
ಚಕ್ರದ ಅಡಿಯಲ್ಲಿ ಸಿಲುಕಿದ ಕರು