‘ಸು ಫ್ರಮ್ ಸೋ’ ಸಿನಿಮಾದ ಟಿವಿ ಪ್ರಸಾರ ದಿನಾಂಕ ರಿವೀಲ್
Su From So Movie: ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಸಿನಿಮಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಥಿಯೇಟರ್ ಮತ್ತು ಒಟಿಟಿಯಲ್ಲಿ ವೀಕ್ಷಿಸಲು ಸಾಧ್ಯವಾಗದಿದ್ದವರು, ಈಗ ಕುಟುಂಬದೊಂದಿಗೆ ಸಿನಿಮಾವನ್ನು ಮನೆಯಲ್ಲಿಯೇ ಆನಂದಿಸಬಹುದು. ಈ ಸಿನಿಮಾ 100 ಕೋಟಿ ರೂಪಾಯಿ ಗಳಿಕೆ ಮಾಡಿದೆ.

‘ಸು ಫ್ರಮ್ ಸೋ’ ಸಿನಿಮಾ (Su From So) ರಿಲೀಸ್ ಆಗಿ ಕೆಲವು ತಿಂಗಳು ಕಳೆದಿವೆ. ಈ ಸಿನಿಮಾ ಥಿಯೇಟರ್ ಬಳಿಕ ಒಟಿಟಿಯಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ ಎಂದು ವಾಹಿನಿಯವರು ಮಾಹಿತಿ ನೀಡಿದ್ದರು. ಕೊನೆಗೂ ಆ ದಿನಾಂಕ ರಿವೀಲ್ ಆಗಿದೆ. ಆ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯವರು ಸೋಶಿಯಲ್ ಮೀಡಿಯಾ ಖಾತೆ ಮೂಲಕ ಮಾಹಿತಿ ನೀಡಿದ್ದಾರೆ.
‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ಥಿಯೇಟರ್ನಲ್ಲಿ ರಿಲೀಸ್ ಆಯಿತು. ಜೆಪಿ ತುಮಿನಾಡ್ ನಿರ್ದೇಶನ ಈ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ನಿರ್ಮಾಣ ಇತ್ತು. ಈ ಸಿನಿಮಾದಲ್ಲಿ ಪ್ರಕಾಶ್ ತುಮ್ಮಿನಾಡ್, ದೀಪಕ್ ರೈ ಪಣಜೆ ಸೇರಿದಂತೆ ಅನೇಕರು ನಟಿಸಿದ್ದರು. ಈ ಸಿನಿಮಾ ದೊಡ್ಡ ಗೆಲುವು ಕಂಡಿತು. ಯಾವುದೇ ದೊಡ್ಡ ಸ್ಟಾರ್ಗಳು ಇಲ್ಲದೆ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಇದು ಚಿತ್ರದ ಹೆಚ್ಚುಗಾರಿಕೆ.
ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಸು ಫ್ರಮ್ ಸೋ’ ಸಿನಿಮಾ ಪ್ರಸಾರ ಕಾಣಲಿದೆ. ಅಕ್ಟೋಬರ್ 12ರಂದು ಸಂಜೆ 6 ಗಂಟೆಗೆ ಪ್ರಸಾರ ಕಾಣಲಿದೆ. ‘ವಿಷ್ಯ ಗೊತ್ತಾಯ್ತಾ? ಕಲರ್ಸ್ ಕನ್ನಡಕ್ಕೆ ಇದೇ ಅಕ್ಟೋಬರ್ 12 ಬಾವ ಬರ್ತಿದ್ದಾರಂತೆ’ ಎಂದು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಟಿವಿ ಹಾಗೂ ಒಟಿಟಿಯಲ್ಲಿ ಸಿನಿಮಾ ವೀಕ್ಷಿಸಲು ಸಾಧ್ಯವಾಗದೆ ಇದ್ದವರು ಟಿವಿಯಲ್ಲಿ ನೋಡಬಹುದಾಗಿದೆ.
ಸು ಫ್ರಮ್ ಸೋ ಟಿವಿ ಪ್ರೀಮಿಯರ್ ದಿನಾಂಕ
View this post on Instagram
‘ಸು ಫ್ರಮ್ ಸೋ’ ಸಿನಿಮಾದಲ್ಲಿ ಸಾಕಷ್ಟು ಹಾಸ್ಯ ವಿಚಾರಗಳಿವೆ. ಇದರ ಜೊತೆಗೆ ಒಂದೊಳ್ಳೆಯ ಸಂದೇಶವನ್ನು ಕೊಡುವ ಕೆಲಸ ಆಗಿದೆ. ಕುಟುಂಬದಿಂದಲೇ ಲೈಂಗಿಕ ದೌರ್ಜನ್ಯ ಉಂಟಾಗುವ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗಿದೆ. ಇಷ್ಟು ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.
ಇದನ್ನೂ ಓದಿ: ‘ಸು ಫ್ರಮ್ ಸೋ’ ಬಳಿಕ ಭಾನು ಜೊತೆ ಹೊಸ ಪ್ರಾಜೆಕ್ಟ್ ಘೋಷಿಸಿದ ರಾಜ್ ಬಿ ಶೆಟ್ಟಿ
ರಾಜ್ ಅವರು ಸದ್ಯ ತಮ್ಮ ಮುಂದಿನ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಅವರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದಾರೆ. ವೆಬ್ ಸೀರಿಸ್ ಮಾಡುವ ಆಲೋಚನೆಯೂ ಅವರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:03 am, Fri, 3 October 25







