Sakuchi Trailer: ಭಯ ಹುಟ್ಟಿಸುತ್ತಿದೆ ‘ಸಕೂಚಿ’ ಟ್ರೇಲರ್; ಈ ಶೀರ್ಷಿಕೆಯ ಅರ್ಥ ತಿಳಿಸಿದ ಚಿತ್ರತಂಡ
Sakuchi Kannada Movie | Sakuchi Movie Trailer: ‘ಜಂಕಾರ್ ಮ್ಯೂಸಿಕ್’ ಮೂಲಕ ‘ಸಕೂಚಿ’ ಟ್ರೇಲರ್ ಬಿಡುಗಡೆ ಆಗಿದೆ. ಸಿನಿಪ್ರಿಯರಿಗೆ ಈ ಟ್ರೇಲರ್ ತುಂಬ ಇಷ್ಟ ಆಗಿದೆ. ಫೆಬ್ರವರಿ 17ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಹಾರರ್ ಸಿನಿಮಾಗಳು (Horror Movie) ಬಂದಿವೆ. ಅವುಗಳಿಗಿಂತ ಕೊಂಚ ಭಿನ್ನವಾಗಿ ‘ಸಕೂಚಿ’ ಚಿತ್ರ (Sakuchi Movie) ತಯಾರಾಗಿದೆ ಎಂಬುದಕ್ಕೆ ಈ ಸಿನಿಮಾದ ಟ್ರೇಲರ್ ಸುಳಿವು ನೀಡುತ್ತಿದೆ. ಇದರ ಡಿಫರೆಂಟ್ ಶೀರ್ಷಿಕೆ ಗಮನ ಸೆಳೆಯುತ್ತಿದೆ. ‘ಸಾವಿನ ಸೂಚಿ’ ಎನ್ನುವ ಟ್ಯಾಗ್ ಲೈನ್ ಕೂಡ ಈ ಟೈಟಲ್ ಜೊತೆ ಇದೆ. ‘ಸಕೂಚಿ’ ಎಂದರೇನು? ಈ ಪ್ರಶ್ನೆಗೆ ನಿರ್ದೇಶಕ ಅಶೋಕ್ ಚಕ್ರವರ್ತಿ ಉತ್ತರ ನೀಡಿದ್ದಾರೆ. ‘ನಾನು ಸಕೂಚಿ ಶಬ್ದವನ್ನು ಒಂದಿಷ್ಟು ಕಡೆ ಕೇಳಿದ್ದೆ. ಆ ನಂತರ ಅದರ ಅರ್ಥ ಅತಿ ಗೋರವಾದ ವಾಮಾಚಾರ ಅಂತ ತಿಳಿಯಿತು. ಈ ಬ್ಲಾಕ್ ಮ್ಯಾಜಿಕ್ ಕಥೆ ಇಟ್ಟುಕೊಂಡು ಕಮರ್ಶಿಯಲ್ ಆಗಿ ಸಿನಿಮಾ ಮಾಡಿದ್ದೇವೆ. ಇದರಲ್ಲಿ ನಾಯಕ ಸಕೂಚಿಗೆ ಒಳಗಾಗುತ್ತಾನೆ’ ಎಂದು ಅವರು ಹೇಳಿದ್ದಾರೆ. ‘ಜಂಕಾರ್ ಮ್ಯೂಸಿಕ್’ ಮೂಲಕ ‘ಸಕೂಚಿ’ ಟ್ರೇಲರ್ (Sakuchi Trailer) ಬಿಡುಗಡೆ ಆಗಿದೆ.
ಸಿನಿಪ್ರಿಯರಿಗೆ ಈ ಟ್ರೇಲರ್ ತುಂಬ ಇಷ್ಟ ಆಗಿದೆ. ಫೆಬ್ರವರಿ 17ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಅಶೋಕ್ ಚಕ್ರವರ್ತಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಮೊದಲ ಸಿನಿಮಾ ಇದು. ‘ಶೂಟಿಂಗ್ ಸಮಯದಲ್ಲಿ ಒಂದಷ್ಟು ಘಟನೆಗಳು ನಡೆದಿದ್ದು, ನಮ್ಮ ಗಮನಕ್ಕೆ ಬಂದಿದೆ. ಸಿನಿಮಾವನ್ನು ದೈವ ಬಬ್ಬುಸ್ವಾಮಿಗೆ ಅರ್ಪಿಸುತ್ತೇನೆ’ ಎಂದಿದ್ದಾರೆ ನಿರ್ದೇಶಕರು.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಹೆದರಿಸೋಕೆ ಹೋಗುತ್ತಿದ್ದ ಶುಭಾ ಪೂಂಜಾ ಕೈಯಲ್ಲಿ ಈಗ ಹಾರರ್ ಸಿನಿಮಾ
‘ಸಕೂಚಿ’ ಚಿತ್ರಕ್ಕೆ ತ್ರಿವಿಕ್ರಮ ಸಾಮ್ರಾಟ್ ಹೀರೋ. ‘ನಾನು ವಿಕ್ಕಿ ಮಾರ್ಟಿನ್ ಎಂಬ ಪಾತ್ರ ಮಾಡಿದ್ದೇನೆ. ನನ್ನ ಪಾತ್ರದ ಮೂಲಕ ಸಂಬಂಧ, ಸ್ನೇಹ, ಪ್ರೀತಿ ಮುಂತಾದ ಅಂಶಗಳನ್ನು ತೋರಿಸಲಾಗಿದೆ. ಬ್ಲಾಕ್ ಮ್ಯಾಜಿಕ್ ಕುರಿತಾದ ಸಿನಿಮಾ ಇದಾಗಿದ್ದು, ಸಂಗೀತ ಈ ಚಿತ್ರದ ಹೈಲೈಟ್’ ಎಂದು ತ್ರಿವಿಕ್ರಮ ಹೇಳಿದ್ದಾರೆ. ಅವರಿಗೆ ಜೋಡಿಯಾಗಿ ಡಯಾನಾ ನಟಿಸಿದ್ದಾರೆ. ಅಶ್ವಿನ್ ಬಿ.ಸಿ. ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಹ ನಿರ್ಮಾಪಕರಾಗಿ ಮಧುಕರ್ ಜೆ. ಮತ್ತು ಮಹಾವೀರ್ ಪ್ರಸಾದ್ ಕೈ ಜೋಡಿಸಿದ್ದಾರೆ. ‘ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್’ ಮೂಲಕ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
ಸಂಜಯ್ ರಾಜ್ ಅವರು ನಟನೆ ಜೊತೆಗೆ ಸಹ-ನಿರ್ದೇಶನ ಕೂಡ ಮಾಡಿದ್ದಾರೆ. ‘ನೈಜ ಘಟನೆ ಆಧಾರಿತ ಈ ಸಿನಿಮಾದಲ್ಲಿ ನಿಜವಾದ 30-40 ಮಂಗಳಮುಖಿಯರು ನಟಿಸಿದ್ದಾರೆ’ ಎಂದು ಸಂಜಯ್ ರಾಜ್ ಮಾಹಿತಿ ನೀಡಿದ್ದಾರೆ. ಹರೀಶ್ ಅವರು ವಿಲನ್ ಪಾತ್ರ ಮಾಡಿದ್ದಾರೆ. ಗಣೇಶ್ ಗೋವಿಂದಸ್ವಾಮಿ ಅವರು ‘ಸಕೂಚಿ’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಆನಂದ್ ಸುಂದ್ರೇಶ್ ಛಾಯಾಗ್ರಹಣ, ಮಹೇಶ್ ಸಂಕಲನ, ಕುಂಫು ಚಂದ್ರು ಸಾಹಸ ನಿರ್ದೇಶನ, ಆನಂದ್ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.