‘ಶ್’ ಚಿತ್ರದಲ್ಲೇಕೆ ಬರ್ತಾರೆ ಉಪೇಂದ್ರ? ಆ ಟ್ವಿಸ್ಟ್ ಕೊಡಲು ಇತ್ತು ಕಾರಣ
18 ಲಕ್ಷದಲ್ಲಿ ‘ಶ್’ ಸಿನಿಮಾ ರೆಡಿ ಆಗಿತ್ತು. ಈ ಸಿನಿಮಾದಲ್ಲಿ ನಟಿಸೋಕೆ ಕಾಶಿನಾಥ್ ಒಪ್ಪಿಕೊಂಡರು. ಆ ರೀತಿ ಆದಾಗ ಮೂಡಿಬಂದಿದ್ದು ‘ಶ್’ ಸಿನಿಮಾ. ಈ ಚಿತ್ರ ಹಾರರ್ ಶೈಲಿಯಲ್ಲಿ ಇತ್ತು. ಆಗಿನ ಕಾಲದಲ್ಲಿ ಸೂಪರ್ ಹಿಟ್ ಆದ ಈ ಚಿತ್ರಕ್ಕೆ ಭರ್ಜರಿ ಮೆಚ್ಚುಗೆ ಸಿಕ್ಕಿತ್ತು. ಈಗಲೂ ಅನೇಕರ ಫೇವರಿಟ್ ಆಗಿ ಈ ಸಿನಿಮಾ ಇದೆ.
‘ಶ್’ ಸಿನಿಮಾ ಈಗಲೂ ಪ್ರೇಕ್ಷಕರಿಗೆ ಸಖತ್ ಇಷ್ಟ. ಈ ಸಿನಿಮಾ ಅನೇಕರ ಫೇವರಿಟ್ ಎನಿಸಿಕೊಂಡಿದೆ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಉಪೇಂದ್ರ ಅವರು. ಈ ಚಿತ್ರದಲ್ಲಿ ಅವರು ಅತಿಥಿ ಪಾತ್ರ ಕೂಡ ಮಾಡಿದ್ದರು. ಅವರ ಪಾತ್ರ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿತ್ತು. ಅತಿಥಿಯಾಗಿ ಬಂದು ಹೋಗುವ ಅವರು ಸಾಕಷ್ಟು ಗಮನ ಸೆಳೆದಿದ್ದರು. ಈ ಪಾತ್ರವನ್ನು ತರಬೇಕು ಎನ್ನುವ ಕಾನ್ಸೆಪ್ಟ್ ಬಂದಿದ್ದು ಹೇಗೆ ಎಂಬ ಬಗ್ಗೆ ಉಪೇಂದ್ರ ಹೇಳಿಕೊಂಡಿದ್ದರು.
ಕಾಶಿನಾಥ್ ಅವರು ‘ಶ್’ ಚಿತ್ರದಲ್ಲಿ ಡೈರೆಕ್ಟರ್ ಪಾತ್ರ ಮಾಡಿದ್ದಾರೆ. ಅವರು ಶೂಟಿಂಗ್ಗೆ ತೆರಳುತ್ತಾರೆ. ಮಧ್ಯಂತರ ಸಂದರ್ಭದಲ್ಲಿ ಉಪೇಂದ್ರ ಅವರು ಪೊಲೀಸ್ ಅಧಿಕಾರಿಯಾಗಿ ಎಂಟ್ರಿ ಕೊಡುತ್ತಾರೆ. ‘ಕಾಶಿನಾಥ್ ನಕಲಿ ಡೈರೆಕ್ಟರ್’ ಎಂದು ಹೇಳುತ್ತಾರೆ. ಅಲ್ಲಿಗೆ ಮಧ್ಯಂತರ. ಆ ಬಳಿಕ ಟ್ಯಾಲೆಂಟ್ ತೋರಿಸಲು ಈ ರೀತಿ ಮಾಡಿದೆ ಎಂದು ಉಪೇಂದ್ರ ಹೇಳುವಾಗ ಅವರಿಗೆ ಏಟುಗಳು ಬೀಳುತ್ತವೆ. ಈ ದೃಶ್ಯ ಇಟ್ಟಿದ್ದು ಏಕೆ ಎಂಬುದನ್ನು ಉಪೇಂದ್ರ ಹೇಳಿದ್ದರು.
‘ಮಧ್ಯಂತರಕ್ಕೆ ಒಂದು ಜರ್ಕ್ ಬೇಕಿತ್ತು. ಆಗ ಈ ಐಡಿಯಾ ಬಂತು. ಬಂದು ಯಾರನ್ನಾದರೂ ಅರೆಸ್ಟ್ ಮಾಡಿದ್ರೆ ಹೇಗೆ? ಕಾಶಿನಾಥ್ನ ಅರೆಸ್ಟ್ ಮಾಡಿ ಅದಕ್ಕೆ ಲಾಜಿಕ್ ಕೊಟ್ವಿ. ನಂತರ ಟ್ಯಾಲೆಂಟ್ ತೋರಿಸೋಕೆ ಬಂದೆ ಅಂತ ಹೇಳಿದೆವು. ಆ ಪಾತ್ರದಲ್ಲಿ ನಾನೇ ನಟಿಸುತ್ತೇನೆ ಎಂದು ಮುಂದೆಬಂದೆ’ ಎಂದಿದ್ದಾರೆ ಉಪೇಂದ್ರ. ಶಂಕರ್ನಾಗ್ ಅವರಿಂದ ಸ್ಫೂರ್ತಿ ಪಡೆದು ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು ಉಪೇಂದ್ರ.
View this post on Instagram
18 ಲಕ್ಷದಲ್ಲಿ ‘ಶ್’ ಸಿನಿಮಾ ರೆಡಿ ಆಗಿತ್ತು. ಈ ಸಿನಿಮಾದಲ್ಲಿ ನಟಿಸೋಕೆ ಕಾಶಿನಾಥ್ ಒಪ್ಪಿಕೊಂಡರು. ಆ ರೀತಿ ಆದಾಗ ಮೂಡಿಬಂದಿದ್ದು ‘ಶ್’ ಸಿನಿಮಾ. ಈ ಚಿತ್ರ ಹಾರರ್ ಶೈಲಿಯಲ್ಲಿ ಇತ್ತು. ಆಗಿನ ಕಾಲದಲ್ಲಿ ಸೂಪರ್ ಹಿಟ್ ಆದ ಈ ಚಿತ್ರಕ್ಕೆ ಭರ್ಜರಿ ಮೆಚ್ಚುಗೆ ಸಿಕ್ಕಿತ್ತು. ಈಗಲೂ ಅನೇಕರ ಫೇವರಿಟ್ ಆಗಿ ಈ ಸಿನಿಮಾ ಇದೆ.
ಇದನ್ನೂ ಓದಿ: ಶಿವಣ್ಣ-ಉಪೇಂದ್ರರ ಸಿನಿಮಾ ತಂಡ ಸೇರಿದ ಹಾಲಿವುಡ್ ತಂತ್ರಜ್ಞರು
ಉಪೇಂದ್ರ ಅವರು ‘ಯುಐ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ಡಿಸೆಂಬರ್ 20ರಂದು ರಿಲೀಸ್ ಆಗಲಿದೆ. ಈ ಚಿತ್ರ ಪ್ರಚಾರದಲ್ಲಿ ಅವರು ಬ್ಯುಸಿ ಇದ್ದಾರೆ. ಈ ಚಿತ್ರ ಭವಿಷ್ಯದಲ್ಲಿ ಸಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:45 am, Tue, 10 December 24