Ravichandran Birthday: ರವಿಚಂದ್ರನ್ಗೆ ಈ ಬಾರಿಯ ಜನ್ಮದಿನ ಸ್ವಲ್ಪ ವಿಶೇಷ, ಸ್ವಲ್ಪ ದುಃಖ
ಬಾಲನಟನಾಗಿ ಗುರುತಿಸಿಕೊಂಡ ರವಿಚಂದ್ರನ್ ಅವರು ನಂತರ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಪಡೆದರು. 1982ರಲ್ಲಿ ಅವರು ಹೀರೋ ಆಗಿ ಬಡ್ತಿ ಪಡೆದರು. ಸುಮಾರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಅವರು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡದಲ್ಲಿ ‘ಪ್ರೇಮಲೋಕ’ (Premaloka Movie) ಸೃಷ್ಟಿ ಮಾಡಿದ ವಿ.ರವಿಚಂದ್ರನ್ (V Ravichandran) ಅವರು ಇಂದು (ಮೇ 30) 61ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡ ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ಎಲ್ಲರೂ ಕ್ರೇಜಿಸ್ಟಾರ್ಗೆ ಬರ್ತ್ಡೇ ಶುಭಾಶಯ ತಿಳಿಸುತ್ತಿದ್ದಾರೆ. ಅವರಿಗೆ ಈ ಬಾರಿಯ ಜನ್ಮದಿನ ಸ್ವಲ್ಪ ವಿಶೇಷ, ಸ್ವಲ್ಪ ದುಃಖ ತರುವಂತಹದ್ದಾಗಿದೆ. ಅದಕ್ಕೆ ಕಾರಣ ಏನು ಎಂಬುದಕ್ಕೆ ಇಲ್ಲಿದೆ ಉತ್ತರ.
ಬಣ್ಣದ ಲೋಕದಲ್ಲಿ ಬಾಲನಟನಾಗಿ ಗುರುತಿಸಿಕೊಂಡ ರವಿಚಂದ್ರನ್ ಅವರು ನಂತರ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಪಡೆದರು. 1982ರಲ್ಲಿ ಅವರು ಹೀರೋ ಆಗಿ ಬಡ್ತಿ ಪಡೆದರು. ಸುಮಾರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಅವರು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ, ‘ರವಿ ಬೋಪಣ್ಣ’ ಹಾಗೂ ‘ಕ್ರಾಂತಿ’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಚಿತ್ರದಿಂದ ಅಪ್ಡೇಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಫ್ಯಾನ್ಸ್ ಇದ್ದಾರೆ.
ಇದನ್ನೂ ಓದಿ: ನಂಗೆ ಲವ್ ಫೈಲ್ಯುರ್ ಆಗಿಲ್ಲ: ರವಿಚಂದ್ರನ್ ಮುಂದೆ ಮನಬಿಚ್ಚಿದ ರಕ್ಷಿತ್ ಶೆಟ್ಟಿ
ವಿಶೇಷ ಬರ್ತ್ಡೇ
ರವಿಚಂದ್ರನ್ ಅವರು ಇತ್ತೀಚೆಗೆ ನಟಿಸಿದ ಯಾವ ಸಿನಿಮಾ ಕೂಡ ಅಷ್ಟು ದೊಡ್ಡ ಯಶಸ್ಸು ಪಡೆಯಲಿಲ್ಲ. ಆದರೆ, ಇತ್ತೀಚೆಗೆ ತೆರೆಗೆ ಬಂದ ‘ದೃಶ್ಯ 2’ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತು. ಇದು ಅವರಿಗೆ ಖುಷಿ ನೀಡಿದೆ. ಅವರ ಅಭಿಮಾನಿಗಳೂ ಈ ವಿಚಾರದಲ್ಲಿ ಸಂಭ್ರಮಿಸುತ್ತಿದ್ದಾರೆ. ಹೀಗಾಗಿ, ಅವರಿಗೆ ಈ ವರ್ಷದ ಬರ್ತ್ಡೇ ವಿಶೇಷವಾಗಿದೆ. ಇನ್ನು, ಅವರು ಕಲಾವಿದನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡು ನಾಲ್ಕು ದಶಕ ಕಳೆದಿದೆ. ಈ ಕಾರಣಕ್ಕೂ ಅವರಿಗೆ ಜನ್ಮದಿನ ಸ್ಪೆಷಲ್.
ತಾಯಿ ಕಳೆದುಕೊಂಡ ದುಃಖ
ರವಿಚಂದ್ರನ್ ಅವರ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ ಅವರು ಈ ವರ್ಷ ಫೆ.28ರಂದು ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಪಟ್ಟಮ್ಮಾಳ್ ವೀರಸ್ವಾಮಿ ಅವರು ಕೊನೆಯುಸಿರು ಎಳೆದರು. ಈ ಕಾರಣಕ್ಕೆ ತಾಯಿ ಇಲ್ಲದೆ ಅವರು ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದೆ. ಇದು ಅವರಿಗೆ ತೀವ್ರ ನೋವು ತಂದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.