Kasina Sara Movie: ವಿಜಯ್​ ರಾಘವೇಂದ್ರ, ಹರ್ಷಿಕಾ ನಟನೆಯ ‘ಕಾಸಿನ ಸರ’ ಚಿತ್ರ ಮಾರ್ಚ್​ 3ಕ್ಕೆ ರಿಲೀಸ್; ಇದರಲ್ಲಿದೆ ರೈತರ ಕಥೆ

Harshika Poonacha | Vijay Raghavendra: ವಿಜಯ್​ ರಾಘವೇಂದ್ರ ಅವರು ‘ಕಾಸಿನ ಸರ’ ಚಿತ್ರದಲ್ಲಿ ರೈತ ಹೋರಾಟಗಾರನ ಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ಹರ್ಷಿಕಾ ಪೂಣಚ್ಚ ನಟಿಸಿದ್ದಾರೆ.

Kasina Sara Movie: ವಿಜಯ್​ ರಾಘವೇಂದ್ರ, ಹರ್ಷಿಕಾ ನಟನೆಯ ‘ಕಾಸಿನ ಸರ’ ಚಿತ್ರ ಮಾರ್ಚ್​ 3ಕ್ಕೆ ರಿಲೀಸ್; ಇದರಲ್ಲಿದೆ ರೈತರ ಕಥೆ
ಹರ್ಷಿಕಾ ಪೂಣಚ್ಚ, ವಿಜಯ್ ರಾಘವೇಂದ್ರ
Follow us
ಮದನ್​ ಕುಮಾರ್​
|

Updated on: Feb 28, 2023 | 4:10 PM

ಭಾರತದಲ್ಲಿ ಕೃಷಿ ಮಾಡಿ ಬದುಕುವವರ ಸಂಖ್ಯೆ ದೊಡ್ಡದಿದೆ. ಆದರೆ ಕೃಷಿಗೆ ಸಂಬಂಧಿಸಿದ ಸಿನಿಮಾಗಳ ಸಂಖ್ಯೆ ವಿರಳ. ಅಲ್ಲೊಂದು ಇಲ್ಲೊಂದು ಪ್ರಯತ್ನಗಳು ಮಾತ್ರ ಆಗುತ್ತವೆ. ಆ ಸಾಲಿಗೆ ಹೊಸ ಸೇರ್ಪಡೆ ಆಗಿದೆ ‘ಕಾಸಿನ ಸರ’ (Kasina Sara) ಸಿನಿಮಾ. ಈ ಚಿತ್ರಕ್ಕೆ ಎನ್.ಆರ್. ನಂಜುಂಡೇಗೌಡ ನಿರ್ದೇಶನ ಮಾಡಿದ್ದಾರೆ. ಗ್ರಾಮೀಣ ಭಾಗದವರೇ ಆದಂತಹ ದೊಡ್ಡನಾಗಯ್ಯ ಬಂಡವಾಳ ಹೂಡಿದ್ದಾರೆ. ಖ್ಯಾತ ನಟ ವಿಜಯ್ ರಾಘವೇಂದ್ರ (Vijay Raghavendra) ಅವರು ‘ಕಾಸಿನ ಸರ’ ಚಿತ್ರಕ್ಕೆ ಹೀರೋ. ಹಿರಿಯ ನಟಿ ಉಮಾಶ್ರೀ ಕೂಡ ಇದರಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ನಾಯಕಿಯಾಗಿ ಹರ್ಷಿಕಾ ಪೂಣಚ್ಚ (Harshika Poonacha) ನಟಿಸಿದ್ದಾರೆ. ಮಾರ್ಚ್​ 3ರಂದು ಈ ಸಿನಿಮಾ ತೆರೆಕಾಣಲಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡದವರು ‘ಕಾಸಿನ ಸರ’ದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ವಿಜಯ್​ ರಾಘವೇಂದ್ರ ಅವರು ‘ಕಾಸಿನ ಸರ’ ಚಿತ್ರದಲ್ಲಿ ರೈತ ಹೋರಾಟಗಾರನ ಪಾತ್ರ ಮಾಡಿದ್ದಾರೆ. ಹಲವು ಕಾರಣಗಳಿಂದಾಗಿ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗಲಿದೆ ಎಂದು ಅವರು ಭರವಸೆ ಇಟ್ಟುಕೊಂಡಿದ್ದಾರೆ. ‘ಈ ಥರದ ಬದುಕೂ ಇದೆ. ಇದರ ಮೇಲೆ ನಮ್ಮ ಜೀವನ ಅವಲಂಬಿತವಾಗಿದೆ ಎಂದು ನಾಡಿನ ಜನರಿಗೆ ಹೇಳುವ ಸಿನಿಮಾ ಇದು. ನಿರ್ದೇಶಕರು ತುಂಬ ಭಾವುಕವಾಗಿ ಆಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: R Chandru: ಅಪ್ಪ ಮಾರಿದ್ದ ಕಾಸಿನ ಸರ ಅಮ್ಮನಿಗಾಗಿ ತಂದ ಮಗ: ಆರ್ ಚಂದ್ರು ಕಂಡ ಕಷ್ಟಗಳ ಬಗ್ಗೆ ಪೋಷಕರ ಮಾತು

ಇದನ್ನೂ ಓದಿ
Image
Sreeleela: ಶ್ರೀಲೀಲಾ ಸಿನಿಮಾ ಲೈನಪ್​ ನೋಡಿ ಇತರ ನಟಿಯರಿಗೆ ಶಾಕ್​; ರಶ್ಮಿಕಾ ಬೇಡಿಕೆ ಕುಗ್ಗಿಸಲಿದ್ದಾರೆ ಕನ್ನಡತಿ?
Image
Tanya Hope: ಸುಡು ಬೇಸಿಗೆಯಲ್ಲೂ ‘ಕಬ್ಜ’ ಚಿತ್ರದ ‘ಚುಂ ಚುಂ ಚಳಿ..’ ಹಾಡಿಗೆ ಉಪೇಂದ್ರ ಅಭಿಮಾನಿಗಳು ಫಿದಾ
Image
Mallika Singh: ಕನ್ನಡ ಚಿತ್ರ ಒಪ್ಪಿಕೊಂಡ ‘ರಾಧಾ ಕೃಷ್ಣ’ ಧಾರಾವಾಹಿ​ ನಟಿ ಮಲ್ಲಿಕಾ ಸಿಂಗ್​; ವಿನಯ್​ ರಾಜ್​ಕುಮಾರ್​ಗೆ ಜೋಡಿ
Image
R Chandru: ಅಪ್ಪ ಮಾರಿದ್ದ ಕಾಸಿನ ಸರ ಅಮ್ಮನಿಗಾಗಿ ತಂದ ಮಗ: ಆರ್ ಚಂದ್ರು ಕಂಡ ಕಷ್ಟಗಳ ಬಗ್ಗೆ ಪೋಷಕರ ಮಾತು

‘ಕಾಸಿನ ಸರ’ ಶೀರ್ಷಿಕೆ ಬಗ್ಗೆಯೂ ವಿಜಯ್​ ರಾಘವೇಂದ್ರ ಮಾತನಾಡಿದ್ದಾರೆ. ‘ಕಾಸಿನ ಸರ ತುಂಬಾ ತೂಕವಾದ ಹೆಸರು. ಅದರ ಹಿಂದೆ ದೊಡ್ಡ ಶ್ರಮವಿದೆ. ಇಲ್ಲಿ ಕಾಸಿನ ಸರ ಎನ್ನುವುದು ಬರೀ ಒಡವೆಯಲ್ಲ. ಅದಕ್ಕೊಂದು ಒಳಾರ್ಥವಿದೆ’ ಎಂದು ಅವರು ಹೇಳಿದ್ದಾರೆ. ಈ ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದಾರೆ. ವೇಣು ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ: ವರ್ಷ ಪೂರ್ತಿ ಮಹಿಳೆಯರ ರಕ್ಷಣೆ ಆಗಬೇಕು ಎಂದ ನಟಿ ಹರ್ಷಿಕಾ ಪೂಣಚ್ಚ

ಮೂರು ವರ್ಷದ ಬಳಿಕ ನಟಿ ಹರ್ಷಿಕಾ ಪೂಣಚ್ಚ ಅವರು ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ‘ಕಾಸಿನ ಸರ’ ಚಿತ್ರದಲ್ಲಿ ಅವರು ಕೃಷಿ ವಿದ್ಯಾರ್ಥಿನಿ ಸಂಪಿಗೆ ಎಂಬ ಪಾತ್ರ ಮಾಡಿದ್ದಾರೆ. ಪದವಿ ಶಿಕ್ಷಣ ಪಡೆದು ಕೃಷಿಯಲ್ಲಿ ಗಂಡನಿಗೆ ಬೆಂಬಲವಾಗಿ ನಿಲ್ಲುವ ‌ಪಾತ್ರ ಅವರದ್ದು. ಅಭಿನಯಕ್ಕೆ ಸಾಕಷ್ಟು ಪ್ರಾಮುಖ್ಯತೆ ಇರುವ ಇಂಥ ಪಾತ್ರ ಸಿಕ್ಕಿದ್ದಕ್ಕೆ ಅವರಿಗೆ ಖುಷಿ ಇದೆ.

ಇದನ್ನೂ ಓದಿ: ತಂದೆ-ಮಗಳ ಪಾತ್ರದಲ್ಲಿ ರಾಘಣ್ಣ-ಹರ್ಷಿಕಾ ಪೂಣಚ್ಚ​; ಇಲ್ಲಿದೆ ‘ಸ್ತಬ್ಧ’ ಫೋಟೋ ಗ್ಯಾಲರಿ

‘ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾ ಬಿಡುಗಡೆ ಆಗಲಿದೆ. ಸಾಂಪ್ರದಾಯಿಕ, ಸಾವಯುವ ಕೃಷಿಯನ್ನು ಬಿಟ್ಟರೆ ಮುಂದೆ ನಮಗೆಲ್ಲ ಬಹುದೊಡ್ಡ ಅಪಾಯ ಕಾದಿದೆ ಎಂಬುದು ಈಗಾಗಲೇ ಸಾಬೀತಾಗಿದೆ. ನಮ್ಮ ಮಣ್ಣನ್ನು ನಾವು  ರಕ್ಷಿಸಿಕೊಳ್ಳಬೇಕಾಗಿದೆ’ ಎಂದು ನಿರ್ದೇಶಕ ನಂಜುಂಡೇಗೌಡ ಹೇಳಿದ್ದಾರೆ. ಕೃಷಿಯ ಮಹತ್ವವನ್ನು ಸಾರುವ ಸಲುವಾಗಿ ಈ ಸಿನಿಮಾ ಮಾಡಿರುವುದಾಗಿ ನಿರ್ಮಾಪಕ ದೊಡ್ಡನಾಗಯ್ಯ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.