AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಾ, ವಿಷ್ಣುವರ್ಧನ್ ಇಂಗ್ಲಿಷ್ ಎಷ್ಟು ಅದ್ಭುತವಾಗಿತ್ತು ಕೇಳಿ

ಡಾ. ವಿಷ್ಣುವರ್ಧನ್ ಅವರ ನಿರರ್ಗಳ ಇಂಗ್ಲಿಷ್ ಸಂಭಾಷಣೆ ಮತ್ತು ಅವರ ವ್ಯಕ್ತಿತ್ವ ಯಾವಾಗಲೂ ಆದರ್ಶಪ್ರಾಯ. ರಾಜ್‌ಕುಮಾರ್ ಅವರೊಂದಿಗಿನ ಗೌರವಪೂರ್ವಕ ಬಾಂಧವ್ಯವನ್ನು ವಿಷ್ಣು ವಿವರಿಸಿದ್ದರು. ಅಬ್ಬಾ, ಅವರ ಇಂಗ್ಲಿಷ್ ಕೇಳಿ ರಾಜ್‌ಕುಮಾರ್ ಕೂಡ ಬೆರಗಾಗಿದ್ದರು. ಅವರಿಬ್ಬರ ನಡುವೆ ಯಾವುದೇ ವೈಮನಸ್ಸು ಇರಲಿಲ್ಲ ಎಂಬುದನ್ನು ಈ ಮಾತುಕತೆ ಸ್ಪಷ್ಟಪಡಿಸುತ್ತದೆ.

ಅಬ್ಬಾ, ವಿಷ್ಣುವರ್ಧನ್ ಇಂಗ್ಲಿಷ್ ಎಷ್ಟು ಅದ್ಭುತವಾಗಿತ್ತು ಕೇಳಿ
ವಿಷ್ಣು
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 05, 2026 | 7:56 AM

Share

ಭಾರತ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ವಿಷ್ಣುವರ್ಧನ್ (Vishnuvardhan) ಕೂಡ ಒಬ್ಬರು. ಅವರು ಕನ್ನಡವನ್ನು ಉತ್ತಮವಾಗಿ ಮಾತನಾಡುತ್ತಿದ್ದರು. ಅವರು ತಮ್ಮ ಶ್ರೇಷ್ಠ ಗುಣ ಹಾಗೂ ವ್ಯಕ್ತಿತ್ವದಿಂದ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಅನೇಕ ಹೀರೋಗಳು ಸಾಗುತ್ತಿದ್ದಾರೆ ಎಂದರೂ ತಪ್ಪಾಗಲಾರದು. ಕಿಚ್ಚ ಸುದೀಪ್ ಅವರು ವಿಷ್ಣುಗೆ ದೊಡ್ಡ ಅಭಿಮಾನಿ. ವಿಷ್ಣು ಕನ್ನಡದ ಜೊತೆಗೆ ಇಂಗ್ಲಿಷ್ ಕೂಡ ಉತ್ತಮವಾಗಿ ಮಾತನಾಡುತ್ತಿದ್ದರು.

ವಿಷ್ಣುವರ್ಧನ್ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದರು. ‘ನಾನು ಮೈಸೂರಿನಲ್ಲಿ ಶೂಟ್ ಮಾಡುತ್ತಿದ್ದೆ. ಯಜಮಾನ ಸಿನಿಮಾ ನೋಡಿದೆ ಎಂದು ರಾಜ್​​ಕುಮಾರ್ ಹೇಳಿದ್ದರು. ಸಿನಿಮಾ ನೋಡಿ ರಾಜ್​​ಕುಮಾರ್ ಶಾಕ್ ಆಗಿದ್ದರು. ನಿಮ್ಮನ್ನು ಭೇಟಿ ಮಾಡಬೇಕು ಎಂದು ರಾಜ್​​ಕುಮಾರ್ ಹೇಳಿದ್ದರು’ ಎಂದು ವಿಷ್ಣುವರ್ಧನ್ ಹೇಳಿದ್ದರು. ಇದನ್ನು ಅವರು ಇಂಗ್ಲಿಷ್​​ ಅಲ್ಲಿ ಹೇಳಿದ್ದರು.

‘ಬಸವಣ್ಣ, ಕನಕದಾಸ, ಪುರದಂರ ದಾಸ, ಕೃಷ್ಣದೇವರಾಯ ಅವರನ್ನು ನೋಡಿಲ್ಲ. ರಾಜ್​​ಕುಮಾರ್ ಅವರು ಈ ರೀತಿಯ ಪಾತ್ರ ಮಾಡಿ ಗಮನ ಸೆಳೆದಿದ್ದರು. ರಾಜ್​​ಕುಮಾರ್ ಹಲವು ವರ್ಷಗಳ ಕಾಲ ಜನಪ್ರಿಯತೆ ಪಡೆದು ಒಂದು ಕಡೆ ನಿಂತಿದ್ದರು’ ಎಂದು ವಿಷ್ಣುವರ್ಧನ್ ಅವರು ವಿವರಿಸಿದ್ದರು. ವಿಷ್ಣು ಹಾಗೂ ರಾಜ್ ಸಂಬಂಧ ಆ ರೀತಿಯಲ್ಲಿ ಇತ್ತು.

ವಿಷ್ಣುವರ್ಧನ್ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜ್​​​ನಲ್ಲಿ ಡಿಗ್ರೀ ಪಡೆದುಕೊಂಡಿದ್ದಾರೆ. ಅವರು ಓದು ಮುಗಿಸಿ ನಂತರ ನಟನೆಗೆ ಬಂದರು. ನಟನೆಯಲ್ಲಿ ಅವರು ಹಲವು ವರ್ಷಗಳ ಕಾಲ ಮೆರೆದರು. ಹಲವು ಹಿಟ್ ಚಿತ್ರಗಳನ್ನು ಅವರು ನೀಡಿದರು.

ಇದನ್ನೂ ಓದಿ:  ವಿಷ್ಣುವರ್ಧನ್​​​ಗೆ ನಾನ್​ ವೆಜ್ ತಿನ್ನೋದನ್ನು ಕಲಿಸಿದ್ದು ಯಾರು? ಆರು ತಿಂಗಳು ತಿನ್ನದೇ ಇರುತ್ತಿದ್ದಿದ್ದೇಕೆ?

ರಾಜ್​​ಕುಮಾರ್ ಹಾಗೂ ವಿಷ್ಣುಗೆ ವೈಮನಸ್ಸು ಇದೆ ಎಂಬ ಮಾತು ಮೊದಲಿನಿಂದಲೂ ಚರ್ಚೆಯಲ್ಲಿರುವ ವಿಷಯ. ಆದರೆ, ಇದನ್ನು ಈ ನಟರು ಅಲ್ಲಗಳೆದಿದ್ದಾರೆ. ಅನೇಕ ವೇದಿಕೆ ಮೇಲೆ ಅವರುಗಳು ಪರಸ್ಪರ ಒಬ್ಬರನ್ನೊಬ್ಬರು ಹೊಗಳಿದ ಉದಾಹರಣೆ ಇದೆ ಎಂದೇ ಹೇಳಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.