ಕಪಿಲ್ ಶರ್ಮಾ ಬಗ್ಗೆ ‘ಶಕ್ತಿಮಾನ್’ ಮಖೇಶ್​ಗೆ ಯಾಕಿಷ್ಟು ಕೋಪ? ಎರಡು ಘಟನೆ ಅವರ ಆಲೋಚನೆ ಬದಲಿಸಿತು

‘ಬಿಗ್ ಬಾಸ್ ಹಾಗೂ ಕಪಿಲ್ ಶರ್ಮಾ ಶೋನಲ್ಲಿರುವ ಅಸಭ್ಯತೆ ಕಾರಣದಿಂದ ಇಷ್ಟಪಡುವುದಿಲ್ಲ. ಆದರೆ ಕಪಿಲ್ ಓರ್ವ ಉತ್ತಮ ಮನೋರಂಜಕ ಎಂಬುದರಲ್ಲಿ ಎರಡು ಮಾತಿಲ್ಲ’ ಎಂದಿದ್ದಾರೆ ಮುಖೇಶ್ ಖನ್ನಾ. ಇದರ ಜೊತೆಗೆ ಅವರು ಕಪಿಲ್ ಅವರನ್ನು ವಿರೋಧಿಸಲು ಒಂದು ಕಾರಣ ನೀಡಿದ್ದಾರೆ.

ಕಪಿಲ್ ಶರ್ಮಾ ಬಗ್ಗೆ ‘ಶಕ್ತಿಮಾನ್’ ಮಖೇಶ್​ಗೆ ಯಾಕಿಷ್ಟು ಕೋಪ? ಎರಡು ಘಟನೆ ಅವರ ಆಲೋಚನೆ ಬದಲಿಸಿತು
ಮುಖೇಶ್-ಕಪಿಲ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Oct 04, 2024 | 8:13 AM

‘ಶಕ್ತಿಮಾನ್’ ಪಾತ್ರದ ಮೂಲಕ ಮನೆಮಾತಾಗಿದ್ದ ನಟ ಮುಖೇಶ್ ಖನ್ನಾ ರಾಜಿಯಾಗದ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ವಿವಿಧ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನೇರವಾಗಿ ವ್ಯಕ್ತಪಡಿಸುತ್ತಾರೆ. 2020ರಲ್ಲಿ ಅವರು ಹಾಸ್ಯನಟ ಕಪಿಲ್ ಶರ್ಮಾ ಅವರ ಶೋನಲ್ಲಿ ಕಾಣಿಸಿಕೊಳ್ಳಲು ನಿರಾಕರಿಸಿದ್ದರು. ಅಷ್ಟೇ ಅಲ್ಲ, ಕಪಿಲ್ ಶರ್ಮಾ ಅವರ ಕಾರ್ಯಕ್ರಮವನ್ನು ಟೀಕೆ ಮಾಡಿದ್ದರು. ಇದೀಗ ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಕಪಿಲ್ ಶೋಗೆ ಏಕೆ ಹೋಗಲ್ಲ ಎಂಬ ಬಗ್ಗೆ ಮುಖೇಶ್ ಮಾತನಾಡಿದ್ದಾರೆ. ಕಪಿಲ್ ಶರ್ಮಾ ಅವರ ಶೋ ಅಸಭ್ಯತೆಯಿಂದ ಕೂಡಿರುತ್ತದೆ ಎಂದು ಹೇಳಿದ್ದಾರೆ. ‘ಬಿಗ್ ಬಾಸ್ ಹಾಗೂ ಕಪಿಲ್ ಶರ್ಮಾ ಶೋನಲ್ಲಿರುವ ಅಸಭ್ಯತೆ ಕಾರಣದಿಂದ ಇಷ್ಟಪಡುವುದಿಲ್ಲ. ಆದರೆ ಕಪಿಲ್ ಓರ್ವ ಉತ್ತಮ ಮನೋರಂಜಕ ಎಂಬುದರಲ್ಲಿ ಎರಡು ಮಾತಿಲ್ಲ’ ಎಂದಿದ್ದಾರೆ ಅವರು.

‘ನನ್ನ ಜೀವನದಲ್ಲಿ ಎರಡು ಘಟನೆಗಳು ನಡೆದವು. ನನ್ನನ್ನು ನಾನು ‘ಆ್ಯಂಟಿ ಕಪಿಲ್’ ಎಂದು ಹೇಳುವುದಿಲ್ಲ. ಆದರೆ ನನಗೆ ಅವರ ಶೋ ಇಷ್ಟವಾಗಲಿಲ್ಲ. ಆ ವ್ಯಕ್ತಿ ಒಳ್ಳೆಯವನಾಗಿರಬಹುದು, ಆದರೆ ಆ ವ್ಯಕ್ತಿಯಿಂದ ನಿಮಗೆ ನೆಮ್ಮದಿ ಸಿಗುವುದಿಲ್ಲ. ಈ ಮೊದಲು ಕಪಿಲ್ ಶಕ್ತಿಮಾನ್ ವೇಷದಲ್ಲಿ ಬಂದಿದ್ದರು. ಕಪಿಲ್ ತಮ್ಮ ತಪ್ಪನ್ನು ಅರಿತುಕೊಂಡಿಲ್ಲ’ ಎಂದಿದ್ದಾರೆ ಅವರು.

‘ಕಪಿಲ್ ಮಾಡಿದ ತಪ್ಪೆಂದರೆ ಶಕ್ತಿಮಾನ್ ವೇಷ ಧರಿಸಿದ್ದು. ನಂತರ ಆ ಪಾತ್ರವನ್ನು ಅಸಂಬದ್ಧವಾಗಿ ತೋರಿಸಲಾಯಿತು. ನಾವು ಶಕ್ತಿಮಾನ್ ಪಾತ್ರವನ್ನು ನಾವು ತುಂಬಾ ಚೆನ್ನಾಗಿ ತೋರಿಸಿದ್ದೆವು. ನೀವು ಇದನ್ನೆಲ್ಲಾ ಕೇವಲ ಹಾಸ್ಯಕ್ಕಾಗಿ ಮಾಡುತ್ತೀರಿ’ ಎಂದು ಬೇಸರ ಹೊರಹಾಕಿದ್ದರು ಮುಖೇಶ್.

ಇದನ್ನೂ ಓದಿ: ‘ಗುಟ್ಕಾ ಪ್ರಚಾರ ಮಾಡುವವರಿಗೆ ಹೊಡೆಯಬೇಕು, ಅಕ್ಷಯ್​ ಕುಮಾರ್​ಗೆ ನಾನು ಬೈಯ್ದಿದ್ದೇನೆ’: ಮುಖೇಶ್​ ಖನ್ನಾ

‘ಪ್ರಶಸ್ತಿ ಸಮಾರಂಭದಲ್ಲಿದ್ದೆ. ನಾನು ಮೊದಲ ಸಾಲಿನಲ್ಲಿ ಕುಳಿತಿದ್ದೆ ಮತ್ತು ಆ ಸಮಯದಲ್ಲಿ ಕಪಿಲ್ ಆಗಷ್ಟೇ ಇಂಡಸ್ಟ್ರಿಗೆ ಬಂದಿದ್ದರು. ಕಪಿಲ್ ಹತ್ತರಿಂದ ಇಪ್ಪತ್ತು ನಿಮಿಷಗಳ ಕಾಲ ನನ್ನ ಪಕ್ಕದಲ್ಲಿ ಕುಳಿತರು. ಆದರೆ ಅವರು ಒಮ್ಮೆಯೂ ನನ್ನೊಂದಿಗೆ ಮಾತನಾಡಲು ಬರಲಿಲ್ಲ. ಅವರು ಕೇವಲ ಪ್ರಶಸ್ತಿಯನ್ನು ಸ್ವೀಕರಿಸಿದರು ಮತ್ತು ನಂತರ ತೆರಳಿದರು. ಈ ಎರಡು ಘಟನೆಗಳು ನನ್ನ ತಲೆಯಲ್ಲಿ ಉಳಿದಿವೆ. ಅದಕ್ಕೇ ಹೇಳಿದ್ದು ಅವನು ಅನಾಗರಿಕ ಅಂತ. ಒಬ್ಬ ವ್ಯಕ್ತಿಯು ಈ ರೀತಿ ವರ್ತಿಸಿದಾಗ, ಅವನು ಗೌರವವನ್ನು ಕಳೆದುಕೊಳ್ಳುತ್ತಾನೆ’  ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:12 am, Fri, 4 October 24