ಟಾಕ್ಸಿಕ್ ಟೀಸರ್: ಹಸಿಬಿಸಿ ದೃಶ್ಯ ನೋಡಿ ರುಕ್ಮಿಣಿ ವಸಂತ್ ಅಭಿಮಾನಿಗಳಿಗೆ ಆತಂಕ

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಟೀಸರ್​​ನಲ್ಲಿ ಹತ್ತು ಹಲವು ಅಂಶಗಳು ಹೈಲೈಟ್ ಆಗಿವೆ. ಹಸಿಬಿಸಿ ದೃಶ್ಯಗಳು ಕೂಡ ಇದರಲ್ಲಿ ಇವೆ. ಅದನ್ನು ಕಂಡು ಕೆಲವರಿಗೆ ಈಗಾಗಲೇ ಆತಂಕ ಶುರುವಾಗಿದೆ. ರುಕ್ಮಿಣಿ ವಸಂತ್ ಅಭಿಮಾನಿಗಳು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಟಾಕ್ಸಿಕ್ ಟೀಸರ್: ಹಸಿಬಿಸಿ ದೃಶ್ಯ ನೋಡಿ ರುಕ್ಮಿಣಿ ವಸಂತ್ ಅಭಿಮಾನಿಗಳಿಗೆ ಆತಂಕ
Toxic Teaser

Updated on: Feb 20, 2026 | 8:43 PM

ನಟಿ ರುಕ್ಮಿಣಿ ವಸಂತ್ (Rukmini Vasanth) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಸಪ್ತ ಸಾಗರದಾಚೆ ಎಲ್ಲೋ’, ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳಲ್ಲಿ ಅವರು ಗಮನಾರ್ಹವಾಗಿ ನಟಿಸಿದ್ದಾರೆ. ಈಗ ಅವರಿಗೆ ದೊಡ್ಡ ದೊಡ್ಡ ಅವಕಾಶಗಳು ಸಿಗುತ್ತಿವೆ. ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಕೂಡ ರುಕ್ಮಿಣಿ ವಸಂತ್ ಅವರು ಅಭಿನಯಿಸಿದ್ದು, ಅವರ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಆದರೆ, ‘ಟಾಕ್ಸಿಕ್’ ಟೀಸರ್ (Toxic Teaser) ನೋಡಿದ ಮೇಲೆ ಕೆಲವರಿಗೆ ಆತಂಕ ಕಾಡಲು ಶುರುವಾಗಿದೆ! ಅದಕ್ಕೆ ಕಾರಣ ಆಗಿರುವುದು ಒಂದು ಬೋಲ್ಡ್ ಸೀನ್!

ಯಶ್ ಅವರು ಈವರೆಗೆ ಮಾಡಿದ ಸಿನಿಮಾಗಳೇ ಬೇರೆ, ಈಗ ಮಾಡಿರುವ ‘ಟಾಕ್ಸಿಕ್’ ಚಿತ್ರವೇ ಬೇರೆ. ಇದೇ ಮೊದಲ ಬಾರಿಗೆ ಅವರು ಸಖತ್ ಬೋಲ್ಡ್ ಆದಂತಹ ಕಥೆಯಿರುವ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಪಾತ್ರ ಸಿಕ್ಕಾಪಟ್ಟೆ ಅಗ್​ರೆಸಿವ್ ಆಗಿದೆ. ‘ಟಾಕ್ಸಿಕ್’ ಟೀಸರ್​​ನಲ್ಲಿ ಒಂದು ಹಸಿಬಿಸಿ ದೃಶ್ಯ ಕಾಣಿಸಿದೆ. ಆದರೆ ಆ ದೃಶ್ಯದಲ್ಲಿ ಇರುವ ನಟಿ ಯಾರು ಎಂಬುದು ಸ್ಪಷ್ಟವಾಗಿಲ್ಲ.

ಟಾಕ್ಸಿಕ್ ಟೀಸರ್:

Toxic Official Kannada Teaser | Rocking Star Yash | Geetu Mohandas | KVN | Monster Mind Creations

‘ಟಾಕ್ಸಿಕ್’ ಸಿನಿಮಾದಲ್ಲಿ ರಕ್ಮಿಣಿ ವಸಂತ್ ಮಾತ್ರವಲ್ಲದೇ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ ಮುಂತಾದ ನಟಿಯರು ಅಭಿನಯಿಸಿದ್ದಾರೆ. ಈ ಚಿತ್ರದ ಟೀಸರ್​​ನಲ್ಲಿ ಯಾವುದೇ ನಟಿಯ ಮುಖ ಸ್ಪಷ್ಟವಾಗಿ ಕಾಣಿಸಿಲ್ಲ. ಆದರೆ ಕೆಲವು ಪ್ರೇಕ್ಷಕರು ಬಹಳ ಸೂಕ್ಷ್ಮವಾಗಿ ಗಮನಿಸಿ, ಯಾವ ದೃಶ್ಯದಲ್ಲಿ ಯಾರು ಇದ್ದಾರೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.

ಫೆಬ್ರವರಿ 20ರಂದು ರಿಲೀಸ್ ಆಗಿರುವ ‘ಟಾಕ್ಸಿಕ್’ ಟೀಸರ್​ನಲ್ಲಿ ಒಂದು ಹಸಿಬಿಸಿ ದೃಶ್ಯ ಇದೆ. ಆ ದೃಶ್ಯದಲ್ಲಿ ನಟಿಯ ಮುಖ ಕಾಣಿಸಿಲ್ಲ. ಅದು ರುಕ್ಮಿಣಿ ವಸಂತ್ ಎಂದು ಕೆಲವರು ಊಹಿಸಿದ್ದಾರೆ. ‘ಅದು ನಮ್ಮ ರುಕ್ಮಿಣಿ ವಸಂತ್ ಆಗಿರದೇ ಇರಲಿ’ ಎಂದು ಅಪ್ಪಟ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಡೈರೆಕ್ಟರ್ ಮಹಿಳೆ ಆದ್ರೂ ಟೀಸರ್​​ನಲ್ಲಿ ನಟಿಯರಿಗೆ ಜಾಗ ಇಲ್ಲ; ನೆಟ್ಟಿಗರ ಟೀಕೆ

ಇಂಥ ಹಲವು ಕಾರಣಗಳಿಂದಾಗಿ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ. ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಟೀಸರ್ ಬಿಡುಗಡೆ ಆಗಿದ್ದು, ಧೂಳೆಬ್ಬಿಸುತ್ತಿದೆ. ಯಶ್ ಅವರನ್ನು ಬೇರೆ ಬೇರೆ ಗೆಟಪ್​​ಗಳಲ್ಲಿ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಚಿತ್ರಕ್ಕೆ ಗೀತು ಮೋಹನ್​ದಾಸ್ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us