ಡ್ರೈವರ್ ಫ್ಯಾಮಿಲಿ ಅಂತ ಹಗುರವಾಗಿ ತಗೋಬೇಡಿ; ಯಶ್ ತಾಯಿ ಪುಷ್ಪಾ ಖಡಕ್ ವಾರ್ನಿಂಗ್

ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರು ತಮ್ಮ ಮಗನ 'ಟಾಕ್ಸಿಕ್' ಸಿನಿಮಾ ಮತ್ತು ವೃತ್ತಿಜೀವನದ ಕುರಿತ ನಕಾರಾತ್ಮಕ ಟೀಕೆಗಳಿಗೆ ದಿಟ್ಟ ಉತ್ತರ ನೀಡಿದ್ದಾರೆ. ಯಶ್ ಧೈರ್ಯವಾಗಿ ನಿಂತಿದ್ದು, ಅವರ ಟ್ಯಾಲೆಂಟ್ ಹುಟ್ಟುತ್ತಲೇ ಬಂದಿದೆ ಎಂದು ಹೇಳುವ ಮೂಲಕ ಟ್ರೋಲಿಗರಿಗೆ ತಕ್ಕ ತಿರುಗೇಟು ನೀಡಿದ್ದಾರೆ.

ಡ್ರೈವರ್ ಫ್ಯಾಮಿಲಿ ಅಂತ ಹಗುರವಾಗಿ ತಗೋಬೇಡಿ; ಯಶ್ ತಾಯಿ ಪುಷ್ಪಾ ಖಡಕ್ ವಾರ್ನಿಂಗ್
ಪುಷ್ಪಾ-ಯಶ್
Edited By:

Updated on: Aug 31, 2026 | 7:43 AM

ಮುಖ್ಯಾಂಶಗಳು

  • ಡ್ರೈವರ್ ಫ್ಯಾಮಿಲಿ ಅಂತ ಹಗುರವಾಗಿ ತಗೋಬೇಡಿ
  • ಯಶ್ ತಾಯಿ ಪುಷ್ಪಾ ಖಡಕ್ ವಾರ್ನಿಂಗ್
  • ನೆಗೆಟಿವ್ ರಿವ್ಯೂ ಕೊಟ್ಟವರಿಗೆ ತಿರುಗೇಟು

ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರು ತಮ್ಮ ಮಗನ ಟಾಕ್ಸಿಕ್ ಸಿನಿಮಾ (Toxic Movie) ಮತ್ತು ಅವರ ವೃತ್ತಿಜೀವನದ ಕುರಿತ ನಕಾರಾತ್ಮಕ ಟೀಕೆಗಳಿಗೆ ದಿಟ್ಟ ಉತ್ತರ ನೀಡಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಬಗ್ಗೆ ಕೆಲವರು ಬೇಕಂತಲೇ ನೆಗೆಟಿವ್ ಪ್ರಚಾರ ಮಾಡಿದ್ದಾರೆ. ಒಂದು ಸ್ಟಾರ್ ಕೊಡ್ತೀವಿ ಎಂದೆಲ್ಲ ಹೇಳಿದ್ದಾರೆ. ‘ಯಶ್ ಅವರಿಂದ ನಾಲ್ಕು ಜನ ಕಲಿತಿದ್ದಾರೆ’ ಎಂದು ಹೇಳಿದ್ದಾರೆ.

‘ನಮ್ಮಿಂದ ಕಲಿತುಕೊಂಡು ಹೋದರೆ ನಮಗೆ ಏನು ಪಾಠ ಕಲಿಸ್ತಾರೆ? ಯಶ್​ ಅವರಿಂದ ಸಾಕಷ್ಟು ಜನ ಕಲಿತುಕೊಂಡು ಹೋಗಿದ್ದಾರೆ. ಅವನಿಗೆ ಸಿನಿಮಾ ಬಗ್ಗೆ ಯಾರು ಹೇಳಿಕೊಟ್ಟಿದ್ದು? ಯಾರೂ ಕಲಿಸಿಲ್ಲ. ಹುಟ್ಟುತ್ತಲೇ ಅವನಿಗೆ ಟ್ಯಾಲೆಂಟ್ ಬಂದಿದೆ. ಅದರಿಂದ ಇನ್ನೊಬ್ಬರು ಕಲಿತಿದ್ದಾರೆ’ ಎಂದು ಹೇಳಿದ್ದಾರೆ. ಕನ್ನಡ ಸಿನಿಮಾ ಬೇರೆ ಭಾಷೆಯವರು ಚೆನ್ನಾಗಿದೆ ಎನ್ನಲು ಯಶ್ ಅವರ ಪ್ರತಿಭೆಯೇ ಕಾರಣ ಎಂದು ಪುಷ್ಪಾ ಪ್ರತಿಪಾದಿಸಿದ್ದಾರೆ.

ಯಶ್ ಅವರ ಕುಟುಂಬ ಅಷ್ಟು ವೀಕ್ ಇಲ್ಲ ಎಂದು ಸ್ಪಷ್ಟಪಡಿಸಿದ ಪುಷ್ಪಾ, ‘ನೀವು ಅನ್ಕೊಂಡಿರಬಹುದು ಡ್ರೈವರ್ ಫ್ಯಾಮಿಲಿ ಅಂತ. ಆ ಫ್ಯಾಮಿಲಿಯಿಂದ ಇಷ್ಟು ಕೆಲಸ ಮಾಡೋಕೆ ಆಗಲ್ಲ ಎಂದುಕೊಂಡಿರಬಹುದು. ಆದರೆ, ಒಳ್ಳೆ ಬೇಸ್ಮೆಂಟ್ ಆ ಮನೆಯಲ್ಲಿ ಕೊಟ್ಟಿದ್ದೇವೆ. ಅವನು ಧೈರ್ಯವಾಗಿ ನಿಂತಿದ್ದಾನೆ, ಹೆದರಿ ಓಡಿಲ್ಲ’ ಎಂದು ಹೇಳಿದ್ದಾರೆ.

ಪೋಷಕರು ಮಕ್ಕಳಿಗೆ ಧೈರ್ಯ ತುಂಬಬೇಕು, ಹೆದರಿಸಬಾರದು ಎಂಬುದು ಅವರ ನಿಲುವು. ಯಶ್ ಕೇವಲ ದುಡ್ಡು ಮಾಡಲು ಬಂದವರಲ್ಲ. ಅನೇಕರ ಬಳಿ ದುಡ್ಡಿದೆ. ಅವರೆಲ್ಲ ಟಾಕ್ಸಿಕ್ ರೀತಿಯ ಸಿನಿಮಾ ಮಾಡಲು ಸಾಧ್ಯವಾಯಿತೇ’ ಎಂದು ಪುಷ್ಪಾ ಪ್ರಶ್ನೆ ಮಾಡಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಕುರಿತು ಮಾತನಾಡಿದ ಪುಷ್ಪಾ , ‘ಅವನೇನೋ ದಬಾಕಕ್ಕೆ ಹೋಗವನೆ ದಬಾಕೊಂಡೇ ಬರ್ತಾನೆ ಅಂತ ಗೊತ್ತಿತ್ತು. ದಬಾಕಂಡೆ ಬಂದವನೆ. ಎಲ್ಲ ಜನ ಒಪ್ಪಿಕೊಂಡಿದ್ದಾರೆ’ ಎಂದು ಸಂತೋಷ ವ್ಯಕ್ತಪಡಿಸಿದರು. ‘ಇವನ ಕೈಯಲ್ಲಿ ಆಗಲ್ಲ, ವಾಪಸ್ ಬರ್ತಾನೆ ಎಂಬ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಮತ್ತು ತುಂಬಾ ಗ್ರೇಟ್ ಎಂದು ಭಾವಿಸುವುದಿಲ್ಲ. ಬದಲಾಗಿ ಏನೋ ಮಾಡ್ತಿದ್ದಾನೆ, ಮಾಡ್ಲಿ ಎಂದು ಪ್ರೋತ್ಸಾಹಿಸುತ್ತೇವೆ’ ಎಂದರು.

YouTube video player

‘ಯಶ್ ನಮ್ಮ ಹುಡುಗ ಅಲ್ಲ,  ನಿಮ್ಮ ಹುಡುಗ. ನಮ್ಮ ಯಶ್ ಪಿಕ್ಚರ್ ಅಂತ ಹೆಮ್ಮೆಯಿಂದ ಹೇಳ್ಕೋಬಹುದು ಥಿಯೇಟರ್ಗೆ ಹೋಗಿ. ಅಷ್ಟು ಸಾಕು ಅಲ್ವಾ’ ಎಂದು ಪುಷ್ಪಾ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಕೆಲಸದ ಮೂಲಕವೇ ಎಲ್ಲ ಟೀಕೆಗಳಿಗೆ ಉತ್ತರ ನೀಡುವಲ್ಲಿ ಯಶ್ ಕುಟುಂಬ ನಂಬಿಕೆ ಇಟ್ಟಿದೆ ಎಂದು ಅವರು ಒತ್ತಿ ಹೇಳಿದರು.

ಇದನ್ನೂ ಓದಿ: ‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಮಾಡಿದವರ ಮೇಲೆ ಯಶ್ ತಾಯಿ ಗರಂ

ಯಶ್ ಮುಂದಿನ ಸಿನಿಮಾ ಬಗ್ಗೆ ಕೇಳಿದಾಗ, ‘ನಾನು ಅದೆಲ್ಲಾ ಮಾತಾಡಲ್ಲ. ನಾನು ಕೇಳೋದು ಇಲ್ಲ. ಅವನು ಏನು ಮಾಡ್ತಾನೆ ಅಂತ ನಾನು ಕೇಳಲ್ಲ. ಸಿನಿಮಾ ವಿಷಯದಲ್ಲಿ ನಾವು ಯಾರು ಮನೆಯಲ್ಲಿ ಮಾತನಾಡೋದಿಲ್ಲ. ರಾಮಾಯಣದಲ್ಲಿ ನೋಡ್ದೆ ತುಂಬಾ ಚೆನ್ನಾಗಿ ಕಾಣಿಸ್ತಾವನೆ. ಬಟ್ ಜನ ತಗೋಬೇಕು ಅಲ್ವಾ. ನನ್ನ ಮಗ ನನಗೆ ಚಂದ. ಜನಗಳು ತಗೊಂಡು ಜನಗಳು ಖುಷಿ ಪಟ್ಟರೆ ಅಷ್ಟೇ ಸಾಕು’ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us