AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಡಿರುವುದು ಒಂದೇ ಸಿನಿಮಾ, ರಣ್ಬೀರ್, ಪ್ರಭಾಸ್, ಅಲ್ಲು ಅರ್ಜುನ್ ಈ ನಿರ್ದೇಶಕನಿಗಾಗಿ ಕಾಯುತ್ತಿದ್ದಾರೆ, ಯಾರೀತ?

Director: ಮಾಡಿದ್ದು ಒಂದೇ ಸಿನಿಮಾ ಆದರೆ ಅದೊಂದು ಸಿನಿಮಾದಿಂದ ಭಾರತದ ಮೂವರು ದೊಡ್ಡ ಸ್ಟಾರ್ ನಟರೊಟ್ಟಿಗೆ ನಿರ್ದೇಶನ ಮಾಡುವ ಅದೃಷ್ಟ ನಿರ್ದೇಶಕರೊಬ್ಬರಿಗೆ ಒಲಿದಿದೆ. ಯಾರು ಆ ನಿರ್ದೇಶಕ?

ಮಾಡಿರುವುದು ಒಂದೇ ಸಿನಿಮಾ, ರಣ್ಬೀರ್, ಪ್ರಭಾಸ್, ಅಲ್ಲು ಅರ್ಜುನ್ ಈ ನಿರ್ದೇಶಕನಿಗಾಗಿ ಕಾಯುತ್ತಿದ್ದಾರೆ, ಯಾರೀತ?
ಪ್ರಭಾಸ್-ಅಲ್ಲು ಅರ್ಜುನ್-ರಣ್ಬೀರ್ ಕಪೂರ್
ಮಂಜುನಾಥ ಸಿ.
|

Updated on:Apr 19, 2023 | 10:06 PM

Share

ಒಂದೇ ಸಿನಿಮಾ ಸಾಕು ನಿರ್ದೇಶಕನಲ್ಲಿ ಪ್ರತಿಭೆ ಇದೆಯೋ ಇಲ್ಲವೋ ನಿರ್ಧರಿಸಲು. ಕೆಲವರು ಎಷ್ಟು ಸಿನಿಮಾಗಳನ್ನು ಮಾಡಿದ್ದರೂ ಆರಕ್ಕೇಳದೆ, ಮೂರಕ್ಕಿಳಿಯದೆ ಹಾಗೆಯೇ ಉಳಿದುಕೊಂಡು ಬಿಡುತ್ತಾರೆ. ತೆಲುಗಿನಲ್ಲಿ ನಿರ್ದೇಶಕರೊಬ್ಬರಿದ್ದಾರೆ. ಈವರೆಗೆ ಅವರು ನಿರ್ದೇಶಿಸಿರುವುದು ಕೇವಲ ಒಂದು ಸಿನಿಮಾ ಹಾಗೂ ಅದರದ್ದೇ ಹಿಂದಿ ರೀಮೇಕ್ ಆದರೆ ಈಗಾಗಲೇ ಮೂವರು ದೊಡ್ಡ ಸ್ಟಾರ್ ನಟರು ಈ ನಿರ್ದೇಶಕನೊಟ್ಟಿಗೆ ಕೆಲಸ ಮಾಡಲು ತಯಾರಾಗಿ ನಿಂತಿದ್ದಾರೆ. ಸ್ಟಾರ್ ನಟರುಗಳು ಈ ನಿರ್ದೇಶಕ  ನಮ್ಮೊಟ್ಟಿಗೆ ಯಾವಾಗ ಸಿನಿಮಾ ಮಾಡುತ್ತಾನೆ ಎಂದು ಕಾಯುತ್ತಿದ್ದಾರೆ.

2017 ರಲ್ಲಿ ಬಿಡುಗಡೆ ಆದ ಅರ್ಜುನ್ ರೆಡ್ಡಿ ಸಿನಿಮಾ ನೆನಪಿರಬಹುದು. ಸಿನಿಮಾ ಬಿಡುಗಡೆ ಆದಾಗ ದೊಡ್ಡ ಚರ್ಚೆಗಳು ಎದ್ದಿದ್ದವು. ಸಿನಿಮಾದಲ್ಲಿ ಮದ್ಯಪಾನಕ್ಕೆ ಪ್ರಚಾರ ನೀಡಲಾಗಿದೆ, ಮದ್ಯ ಸೇವನೆಯನ್ನು ಗ್ಲಾಮರೈಸ್ ಮಾಡಲಾಗಿದೆ. ಹಿಂಸೆಗೆ ಪ್ರಚೋದನೆ ನೀಡಲಾಗಿದೆ, ಮಹಿಳೆಯರ ವಿರುದ್ಧ ಹಿಂಸೆಗೆ ಈ ಸಿನಿಮಾ ಪ್ರೇರಣೆ ನೀಡುತ್ತದೆ ಇನ್ನೂ ಹಲವು ಆರೋಪಗಳನ್ನು ಸಿನಿಮಾದ ವಿರುದ್ಧ ಮಾಡಲಾಗಿತ್ತು ಆದರೆ ಸಿನಿಮಾ ದೊಡ್ಡ ಹಿಟ್ ಆಯಿತು. ಈ ಸಿನಿಮಾದ ಮೂಲಕ ವಿಜಯ್ ದೇವರಕೊಂಡಗೆ ಸ್ಟಾರ್ ಪಟ್ಟ ದೊರಕಿತು. ಈ ಸಿನಿಮಾ ನಿರ್ದೇಶನ ಮಾಡಿದ್ದ ಸಂದೀಪ್ ರೆಡ್ಡಿ ವಂಗಾಗೆ ವಿಜಯ್ ದೇವರಕೊಂಡ ಅಷ್ಟು ಜನಪ್ರಿಯತೆ ಬರಲಿಲ್ಲವಾದರೂ ಚಿತ್ರರಂಗವು ಇವರಲ್ಲಿನ ಪ್ರತಿಭೆಯನ್ನು ಗುರುತಿಸಿತು.

ಅರ್ಜುನ್ ರೆಡ್ಡಿ ಸಿನಿಮಾ ಬಿಡುಗಡೆ ಆದ ಬಳಿಕ ಎರಡು ವರ್ಷ ಯಾವ ಸಿನಿಮಾ ಮಾಡದ ಸಂದೀಪ್ ಆ ಬಳಿಕ ಅದೇ ಸಿನಿಮಾದ ಹಿಂದಿ ರೀಮೇಕ್ ಅನ್ನು ನಿರ್ದೇಶನ ಮಾಡಿದರು. ಆದರೆ ಆ ವೇಳೆಗಾಗಲೆ ಇಬ್ಬರು ದೊಡ್ಡ ಸ್ಟಾರ್ ನಟರೊಟ್ಟಿಗೆ ಸಿನಿಮಾ ಮಾಡಲು ಒಪ್ಪಂದ ಮಾಡಿಕೊಂಡರು. ಅವರೇ ಬಾಲಿವುಡ್​ನ ಸ್ಟಾರ್ ನಟ ರಣ್ಬೀರ್ ಕಪೂರ್ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್.

ರಣ್ಬೀರ್ ಕಪೂರ್ ಗಾಗಿ ಅನಿಮಲ್ ಹೆಸರಿನ ಸಿನಿಮಾವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿ. ಈ ಸಿನಿಮಾ ತನ್ನ ಹೆಸರಿಗೆ ತಕ್ಕಂತೆ ಬಲು ಮೃಗೀಯವಾಗಿರುವುದು ಪಕ್ಕಾ ಎನ್ನಲಾಗುತ್ತಿದೆ. ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ರಕ್ತ ಮೆತ್ತಿದ ಕೊಡಲಿಯನ್ನು ಬಗಲಲ್ಲಿ ಇಟ್ಟುಕೊಂಡು ಸಿಗರೇಟು ಹೊತ್ತಿಸುತ್ತಿರುವ ರಣ್ಬೀರ್​ರ ಚಿತ್ರ ಭಯಾನಕವಾಗಿದೆ.

ಅನಿಮಲ್ ಸಿನಿಮಾದ ಬಳಿಕ ಪ್ರಭಾಸ್ ಗಾಗಿ ಸ್ಪಿರಿಟ್ ಹೆಸರಿನ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ ಸಂದೀಪ್ ರೆಡ್ಡಿ ವಂಗಾ ಅವರ ಮೆಚ್ಚಿನ ವಿಷಯ ಮದ್ಯಪಾನದ ಕುರಿತಾದದ್ದು ಎನ್ನಲಾಗುತ್ತಿದೆ. ತಮ್ಮ ಇಮೇಜಿಗೆ ಧಕ್ಕೆ ಆಗದ ಪಾತ್ರಗಳನ್ನು ಅಳೆದು ತೂಗಿ ಆಯ್ಕೆ ಮಾಡುತ್ತಿರುವ ಪ್ರಭಾಸ್​ಗೆ ಸಿನಿಮಾ ಒಪ್ಪಿಸಿರುವ ಸಂದೀಪ್ ಬಗ್ಗೆ ತೆಲುಗು ಚಿತ್ರರಂಗ ಆಶ್ಚರ್ಯದಿಂದ ನೋಡುತ್ತಿದೆ. ಪ್ರಭಾಸ್ ಜೊತೆಗಿನ ಸಿನಿಮಾ ಬಳಿಕ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಲಿದ್ದಾರೆ ಸಂದೀಪ್ ರೆಡ್ಡಿ ವಂಗಾ. ಇತ್ತೀಚೆಗಷ್ಟೆ ಈ ಸಿನಿಮಾದ ಘೋಷಣೆ ಆಗಿದ್ದು ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್​ನವರು ನಿರ್ಮಾಣ ಮಾಡಲಿದ್ದಾರೆ.

ಸಂದೀಪ್ ರೆಡ್ಡಿ ವಂಗಾ, ಧಾರವಾಡದ ಎಸ್​ಡಿಎಂ ಕಾಲೇಜಿನಲ್ಲಿ ಫಿಸಿಯೋಥೆರಪಿ ಪದವಿ ಪಡೆದಿದ್ದಾರೆ. ಅದಾದ ಬಳಿಕ ಆಸ್ಟ್ರೇಲಿಯಾಕ್ಕೆ ತೆರಳಿ ಅಲ್ಲಿ ಸಿನಿಮಾ ಕುರಿತ ತರಬೇತಿ ಪಡೆದು ಬಂದಿದ್ದಾರೆ. ಕೆಲವು ಸಿನಿಮಾಗಳಿಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ ಬಳಿಕ ತಮ್ಮ ಅಣ್ಣನ ಹಣ ಬಳಸಿ ಅರ್ಜುನ್ ರೆಡ್ಡಿ ಸಿನಿಮಾ ನಿರ್ದೇಶನ ಮಾಡಿದರು. ಆದರೆ ಆ ಒಂದು ಸಿನಿಮಾ ಅವರ ಕೆರಿಯರ್ ಅನ್ನು ಬದಲಾಯಿಸಿದೆ. ಮಾಡಿರುವ ಒಂದೇ ಸಿನಿಮಾದಿಂದ (ಕಬೀರ್ ಸಿನಿಮಾ ಅರ್ಜುನ್ ರೆಡ್ಡಿಯ ನಕಲು) ದೊಡ್ಡ-ದೊಡ್ಡ ಅವಕಾಶಗಳು ಸಂದೀಪ್ ಅವರನ್ನು ಅರಸಿ ಬಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:41 pm, Wed, 19 April 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ