‘ಟಾಕ್ಸಿಕ್’ ನೆಗೆಟಿವ್ ಪ್ರಶ್ನೆಗೆ ಮುಂಬೈನಲ್ಲಿ ಶಿವಣ್ಣ ಖಡಕ್ ಉತ್ತರ

ಮುಂಬೈನಲ್ಲಿ 'ಒರಿಜಿನಲ್ ಮಾನ್‌ಸ್ಟರ್' ಸಿನಿಮಾ ಘೋಷಣೆ ವೇಳೆ ಯಶ್ ಅಭಿನಯದ 'ಟಾಕ್ಸಿಕ್' ನೆಗೆಟಿವ್ ವಿಮರ್ಶೆ ಕುರಿತ ಪ್ರಶ್ನೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಖಡಕ್ ಉತ್ತರ ನೀಡಿದ್ದಾರೆ. ಪ್ರತಿಯೊಬ್ಬರಿಗೂ ವಿಭಿನ್ನ ಸಿನಿಮಾ ಮಾಡುವ ಹಕ್ಕಿದೆ ಎಂದು ಬೆಂಬಲಿಸಿರುವ ಶಿವಣ್ಣ, ಆರ್. ಚಂದ್ರು ಅವರ ಬಾಲಿವುಡ್ ಪಾದಾರ್ಪಣೆಯ ಬಿಗ್ ಬಜೆಟ್ ಸಿನಿಮಾವನ್ನು ಪ್ರಕಟಿಸಿದ್ದಾರೆ.

ಟಾಕ್ಸಿಕ್ ನೆಗೆಟಿವ್ ಪ್ರಶ್ನೆಗೆ ಮುಂಬೈನಲ್ಲಿ ಶಿವಣ್ಣ ಖಡಕ್ ಉತ್ತರ
ಯಶ್-ಶಿವಣ್ಣ

Updated on: Aug 29, 2026 | 7:37 AM

ಮುಖ್ಯಾಂಶಗಳು

  •  'ಟಾಕ್ಸಿಕ್' ನೆಗೆಟಿವ್ ರಿವ್ಯೂ ಪ್ರಶ್ನೆಗೆ ಮುಂಬೈನಲ್ಲಿ ಶಿವಣ್ಣ ಖಡಕ್ ರಿಯಾಕ್ಷನ್
  • ಯಶ್ ಸಿನಿಮಾವನ್ನು ಬೆಂಬಲಿಸಿ ನಿಂತ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್
  • ಶಿವಣ್ಣ-ಸುನೀಲ್ ಅಭಿನಯದ 'ಒರಿಜಿನಲ್ ಮಾನ್‌ಸ್ಟರ್' ಪ್ರಕಟ

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಹಾಗೂ ಆರ್. ಚಂದ್ರು ಅವರ ಕಾಂಬಿನೇಷನ್‌ನ ಹೊಸ ಸಿನಿಮಾ ‘ಒರಿಜಿನಲ್ ಮಾನ್‌ಸ್ಟರ್’ ಘೋಷಣೆ ಮಾಡಲು ಮುಂಬೈನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಶಿವಣ್ಣ ಅವರಿಗೆ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ ವ್ಯಕ್ತವಾಗುತ್ತಿರುವ ನೆಗೆಟಿವ್ ಹಾಗೂ ಮಿಶ್ರ ಪ್ರತಿಕ್ರಿಯೆಗಳ ಕುರಿತು ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದರು.ಇದಕ್ಕೆ ಶಿವಣ್ಣ ಖಡಕ್ ಆಗಿ ಉತ್ತರ ನೀಡಿದ್ದಾರೆ.

‘ಟಾಕ್ಸಿಕ್’ ಸಿನಿಮಾ ನೋಡಿದ್ರಾ? ನೆಗೆಟಿವ್ ವಿಮರ್ಶೆ ಕೇಳಿ ಬರುತ್ತಿದೆಯಲ್ಲ’ ಎಂದು ಶಿವಣ್ಣಗೆ ಕೇಳಲಾಯಿತು. ಪತ್ರಕರ್ತನ ಪ್ರಶ್ನೆಗೆ ಧೈರ್ಯವಾಗಿ ಮತ್ತು ನೇರವಾಗಿ ಉತ್ತರಿಸಿದ ಶಿವಣ್ಣ, ‘ಚಿತ್ರರಂಗದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಶೈಲಿಯಲ್ಲಿ ಸಿನಿಮಾ ಮಾಡುವ ಹಾಗೂ ಹೊಸ ಕಥೆಯನ್ನು ವಿಭಿನ್ನವಾಗಿ ಹೇಳುವ ಹಕ್ಕಿರುತ್ತದೆ’ ಎಂದು ಬೆಂಬಲಿಸಿ ನಿಂತರು.

ಮುಂದುವರಿದು ಮಾತನಾಡಿದ ಅವರು, ‘ಸಿನಿಮಾ ತಂಡ ಏನನ್ನೋ ಹೊಸದಾಗಿ ಪ್ರೇಕ್ಷಕರಿಗೆ ತಲುಪಿಸಲು ಪ್ರಯತ್ನಿಸಿದೆ. ಅದೊಂದು ಅತ್ಯುತ್ತಮ ಪ್ರಯತ್ನವಾಗಿದ್ದು, ಈಗಾಗಲೇ ಹಲವರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಪ್ರತಿಯೊಬ್ಬ ವೀಕ್ಷಕನು ಯಾವ ದೃಷ್ಟಿಕೋನದಿಂದ ಸಿನಿಮಾವನ್ನು ನೋಡುತ್ತಾನೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಸಂಪೂರ್ಣ ಸಿನಿಮಾ ನೋಡಿದ ಮೇಲಷ್ಟೇ ಅದರ ಬಗ್ಗೆ ನಿಖರವಾಗಿ ಮಾತನಾಡಲು ಸಾಧ್ಯ. ಪ್ರಸ್ತುತ ಸಿನಿಮಾಕ್ಕೆ ಉತ್ತಮ ರಿಯಾಕ್ಷನ್ ಸಿಗುತ್ತಿದೆ’ ಎಂದು ಹೇಳುವ ಮೂಲಕ ನೆಗೆಟಿವ್ ಟೀಕೆಗಳಿಗೆ ತಕ್ಕ ಉತ್ತರ ನೀಡಿದರು.

ಇದನ್ನೂ ಓದಿ: ಮುಂಬೈನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದ ಶಿವಣ್ಣ, ಆರ್. ಚಂದ್ರು

ಆರ್. ಚಂದ್ರು ಈಗ ನಿರ್ಮಾಪಕರಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಪ್ರಸಿದ್ಧ ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್ ಅವರೊಂದಿಗೆ ಕೈಜೋಡಿಸಿರುವ ಅವರು, ಬೃಹತ್ ಮಟ್ಟದಲ್ಲಿ ನೂತನ ಹಿಂದಿ ಸಿನಿಮಾವೊಂದನ್ನು ನಿರ್ಮಿಸಲು ಸಜ್ಜಾಗಿದ್ದಾರೆ. ಈ ಬಹುಭಾಷಾ ಯೋಜನೆಯು ಹಿಂದಿ, ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಮೂಡಿಬರಲಿದೆ. ಚಿತ್ರದಲ್ಲಿ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹಾಗೂ ತೆಲುಗಿನ ಖ್ಯಾತ ನಟ ಸುನೀಲ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ ಈ ಬಿಗ್ ಬಜೆಟ್ ಸಿನಿಮಾಗೆ ‘ಒರಿಜಿನಲ್ ಮಾನ್‌ಸ್ಟರ್’ ಎಂದು ಹೆಸರಿಡಲಾಗಿದ್ದು, ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us