ನಾನು ಚಾನ್ಸ್​ ಗಿಟ್ಟಿಸಿಕೊಳ್ಳಲು ಆ ರೀತಿಯ ಕೆಲಸವನ್ನು ಎಂದಿಗೂ ಮಾಡಿಲ್ಲ ಎಂದ ಶ್ರುತಿ ಹಾಸನ್

ಅನೇಕ ಸ್ಟಾರ್ ಕಿಡ್​ಗಳು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕೆಲವರು ತಂದೆ-ತಾಯಿ ಹೆಸರಲ್ಲಿ ಸಿನಿಮಾ ಆಫರ್ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಟ್ಯಾಲೆಂಟ್ ತೋರಿಸಿ ಆಫರ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಶ್ರುತಿ ಹಾಸನ್ ಅವರು ಎರಡನೇ ಕೆಟಗರಿಗೆ ಸೇರುತ್ತಾರೆ.

ನಾನು ಚಾನ್ಸ್​ ಗಿಟ್ಟಿಸಿಕೊಳ್ಳಲು ಆ ರೀತಿಯ ಕೆಲಸವನ್ನು ಎಂದಿಗೂ ಮಾಡಿಲ್ಲ ಎಂದ ಶ್ರುತಿ ಹಾಸನ್
ಶ್ರುತಿ ಹಾಸನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 13, 2022 | 3:35 PM

ನಟಿ ಶ್ರುತಿ ಹಾಸನ್ (Shruti Haasan) ಅವರು ಸ್ಟಾರ್ ಕಿಡ್. ಅವರಿಗೆ ಬಾಲಿವುಡ್​ (Bollywood) ಹಾಗೂ ದಕ್ಷಿಣ ಭಾರತದಲ್ಲಿ ಸಖತ್ ಬೇಡಿಕೆ ಇದೆ. ಹಲವು ಸ್ಟಾರ್ ನಟರ ಜತೆ ಅವರು ತೆರೆ ಹಂಚಿಕೊಂಡಿದ್ದಾರೆ. ಸ್ಟಾರ್ ಕಿಡ್ ಆದ ಹೊರತಾಗಿಯೂ ಅವರು ಎಂದಿಗೂ ಕಮಲ್ ಹಾಸನ್ (Kamal Haasan ) ಹೆಸರನ್ನು ಬಳಕೆ ಮಾಡಿಕೊಂಡು ಅವಕಾಶ ಪಡೆದಿಲ್ಲವಂತೆ. ಈ ಬಗ್ಗೆ ಅವರು ಈಗ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ‘ತಂದೆಯ ಹೆಸರನ್ನು ಹೇಳಿಕೊಂಡು ಎಂದಿಗೂ ಸಿನಿಮಾ ಆಫರ್ ಪಡೆದಿಲ್ಲ’ ಎಂಬುದು ಶ್ರುತಿ ಹಾಸನ್ ಮಾತು.

ಅನೇಕ ಸ್ಟಾರ್ ಕಿಡ್​ಗಳು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕೆಲವರು ತಂದೆ-ತಾಯಿ ಹೆಸರಲ್ಲಿ ಸಿನಿಮಾ ಆಫರ್ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಟ್ಯಾಲೆಂಟ್ ತೋರಿಸಿ ಆಫರ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಶ್ರುತಿ ಹಾಸನ್ ಅವರು ಎರಡನೇ ಕೆಟಗರಿಗೆ ಸೇರುತ್ತಾರೆ. ‘ನನ್ನ ಸರ್​ನೇಮ್ ನನಗೆ ಚಿತ್ರರಂಗದ ಬಾಗಿಲನ್ನು ತೆರೆಯಿತು ಎಂಬುದು ನನಗೆ ತಿಳಿದಿದೆ. ಆದರೆ, ಆಫರ್ ಪಡೆಯಲು ಅಥವಾ ಬಿಲ್ ಪೇ ಮಾಡಲು ನನ್ನ ಹೆತ್ತವರ ಹೆಸರನ್ನು ನಾನು ಎಂದಿಗೂ ಬಳಕೆ ಮಾಡಿಕೊಂಡಿಲ್ಲ ಎಂಬ ವಿಚಾರ ನನಗೆ ಸ್ಪಷ್ಟವಾಗಿ ತಿಳಿದಿದೆ’ ಎನ್ನುತ್ತಾರೆ ಶ್ರುತಿ ಹಾಸನ್.

‘ನಾನು ಈ ಉದ್ಯಮದಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಆ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ, ಹಾಸನ್ ಎಂಬ ಕಾರಣಕ್ಕೆ ನನಗೆ ಮೊದಲು ಆಫರ್ ಸಿಕ್ಕಿತು ಎಂಬ ವಾಸ್ತವವನ್ನು ನಾನು ಒಪ್ಪಿಕೊಳ್ಳುತ್ತೇನೆ’ ಎನ್ನುತ್ತಾರೆ ಅವರು. ಈ ಮೂಲಕ ಈಗ ಸಿಗುತ್ತಿರುವ ಆಫರ್​ಗಳಿಗೆ ತಮ್ಮ ಟ್ಯಾಲೆಂಟ್ ಕಾರಣ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ
Image
‘ನಿಮ್ಮ ತುಟಿಗಳ ಸೈಜ್​ ಏನು’? ಶ್ರುತಿ ಹಾಸನ್​ಗೆ ಪ್ರಶ್ನೆ ಕೇಳಿದ ಭೂಪ; ನಟಿಯಿಂದ ಬಂತು ಪ್ರತಿಕ್ರಿಯೆ
Image
‘ಇದು ಲವ್ ಮ್ಯಾರೇಜ್​, ಲವ್ ಜಿಹಾದ್ ಅಲ್ಲ’; ನಟಿ ಶ್ರುತಿ ಹೀಗೆ ಹೇಳಿದ್ದೇಕೆ?
Image
ಶ್ರುತಿ ಹಾಸನ್​ ಹೊಸ ಫೋಟೋಶೂಟ್​; ಬಗೆ ಬಗೆಯಲ್ಲಿ ಪೋಸ್​ ನೀಡಿದ ಕಮಲ್ ಹಾಸನ್​​ ಪುತ್ರಿ
Image
ಸಾರ್ವಜನಿಕವಾಗಿಯೇ ಬಾಯ್​ಫ್ರೆಂಡ್​ಗೆ ಕಿಸ್​ ಮಾಡಿದ ಶ್ರುತಿ ಹಾಸನ್​; ವೈರಲ್​ ಆಯ್ತು ಫೋಟೋ

ಇದನ್ನೂ ಓದಿ:  ನಂದಮೂರಿ ಬಾಲಕೃಷ್ಣಗೆ ಕೊರೊನಾ ಪಾಸಿಟಿವ್​; ಶ್ರುತಿ ಹಾಸನ್​ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಚಿಂತೆ

ಶ್ರುತಿ ಹಾಸನ್ ಅವರು ಪ್ರಭಾಸ್ ನಟನೆಯ ‘ಸಲಾರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಲುಕ್ ಹೇಗಿದೆ ಎಂಬ ಬಗ್ಗೆ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಚಿತ್ರ 2023ರಲ್ಲಿ ರಿಲೀಸ್ ಆಗಲಿದೆ. ಕೊವಿಡ್ ಕಾರಣದಿಂದ ಸಿನಿಮಾ ಕೆಲಸಗಳು ವಿಳಂಬವಾದವು. ಈ ಚಿತ್ರ ಅವರ ಪಾಲಿಗೆ ತುಂಬಾನೇ ಮುಖ್ಯ ಆಗಿದೆ. ಈ ಚಿತ್ರ ಅವರ ವೃತ್ತಿ ಬದುಕಿನ ದಿಕ್ಕನ್ನು ಬದಲಿಸುವ ಸಾಧ್ಯತೆ ಇದೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ