ಒಂದೇ ಸಿನಿಮಾದಲ್ಲಿ 30 ಲಿಪ್​ಲಾಕ್ ದೃಶ್ಯ, ಕನ್ನಡದಲ್ಲೂ ನಟಿಸಿದ್ದಾರೆ ಈ ಹೀರೋಯಿನ್; ಯಾರು ಆ ಬ್ಯೂಟಿ?

ಸೋನಾಲ್ ಚೌಹಾಣ್ ಅವರು 2008ರಲ್ಲಿ ‘ಜನ್ನತ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಕನ್ನಡ ಚಿತ್ರರಂಗದಲ್ಲೂ ‘ಚೆಲುವೆಯೇ ನಿನ್ನ ನೋಡಲು’ ಚಿತ್ರದ ಮೂಲಕ ಅವರು ನಟಿಸಿದ್ದಾರೆ. ‘3G’ ಚಿತ್ರದಲ್ಲಿ ಅವರು 30ಕ್ಕೂ ಹೆಚ್ಚು ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದರು.

ಒಂದೇ ಸಿನಿಮಾದಲ್ಲಿ 30 ಲಿಪ್​ಲಾಕ್ ದೃಶ್ಯ, ಕನ್ನಡದಲ್ಲೂ ನಟಿಸಿದ್ದಾರೆ ಈ ಹೀರೋಯಿನ್; ಯಾರು ಆ ಬ್ಯೂಟಿ?
ಸೋನಲ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 02, 2025 | 8:04 AM

ಇವರು ಹಿಂದಿ ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದರು. ಅವರು 2008ರಲ್ಲಿ ‘ಜನ್ನತ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಕನ್ನಡದಲ್ಲಿ ‘ಚೆಲುವೆಯೇ ನಿನ್ನ ನೋಡಲು’ ಸಿನಿಮಾ ಮಾಡಿದ್ದಾರೆ. ಅವರು ಬೇರಾರೂ ಅಲ್ಲ ಸೋನಾಲ್ ಚೌಹಾಣ್. ಸೋನಾಲ್ ಮೊದಲ ಚಿತ್ರದಿಂದ ರಾಷ್ಟ್ರೀಯ ಕ್ರಶ್ ಆದರು. ತೆಲುಗು, ಹಿಂದಿ ಭಾಷೆಗಳಲ್ಲಿ ಸಿನಿಮಾ, ಮ್ಯೂಸಿಕ್ ಆಲ್ಬಂ ಮಾಡಿದ್ದರೂ ಈ ಚೆಲುವೆಗೆ ಸಿಗಬೇಕಾದ ಕ್ರೇಜ್ ಸಿಕ್ಕಿಲ್ಲ. ಇನ್ನೊಂದು ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ಇವರು ಒಂದೇ ಸಿನಿಮಾದಲ್ಲಿ 30 ಲಿಪ್ಲಾಕ್ ಸೀನ್​ಗಳಲ್ಲಿ ನಟಿಸಿ ಹುಡುಗರ ನಿದ್ದೆಗೆಡಿಸಿದ್ದರು.

ಸೋನಾಲ್ ಚೌಹಾಣ್ 16 ಮೇ 1987 ರಂದು ನೋಯ್ಡಾದಲ್ಲಿ ಜನಿಸಿದರು. ಸೋನಾಲ್ ಓದಿದ್ದು ನೊಯ್ಡಾದ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ. ಅದರ ನಂತರ, ಸೋನಾಲ್ ತನ್ನ ಪದವಿಯನ್ನು ದೆಹಲಿಯ ಗಾರ್ಗಿ ಕಾಲೇಜಿನಲ್ಲಿ ಪೂರ್ಣಗೊಳಿಸಿದಳು. ನಂತರ ಅವರು 2005ರಲ್ಲಿ ವಿಶ್ವ ಸುಂದರಿ ಟೂರಿಸಂ ಪ್ರಶಸ್ತಿಯನ್ನು ಗೆದ್ದರು. ಸೋನಾಲ್ ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ: ಗರ್ಲ್​ಫ್ರೆಂಡ್ ಬರ್ತ್​ಡೇ ಪಾರ್ಟಿನ ಅದ್ದೂರಿಯಾಗಿ ಆಚರಿಸಿದ ಸಲ್ಮಾನ್ ಖಾನ್

ಹಿಮೇಶ್ ರೇಶಮಿಯಾ ಅವರ ಮ್ಯೂಸಿಕ್ ‘ಆಲ್ಬಂ ಆಪ್ಕಾ ಸುರೂರ್‌’ನ ‘ಸಂಜೋ ನಾ’ ಹಾಡಿನಲ್ಲಿ ಸೋನಾಲ್ ಮೊದಲ ಬಾರಿಗೆ ಕಾಣಿಸಿಕೊಂಡರು. ಸೋನಾಲ್ ಜನ್ನತ್ (2008) ಚಿತ್ರದಲ್ಲಿ ಇಮ್ರಾನ್ ಹಶ್ಮಿಯೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಹಿಟ್ ಆಗಿದ್ದರೂ ಆ ನಂತರ ಸೋನಾಲ್​ಗೆ ಯಾವುದೇ ಮಹತ್ವದ ಆಫರ್​ಗಳು ಬಂದಿರಲಿಲ್ಲ. 2010ರಲ್ಲಿ ‘ಚೆಲುವೆಯೇ ನಿನ್ನ ನೋಡಲು’ ಸಿನಿಮಾ ಮಾಡಿದರು.

2013ರಲ್ಲಿ ಸೋನಾಲ್ ಚೌಹಾಣ್ ‘3ಜಿ- ಎ ಕಿಲ್ಲರ್ ಕನೆಕ್ಷನ್’ ಚಿತ್ರದಲ್ಲಿ ನಟಿಸಿದ್ದರು. ನೀಲ್ ನಿತಿನ್ ಮುಖೇಶ್ ಇದರಲ್ಲಿ ನಾಯಕನಾಗಿ ನಟಿಸಿದ್ದಾರೆ. ಅದು ಬಾಕ್ಸ್ ಆಫೀಸ್‌ನಲ್ಲಿ ಸೋತಿತು. ಆದರೆ ಚಿತ್ರವು 30 ಕಿಸ್ ದೃಶ್ಯಗಳನ್ನು ಹೊಂದಿದ್ದು,  ದಾಖಲೆ ಬರೆದಿದೆ. ಈ ಹಿಂದೆ ಇಮ್ರಾನ್ ಹಶ್ಮಿ ಮತ್ತು ಮಲ್ಲಿಕಾ ಶೆರಾವತ್ ಅಭಿನಯದ ‘ಮರ್ಡರ್’ ಚಿತ್ರವು 20 ಕಿಸ್ ದೃಶ್ಯಗಳನ್ನು ಹೊಂದಿತ್ತು. ಆ ದಾಖಲೆಯನ್ನು 3G ಚಿತ್ರ (30 ಕಿಸ್ ಸೀನ್‌ಗಳು) ಮುರಿದಿತ್ತು. ಸೋನಾಲ್ ಯಾವಾಗಲೂ ಇನ್​​ಸ್ಟಾಗ್ರಾಮ್​ನಲ್ಲಿ ಸಕ್ರಿಯವಾಗಿರುತ್ತಾರೆ. ಯಾವಾಗಲೂ ಇತ್ತೀಚಿನ ಫೋಟೋಗಳೊಂದಿಗೆ ಅಭಿಮಾನಿಗಳನ್ನು ರಂಜಿಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ