ಸೋನಲ್ ಹಾಗೂ ತರುಣ್ ಸುಧೀರ್ ನಡುವಿನ ವಯಸ್ಸಿನ ಅಂತರ ಎಷ್ಟು?
ತರುಣ್ ಸುಧೀರ್ ಅವರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ. ನಟಿ ಸೋನಲ್ ಮೊಂತೆರೋ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಅವರು ಸ್ಯಾಂಡಲ್ವುಡ್ನ ಭರವಸೆಯ ನಟಿ ಎನಿಸಿಕೊಂಡಿದ್ದಾರೆ. ಈಗ ಇಬ್ಬರೂ ವಿವಾಹ ಆಗುತ್ತಿದ್ದಾರೆ. ಇವರ ವಯಸ್ಸಿನ ಅಂತರದ ಬಗ್ಗೆ ಇಲ್ಲಿದೆ ವಿವರ.

ನಟಿ ಸೋನಲ್ ಮೊಂತೆರೋ ಅವರು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ. ಇದಕ್ಕೆ ಕಾರಣ ಆಗಿರೋದು ಅವರ ಮದುವೆ ವಿಚಾರ. ಸೋನಲ್ ಅವರು ಶೀಘ್ರವೇ ವಿವಾಹ ಆಗುತ್ತಿದ್ದಾರೆ. ಕನ್ನಡದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಜೊತೆ ಇವರ ಮದುವೆ ನಡೆಯಲಿದೆ. ಇವರು ಮಾಡಿರೋ ಪ್ರೀವೆಡ್ಡಿಂಗ್ ವಿಡಿಯೋ ಬಗ್ಗೆ ಸಖತ್ ಸದ್ದು ಮಾಡಿದೆ. ಹಾಗಾದರೆ, ಸೋನಲ್ ಹಾಗೂ ತರುಣ್ ನಡುವಿನ ವಯಸ್ಸಿನ ಅಂತರ ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ವಿವರ.
ತರುಣ್ ಸುಧೀರ್ ಅವರು ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕನಾಗಿ ಸ್ಯಾಂಡಲ್ವುಡ್ನಲ್ಲಿ ಮೂರು ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ‘ಚೌಕ’, ‘ರಾಬರ್ಟ್’ ಹಾಗೂ ‘ಕಾಟೇರ’ ಚಿತ್ರಗಳನ್ನು ತರುಣ್ ನಿರ್ದೇಶನ ಮಾಡಿದ್ದಾರೆ. ಈ ಮೂರು ಚಿತ್ರಗಳು ಮೆಚ್ಚುಗೆ ಪಡೆದಿವೆ. ‘ರಾಬರ್ಟ್’ ಸಿನಿಮಾದಲ್ಲಿ ಸೋನಲ್ ನಟಿಸಿದ್ದರು. ಇವರ ಮಧ್ಯೆ ಪ್ರೀತಿ ಮೂಡಿತು. ಈಗ ಇಬ್ಬರೂ ವಿವಾಹ ಆಗುತ್ತಿದ್ದಾರೆ.
ಸೋನಲ್ ಅವರು ಮಂಗಳೂರಿನವರು. ಅವರು ಮೊದಲು ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಆನ್ಲೈನ್ನಲ್ಲಿ ಇರುವ ಮಾಹಿತಿ ಪ್ರಕಾರ ಅವರು ಜನಿಸಿದ್ದು 1995ರ ಆಗಸ್ಟ್ 11ರಂದು. ಅಂದರೆ ಅವರಿಗೆ ಇನ್ನು ಕೆಲವೇ ದಿನಗಳಲ್ಲಿ 29 ವರ್ಷ ತುಂಬಲಿದೆ. ತರುಣ್ ಸುಧೀರ್ ಅವರಿಗೆ 41 ವರ್ಷ ಎನ್ನಲಾಗಿದೆ. ಈಗ ಅವರು ಜನಿಸಿದ್ದು 1983ರಲ್ಲಿ. ಅಂದರೆ, ಇಬ್ಬರ ಮಧ್ಯೆ ಸುಮರು 12 ವರ್ಷಗಳ ಅಂತರ ಇದೆ. ಚಿತ್ರರಂಗದಲ್ಲಿ ವಯಸ್ಸಿನ ಅಂತರವನ್ನು ಯಾರೂ ಅಷ್ಟು ಗಂಭೀರವಾಗಿ ಸ್ವೀಕರಿಸುವುದಿಲ್ಲ.
ಇದನ್ನೂ ಓದಿ: ಎಲ್ಲಿ ಪ್ರೀತಿ ಪ್ರಾರಂಭವಾಯಿತೋ ಅಲ್ಲಿಯೇ ಪ್ರೀ-ವೆಡ್ಡಿಂಗ್ ವಿಡಿಯೋ ಮಾಡಿಸಿದ ತರುಣ್-ಸೋನಲ್
ಸೋನಲ್ ಹಾಗೂ ತರುಣ್ ಅವರು ಆಗಸ್ಟ್ 11ರಂದು ವಿವಾಹ ಆಗುತ್ತಿದ್ದಾರೆ. ಆಗಸ್ಟ್ 10ರಂದು ಆರತಕ್ಷತೆ ಕಾರ್ಯಕ್ರಮಗಳು ನಡೆಯಲಿದ್ದು, ಆಗಸ್ಟ್ 11ರಂದು ವಿವಾಹ ನಡೆಯಲಿದೆ. ಬೆಂಗಳೂರಿನ ಕೆಂಗೇರಿ ಸಮೀಪದ ಕಲ್ಯಾಣ ಮಂಟಪದಲ್ಲಿ ಈ ವಿವಾಹ ಮಹೋತ್ಸವ ಜರುಗಲಿದೆ. ದರ್ಶನ್ ಅವರಿಗೂ ಈ ವಿವಾಹಕ್ಕೆ ಆಮಂತ್ರಣ ಇದೆ. ಆದರೆ, ಸದ್ಯ ಅವರು ಜೈಲಿನಲ್ಲಿ ಇರುವುದರಿಂದ ಅವರಿಗೆ ಮದುವೆಗೆ ಬರಲು ಆಗುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.