AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪಾಕಿಸ್ತಾನ ಒಳ್ಳೆಯ ನೆರೆ ರಾಷ್ಟ್ರ, ಕಸಬ್ ಜೆಂಟಲ್‌ಮನ್’: ಶಾರುಖ್ ಖಾನ್ ಹೇಳಿಕೆಗೆ ನೆಟ್ಟಿಗರು ಫುಲ್ ​​ ಗರಂ

'ಧುರಂಧರ್ 2' ಯಶಸ್ಸಿನ ಬೆನ್ನಲ್ಲೇ ಶಾರುಖ್ ಖಾನ್ ಅವರ ಹಳೆಯ ವಿಡಿಯೋಗಳು ವೈರಲ್ ಆಗಿವೆ. ಪಾಕಿಸ್ತಾನವನ್ನು 'ಉತ್ತಮ ನೆರೆಹೊರೆ' ಎಂದು ಶ್ಲಾಘಿಸಿರುವುದು ಮತ್ತು ಅಜ್ಮಲ್ ಕಸಬ್‌ರನ್ನು 'ಜೆಂಟಲ್‌ಮನ್' ಎಂದು ಕರೆದಿರುವುದು ವಿವಾದಕ್ಕೆ ಕಾರಣವಾಗಿದೆ. ನೆಟ್ಟಿಗರು SRKಯನ್ನು 'ದೇಶದ್ರೋಹಿ' ಎಂದು ಟೀಕಿಸುತ್ತಿದ್ದರೆ, ಅಭಿಮಾನಿಗಳು ವೀಡಿಯೋಗಳು ತಿರುಚಲ್ಪಟ್ಟ ಹಳೆಯ ಸಂದರ್ಭದ್ದು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

'ಪಾಕಿಸ್ತಾನ ಒಳ್ಳೆಯ ನೆರೆ ರಾಷ್ಟ್ರ, ಕಸಬ್ ಜೆಂಟಲ್‌ಮನ್': ಶಾರುಖ್ ಖಾನ್ ಹೇಳಿಕೆಗೆ ನೆಟ್ಟಿಗರು ಫುಲ್ ​​ ಗರಂ
ಶಾರುಖ್ ಖಾನ್ ವಿವಾದ
ಅಕ್ಷಯ್​ ಪಲ್ಲಮಜಲು​​
|

Updated on:Apr 01, 2026 | 12:25 PM

Share

ಮುಂಬೈ ,ಏ.1: ‘ಧುರಂಧರ್ 2’ ಸಿನಿಮಾ ಯಶಸ್ಸು ಆಗುತ್ತಿದ್ದಂತೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಹಳೆಯ ಸಂದರ್ಶನದ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ಪಾಕಿಸ್ತಾನವನ್ನು “ಉತ್ತಮ ನೆರೆಹೊರೆಯ ರಾಷ್ಟ್ರ” ಎಂದು ಕರೆದಿರುವ ಮತ್ತು ಉಗ್ರ ಅಜ್ಮಲ್ ಕಸಬ್ ಬಗ್ಗೆ ಮಾತನಾಡಿರುವ ವೀಡಿಯೊಗಳು ಈಗ ದೊಡ್ಡ ವಿವಾದವನ್ನೇ ಸೃಷ್ಟಿಸಿವೆ. ಸೋಶಿಯಲ್​ ಮೀಡಿಯಾದಲ್ಲಿ ಈ ಹೇಳಿಕೆಗೆ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿದೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಶಾರುಖ್ ಖಾನ್ ಪಾಕಿಸ್ತಾನದೊಂದಿಗಿನ ಸಂಬಂಧದ ಕುರಿತು ಮಾತನಾಡುತ್ತಾ, ಆ ದೇಶವನ್ನು ಶ್ಲಾಘಿಸಿದ್ದಾರೆ ಎನ್ನಲಾಗಿದೆ. ಮತ್ತೊಂದು ವೀಡಿಯೊದಲ್ಲಿ 26/11 ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್‌ನನ್ನು “ಜೆಂಟಲ್‌ಮನ್” ಎಂದು ಉಲ್ಲೇಖಿಸಿರುವ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಎಲ್ಲರಿಗೂ ಶಾರುಖ್ ಖಾನ್​​ ಅವರ ಉಗ್ರ ಅಜ್ಮಲ್ ಕಸಬ್‌ನನ್ನು “ಜೆಂಟಲ್‌ಮನ್” ಎಂದಿರುವುದೇ ದೊಡ್ಡ ಅಚ್ಚರಿಯಾಗಿದೆ. ಉಗ್ರಗಾಮಿಗಳ ಸಿದ್ಧಾಂತವನ್ನು ಕಟುವಾಗಿ ಟೀಕಿಸುತ್ತಾ, “ಜೈಲಿನಲ್ಲಿರುವ ಆ ವ್ಯಕ್ತಿ (ಕಸಬ್)… ಅವನು ಯಾವ ತರ್ಕದ ಮೇಲೆ ಜನರನ್ನು ಕೊಂದಿದ್ದಾನೆ? ಅವನಿಗೆ ಶಿಕ್ಷಣ ಎಲ್ಲಿದೆ?” ಎಂದು ಪ್ರಶ್ನಿಸಿದ್ದರು. ಆದರೆ, ಕಸಬ್‌ನನ್ನು ‘Gentleman’ (ಸಂಭಾವಿತ ವ್ಯಕ್ತಿ) ಎಂಬ ಪದವನ್ನು ಬಳಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಪದವನ್ನೇ ಈಗ ಕೆಲವರು ಗುರಿಯಾಗಿಸಿಕೊಂಡು, “ಶಾರುಖ್ ಒಬ್ಬ ಉಗ್ರನನ್ನು ಸಂಭಾವಿತ ಎಂದು ಕರೆದಿದ್ದಾರೆ” ಎಂದು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಬಳಿಕ ಬರ್ತಿದೆ ಏಳೂವರೆ ಗಂಟೆ ಸಿನಿಮಾ; ಎರಡು ಇಂಟರ್​​ವಲ್

ಇಲ್ಲಿದೆ ನೋಡಿ ವಿಡಿಯೋ:

ಈ ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುವ ಅನೇಕರು ಶಾರುಖ್ ಖಾನ್ ಅವರನ್ನು “ದೇಶವಿರೋಧಿ” ಎಂದು ಕರೆದು ಟೀಕಿಸುತ್ತಿದ್ದಾರೆ. “ಸಿನಿಮಾ ಯಶಸ್ವಿಯಾಗುತ್ತಿರುವಾಗ ಇಂತಹ ಹೇಳಿಕೆಗಳು ಹೊರಬರುತ್ತಿರುವುದು ಆಘಾತಕಾರಿ” ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಆದರೆ, ಶಾರುಖ್ ಅಭಿಮಾನಿಗಳು ಇದು ಹಳೆಯ ವೀಡಿಯೊ ಮತ್ತು ಸಂದರ್ಭಕ್ಕೆ ತಕ್ಕಂತೆ ತಿರುಚಲಾಗಿದೆ ಎಂದು ನಟನ ಬೆಂಬಲಕ್ಕೆ ನಿಂತಿದ್ದಾರೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:20 pm, Wed, 1 April 26

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ