ಕಲೆಕ್ಷನ್ ವಿಚಾರದಲ್ಲಿ ‘ಬಾಹುಬಲಿ’ ದಾಖಲೆಯನ್ನೇ ಮುರಿದ ‘ಆರ್ಆರ್ಆರ್’; ರಾಜಮೌಳಿಗೆ ರಾಜಮೌಳಿಯೇ ಸಾಟಿ
ಹಿಂದಿಯಲ್ಲಿ ಈ ಚಿತ್ರದ ಅಬ್ಬರ ಜೋರಾಗಿದೆ. ಆರು ದಿನಕ್ಕೆ ಈ ಸಿನಿಮಾ 120 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಹಿಂದಿ ಸಿನಿಮಾಗಳೂ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿಲ್ಲ.
ಎಸ್ಎಸ್ ರಾಜಮೌಳಿ (SS Rajamouli) ಅವರು ಪ್ರತಿ ಸಿನಿಮಾದಿಂದ ಸಿನಿಮಾಗೆ ಅಪ್ಗ್ರೇಡ್ ಆಗುತ್ತಿದ್ದಾರೆ. ಹೊಸಹೊಸ ಕಥೆಗಳೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಮೇಕಿಂಗ್ ವಿಚಾರದಲ್ಲಿ ಅವರನ್ನು ಮೀರಿಸುವವರೇ ಇಲ್ಲ ಎಂಬ ರೀತಿಯಲ್ಲಿ ಬೆಳೆದು ನಿಂತಿದ್ದಾರೆ. ಈಗ ಅವರ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ (RRR Movie) ಕಲೆಕ್ಷನ್ ವಿಚಾರದಲ್ಲಿ ಹೊಸ ದಾಖಲೆ ಬರೆದಿದೆ. ಸಿನಿಮಾ ತೆರೆಕಂಡು ಆರು ದಿನಕ್ಕೆ ‘ಬಾಹುಬಲಿ: ದಿ ಬಿಗಿನಿಂಗ್’ ಮಾಡಿದ್ದ ದಾಖಲೆಯನ್ನೇ ಪುಡಿ ಮಾಡಿದೆ. ಇನ್ನೂ ಹಲವು ದಿನ ಚಿತ್ರ ಪದರ್ಶನ ಕಾಣಲಿದ್ದು, ‘ಬಾಹುಬಲಿ 2’ನ (Bahubali 2) ದಾಖಲೆಯನ್ನೂ ಮುರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
2015ರಲ್ಲಿ ‘ಬಾಹುಬಲಿ’ ಸಿನಿಮಾ ತೆರೆಗೆ ಬಂದಿತ್ತು. ಈ ಚಿತ್ರದ ಲೈಫ್ಟೈಮ್ ಕಲೆಕ್ಷನ್ 650 ಕೋಟಿ ರೂಪಾಯಿ. ಈಗ ‘ಆರ್ಆರ್ಆರ್’ ಚಿತ್ರ 672 ಕೋಟಿ ರೂಪಾಯಿ ಗಳಿಸುವ ಮೂಲಕ ‘ಬಾಹುಬಲಿ’ ದಾಖಲೆಯನ್ನು ಪುಡಿ ಮಾಡಿದೆ. ಮಾರ್ಚ್ 31ರ ಲೆಕ್ಕಾಚಾರ ಇನ್ನಷ್ಟೇ ಬರಬೇಕಿದೆ. ಹೀಗಾಗಿ, ಮೊದಲ ವಾರ ಪೂರ್ಣಗೊಳ್ಳುವುದರೊಳಗೆ ಸಿನಿಮಾದ ಕಲೆಕ್ಷನ್ 700 ಕೋಟಿ ರೂಪಾಯಿ ದಾಟಲಿದೆ.
ಟ್ರೇಡ್ ಅನಾಲಿಸ್ಟ್ ಮನೋಬಲ ವಿಜಯಬಾಲನ್ ಅವರ ಪ್ರಕಾರ ಈ ಚಿತ್ರ ಆರು ದಿನಕ್ಕೆ 672 ಕೋಟಿ ರೂ. ಕಲೆಕ್ಷನ್ ಮಾಡಿದೆ. ಬುಧವಾರ ಕೂಡ ವಿಶ್ವ ಮಟ್ಟದಲ್ಲಿ ಈ ಸಿನಿಮಾ 50 ಕೋಟಿ ರೂಪಾಯಿ ಗಳಿಸಿದೆ. ಈ ವಾರಾಂತ್ಯದಲ್ಲಿ ಚಿತ್ರದ ಕಲೆಕ್ಷನ್ 800 ಕೋಟಿ ರೂಪಾಯಿ ದಾಟಿದರೂ ಅಚ್ಚರಿ ಏನಿಲ್ಲ.
#RRRMovie WW Box Office
Marching towards ₹700 cr gross mark.
Day 1 – ₹ 257.15 cr Day 2 – ₹ 114.38 cr Day 3 – ₹ 118.63 cr Day 4 – ₹ 72.80 cr Day 5 – ₹ 58.46 cr Day 6 – ₹ 50.74 cr Total – ₹ 672.16 cr#RamCharan #JrNTR #SSRajamouli
— Manobala Vijayabalan (@ManobalaV) March 31, 2022
ಇನ್ನು, ಹಿಂದಿಯಲ್ಲಿ ಈ ಚಿತ್ರದ ಅಬ್ಬರ ಜೋರಾಗಿದೆ. ಆರು ದಿನಕ್ಕೆ ಈ ಸಿನಿಮಾ 120 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಹಿಂದಿ ಸಿನಿಮಾಗಳೂ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿಲ್ಲ. ಶೀಘ್ರವೇ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ಎಂದು ಬಾಕ್ಸ್ ಆಫೀಸ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
#RRR reboots and revives biz in mass circuits… Nears *Week 1* biz of #Sooryavanshi [₹ 120.66 cr] in *6 days*… HIGHEST GROSSING FILM [Week 1; post pandemic]… Fri 20.07 cr, Sat 24 cr, Sun 31.50 cr, Mon 17 cr, Tue 15.02 cr, Wed 13 cr. Total: ₹ 120.59 cr. #India biz. ??? pic.twitter.com/EbSh3mTkJO
— taran adarsh (@taran_adarsh) March 31, 2022
ವಿಶ್ವ ಮಟ್ಟದ ಕಲೆಕ್ಷನ್ ವಿವರ
ಮಾರ್ಚ್ 25: 257.15 ಕೋಟಿ ರೂ.
ಮಾರ್ಚ್ 26: 114.38 ಕೋಟಿ ರೂ.
ಮಾರ್ಚ್ 27: 118.63ಕೋಟಿ ರೂ.
ಮಾರ್ಚ್ 28: ₹ 72.80 cr ಕೋಟಿ ರೂ.
ಮಾರ್ಚ್ 29: 58.46 ಕೋಟಿ ರೂ.
ಮಾರ್ಚ್ 30: 50.74 ಕೋಟಿ ರೂ.
ಒಟ್ಟೂ: 672.16 ಕೋಟಿ ರೂ.
ಇದನ್ನೂ ಓದಿ: RRR Box Office Collection: ಹಿಂದಿ ಮಾರುಕಟ್ಟೆಯಲ್ಲಿ ಐದೇ ದಿನಕ್ಕೆ 100 ಕೋಟಿ ರೂ. ಬಾಚಿದ ‘ಆರ್ಆರ್ಆರ್’ ಸಿನಿಮಾ
‘ಆರ್ಆರ್ಆರ್’ನಿಂದ ರಾಮ್ ಚರಣ್ಗೆ ಹೆಚ್ಚಿತು ಬೇಡಿಕೆ; ಬಾಲಿವುಡ್ನಿಂದ ಬಂತು ಎರಡೆರಡು ಆಫರ್
Published On - 4:49 pm, Thu, 31 March 22