‘ಆರ್ಆರ್ಆರ್‘ ಸಿನಿಮಾ ಸೆಂಟಿಮೆಂಟ್ ಮುಂದುವರೆಸಿದ ರಾಜಮೌಳಿ
SS Rajamouli-Mahesh Babu: ಎಸ್ಎಸ್ ರಾಜಮೌಳಿ ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಬಿಡುಗಡೆ ಬಗ್ಗೆ ಈಗಾಗಲೇ ಯೋಜನೆ ಹಾಕಿಕೊಂಡಿರುವ ನಿರ್ದೇಶಕ ರಾಜಮೌಳಿ, ಅವರ ಅತ್ಯಂತ ಯಶಸ್ವಿ ಸಿನಿಮಾ ‘ಆರ್ಆರ್ಆರ್’ನ ಸೆಂಟಿಮೆಂಟ್ ಒಂದನ್ನು ಫಾಲೋ ಮಾಡಲಿದ್ದಾರೆ. ಏನು ಆ ಸೆಂಟಿಮೆಂಟ್, ಹಾಗಿದ್ದರೆ ಹೊಸ ಸಿನಿಮಾ ಬಿಡುಗಡೆ ಯಾವಾಗ?

ಎಸ್ಎಸ್ ರಾಜಮೌಳಿ (SS Rajamouli) ಪ್ರಸ್ತುತ ಮಹೇಶ್ ಬಾಬು (Mahesh Babu) ಸಿನಿಮಾಕ್ಕಾಗಿ ನಿರ್ದೇಶನ ಮುಂದುವರೆಸಿದ್ದಾರೆ. ಇದೀಗ ಸಿನಿಮಾ ಶೂಟಿಂಗ್ಗೆ ಸಣ್ಣ ಬ್ರೇಕ್ ನೀಡಲಾಗಿದೆ. ರಾಜಮೌಳಿ, ತಮ್ಮ ಸಿನಿಮಾದ ಎಲ್ಲ ವಿಭಾಗದಲ್ಲಿಯೂ ಕೈಯಾಡಿಸುತ್ತಾರೆ. ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳನ್ನೂ ಸಹ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದೆಲ್ಲದರ ಜೊತೆಗೆ ಕೆಲವು ಸೆಂಟಿಮೆಂಟ್ಗಳನ್ನು ಸಹ ಫಾಲೋ ಮಾಡುತ್ತಾರೆ ರಾಜಮೌಳಿ. ಇದೀಗ ತಮ್ಮ ಹೊಸ ಸಿನಿಮಾಕ್ಕೂ ಸಹ ಸೆಂಟಿಮೆಂಟ್ ಒಂದನ್ನು ಫಾಲೋ ಮಾಡಲು ಮುಂದಾಗಿದ್ದಾರೆ ರಾಜಮೌಳಿ.
ರಾಜಮೌಳಿ ನಿರ್ದೇಶನದ ಎಲ್ಲ ಸಿನಿಮಾಗಳೂ ಸಹ ಸೂಪರ್ ಹಿಟ್ ಆಗಿವೆ. ಆದರೆ ಅವರಿಗೆ ಅತಿ ಹೆಚ್ಚು ಯಶಸ್ಸು, ಕೀರ್ತಿ ತಂದುಕೊಟ್ಟ ಸಿನಿಮಾ ‘RRR’, ಈ ಸಿನಿಮಾದ ಸೆಂಟಿಮೆಂಟ್ ಅನ್ನು ಅವರ ಹೊಸ ಸಿನಿಮಾಕ್ಕೂ ಮುಂದುವರೆಸಲಿದ್ದಾರೆ ರಾಜಮೌಳಿ. ಅವರ ಅತ್ಯಂತ ಯಶಸ್ವಿ ಸಿನಿಮಾ ‘ಆರ್ಆರ್ಆರ್’ ಬಿಡುಗಡೆ ಆದ ದಿನವೇ ತಮ್ಮ ಹೊಸ ಸಿನಿಮಾ ಅನ್ನೂ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ ರಾಜಮೌಳಿ.
‘ಆರ್ಆರ್ಆರ್’ ಸಿನಿಮಾ 2022 ರ ಮಾರ್ಚ್ 24 ರಂದು ಬಿಡುಗಡೆ ಆಗಿತ್ತು. ಹೀಗಾಗಿ ರಾಜಮೌಳಿ ತಮ್ಮ ಮುಂದಿನ ಸಿನಿಮಾ ಅನ್ನು 2027ರ ಮಾರ್ಚ್ 24ರಂದೇ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಆ ಮೂಲಕ ‘ಆರ್ಆರ್ಆರ್’ ಸೆಂಟಿಮೆಂಟ್ ಮುಂದುವರೆಸಲಿದ್ದಾರೆ. ಸಿನಿಮಾದ ಚಿತ್ರೀಕರಣ ಕೆಲ ದಿನಗಳ ಹಿಂದಷ್ಟೆ ಒಡಿಸ್ಸಾನಲ್ಲಿ ನಡೆದಿತ್ತು. ಚಿತ್ರೀಕರಣದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಇನ್ನೂ ಕೆಲವು ನಟರು ಭಾಗಿ ಆಗಿದ್ದರು. ಸಿನಿಮಾದ ಚಿತ್ರೀಕರಣ ಒಂದು ವರ್ಷ ನಡೆದರೆ ಪೋಸ್ಟ್ ಪ್ರೊಡಕ್ಷನ್ ಮತ್ತು ಪ್ರಚಾರಕ್ಕೆ ಒಂದು ವರ್ಷ ತೆಗೆದುಕೊಳ್ಳಲಿದ್ದಾರಂತೆ ರಾಜಮೌಳಿ.
ಇದನ್ನೂ ಓದಿ:ಆರ್ಆರ್ಆರ್ ಸಿನಿಮಾಕ್ಕೆ ಗೌರವ ನೀಡಿದ ಆಸ್ಕರ್, ರಾಜಮೌಳಿಗೆ ಖುಷಿ
ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ನಟಿಸುತ್ತಿರುವ ಈ ಸಿನಿಮಾ ಅಡ್ವೇಂಚರ್ ಮಾದರಿಯ ಸಿನಿಮಾ ಆಗಿರಲಿದೆ. ಸ್ವತಃ ರಾಜಮೌಳಿ ಅವರೇ ಹೇಳಿದ್ದಂತೆ ಹಾಲಿವುಡ್ನ ‘ಇಂಡಿಯಾನಾ ಜೋನ್ಸ್’ ಮಾದರಿಯ ಕತೆ ಒಳಗೊಂಡಿದೆ. ಸಿನಿಮಾದ ಕತೆ ಹಲವು ದೇಶಗಳಲ್ಲಿ ನಡೆಯಲಿದೆಯಂತೆ. ವಿಶೇಷವಾಗಿ ಅರಣ್ಯಗಳಲ್ಲಿ ಅದ್ಭುತ ಸಾಹಸ ಸನ್ನಿವೇಶಗಳನ್ನು ಈ ಸಿನಿಮಾ ಒಳಗೊಂಡಿರಲಿದೆ. ಸಿನಿಮಾಕ್ಕೆ ಹಲವು ಹಾಲಿವುಡ್ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಹಾಲಿವುಡ್ನ ಕೆಲವು ಪ್ರಮುಖ ನಟರು ಸಹ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:28 pm, Fri, 11 April 25