AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲವು ಅನುಮಾನಗಳ ಬಳಿಕ ಶುರುವಾಗುತ್ತಿದೆ ಸೂರ್ಯ-ಲೋಕೇಶ್ ಸಿನಿಮಾ

ಸೂರ್ಯಾಗಾಗಿ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಬೇಕಿದ್ದ ‘ಇರುಂಬು ಕೈ ಮಾಯಾವಿ’ ಸಿನಿಮಾದ ಕತೆಯನ್ನು ಆಮಿರ್ ಖಾನ್​​ಗೆ ಹೇಳಿ ಅವರ ಜೊತೆ ಅದೇ ಕತೆ ಆಧರಿಸಿ ಸಿನಿಮಾ ಮಾಡುವುದಕ್ಕೆ ಮುಂದಾದರು. ಅಲ್ಲಿಗೆ ಲೋಕೇಶ್ ಮತ್ತು ಸೂರ್ಯ ಒಟ್ಟಿಗೆ ಸಿನಿಮಾ ಅನ್ನೇ ಮಾಡುವುದಿಲ್ಲವೇನೋ ಎನಿಸಿತ್ತು. ಆದರೆ ಇದೀಗ ಸೂರ್ಯ ಅವರ ಸಿನಿಮಾಗಳು ಒಂದರ ಹಿಂದೊಂದರಂತೆ ಸೂಪರ್ ಹಿಟ್ ಆದ ಬೆನ್ನಲ್ಲೆ ಲೋಕೇಶ್ ಇದೀಗ ಸೂರ್ಯ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಹಲವು ಅನುಮಾನಗಳ ಬಳಿಕ ಶುರುವಾಗುತ್ತಿದೆ ಸೂರ್ಯ-ಲೋಕೇಶ್ ಸಿನಿಮಾ
Suriya Movie
ಮಂಜುನಾಥ ಸಿ.
|

Updated on:Sep 04, 2026 | 11:16 AM

Share

ಮುಖ್ಯಾಂಶಗಳು

  • ಸೂರ್ಯ ಮತ್ತು ಲೋಕೇಶ್ ಕನಗರಾಜ್ ಸಿನಿಮಾ
  • ಸೂರ್ಯ ಹಾಗೂ ಲೋಕೇಶ್ ಕೊನೆಗೂ ಒಂದಾಗುತ್ತಿದ್ದಾರೆ.
  • ಬಹಳ ಹಿಂದೆ ಘೋಷಿಸಿದ್ದ ಸಿನಿಮಾ ಈಗ ಸೆಟ್ಟೇರುವಂತಿದೆ.

ತಮಿಳಿನ ಸ್ಟಾರ್ ನಟ ಸೂರ್ಯ ಸತತವಾಗಿ ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಭಾರಿ ನಿರೀಕ್ಷೆ ಇರಿಸಿದ್ದ ‘ಕಂಗುವ’, ‘ರೆಟ್ರೊ’ ಸಿನಿಮಾಗಳ ಹೀನಾಯ ಸೋಲಿನಿಂದ ತಮ್ಮ ಸ್ಟಾರ್ ಪಟ್ಟವನ್ನೇ ಕಳೆದುಕೊಳ್ಳುವ ಭೀತಿ ಎದುರಿಸಿದ್ದ ಸೂರ್ಯ ಆ ಬಳಿಕ ‘ಕರುಪ್ಪು’ ಮತ್ತು ಇತ್ತೀಚೆಗೆ ಬಿಡುಗಡೆ ಆದ ‘ವಿಶ್ವನಾಥ್ ಆಂಡ್ ಸನ್ಸ್’ ಎರಡೂ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಸೂರ್ಯ ಮತ್ತೆ ಸ್ಟಾರ್ ಎನಿಸಿಕೊಂಡ ಬೆನ್ನಲ್ಲೆ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಬೇಕಿದ್ದ ಸೂರ್ಯ ಅವರ ಹಳೆಯ ಸಿನಿಮಾಕ್ಕೆ ಚಾಲನೆ ದೊರೆಯುವ ಕುರಿತು ಚರ್ಚೆ ಶುರುವಾಗಿದೆ.

ಲೋಕೇಶ್ ಕನಗರಾಜ್ ಅವರು ಬಹಳ ಹಿಂದೆ ‘ಇರುಂಬು ಕೈ ಮಾಯಾವಿ’ ಹೆಸರಿನ ಸಿನಿಮಾ ಅನ್ನು ಸೂರ್ಯ ಅವರಿಗಾಗಿ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೊಂದು ಸೂಪರ್ ಹೀರೋ ಕತೆಯುಳ್ಳ ಸಿನಿಮಾ ಆಗಿತ್ತು. ಆ ಸಿನಿಮಾವನ್ನು ಘೋಷಣೆ ಸಹ ಮಾಡಲಾಗಿತ್ತು. ಆದರೆ ಲೋಕೇಶ್ ಕನಗರಾಜ್ ಬೇರೆ ನಾಯಕರುಗಳ ಜೊತೆಗೆ ಬ್ಯುಸಿ ಆದರು. ಅದಾದ ಬಳಿಕ 2022 ರಲ್ಲಿ ಬಿಡುಗಡೆ ಆದ ಕಮಲ್ ಹಾಸನ್ ನಟನೆಯ ‘ವಿಕ್ರಂ’ ಸಿನಿಮಾನಲ್ಲಿ ಸೂರ್ಯ ಅತಿಥಿ ಪಾತ್ರದಲ್ಲಿ ನಟಿಸಿದರು. ಅವರು ನಟಿಸಿದ್ದ ‘ರೋಲೆಕ್ಸ್’ ಪಾತ್ರ ಸಖತ್ ಹಿಟ್ ಆಯ್ತು. ಬಳಿಕ ರೋಲೆಕ್ಸ್ ಪಾತ್ರವನ್ನೇ ಮುಖ್ಯವಾಗಿರಿಸಿಕೊಂಡು ಅದನ್ನೇ ಪ್ರಯತ್ಯೇಕ ಸಿನಿಮಾ ಮಾಡುವುದಾಗಿಯೂ ಲೋಕೇಶ್ ಘೋಷಣೆ ಮಾಡಿದರು. ಆದರೆ ಆ ಸಿನಿಮಾ ಸಹ ಸೆಟ್ಟೇರಲಿಲ್ಲ.

ಸೂರ್ಯ ಜೊತೆ ಮಾಡಬೇಕಿದ್ದ ‘ಇರುಂಬು ಕೈ ಮಾಯಾವಿ’ ಸಿನಿಮಾದ ಕತೆಯನ್ನು ಆಮಿರ್ ಖಾನ್​​ಗೆ ಹೇಳಿ ಅವರ ಜೊತೆ ಅದೇ ಕತೆ ಆಧರಿಸಿ ಸಿನಿಮಾ ಮಾಡುವುದಕ್ಕೆ ಮುಂದಾದರು. ಅಲ್ಲಿಗೆ ಲೋಕೇಶ್ ಮತ್ತು ಸೂರ್ಯ ಒಟ್ಟಿಗೆ ಸಿನಿಮಾ ಅನ್ನೇ ಮಾಡುವುದಿಲ್ಲವೇನೋ ಎನಿಸಿತ್ತು. ಆದರೆ ಇದೀಗ ಸೂರ್ಯ ಅವರ ಸಿನಿಮಾಗಳು ಒಂದರ ಹಿಂದೊಂದರಂತೆ ಸೂಪರ್ ಹಿಟ್ ಆದ ಬೆನ್ನಲ್ಲೆ ಲೋಕೇಶ್ ಇದೀಗ ಸೂರ್ಯ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ:3 ತಿಂಗಳಲ್ಲಿ 2 ಬ್ಲಾಕ್‌ಬಸ್ಟರ್: ನಟ ಸೂರ್ಯನ ದೊಡ್ಡ ಕಂಬ್ಯಾಕ್ 

ಸೂರ್ಯ ಜೊತೆಗೆ ‘ರೋಲೆಕ್ಸ್’ ಸಿನಿಮಾ ಮಾಡಲು ಲೋಕೇಶ್ ಕನಗರಾಜ್ ಮುಂದಾಗಿದ್ದಾರೆ. ‘ವಿಕ್ರಂ’ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಬರುವ ‘ರೋಲೆಕ್ಸ್’ ಪಾತ್ರ ಸಖತ್ ಹಿಟ್ ಆಗಿತ್ತು. ಡ್ರಗ್ಸ್ ಲೋಕದ ಫೈನಲ್ ಬಾಸ್ ಆಗಿರುವ ರೋಲೆಕ್ಸ್ನ ಹಿಂದಿನ ಕತೆ, ಅವನು ಬೆಳೆದ ರೀತಿ, ಅವನು ಎದುರಿಸಿದ ವಿಲನ್​​ಗಳು ಇನ್ನಿತರೆ ಕತೆಗಳನ್ನು ಆಧರಿಸಿ ಸಿನಿಮಾ ಮಾಡುವುದಾಗಿ ಲೋಕೇಶ್ ಹೇಳಿದ್ದರು. ಅದೀಗ ನಿಜವಾಗುವ ಕಾಲ ಬಂದಂತಿದೆ.

ರೋಲೆಕ್ಸ್ ಸಿನಿಮಾ ಬಗ್ಗೆ ಸೂರ್ಯ ಮತ್ತು ಲೋಕೇಶ್ ಕನಗರಾಜ್ ಪರಸ್ಪರ ಚರ್ಚೆ ಮಾಡಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಚಿತ್ರಕತೆಯ ಫೈನ್ ಟ್ಯೂನಿಂಗ್ ನಡೆಯುತ್ತಿದ್ದು, ಮುಂದಿನ ವರ್ಷದ ಮಧ್ಯ ಭಾಗದ ವೇಳೆಗೆ ಸಿನಿಮಾದ ಚಿತ್ರೀಕರಣ ಶುರುವಾಗುವ ಸಾಧ್ಯತೆ ಇದೆ. ಲೋಕೇಶ್ ಕನಗರಾಜ್ ಪ್ರಸ್ತುತ ಅಲ್ಲು ಅರ್ಜುನ್ ಜೊತೆಗೆ ಹೊಸದೊಂದು ಸಿನಿಮಾ ಘೋಷಿಸಿದ್ದು, ಆ ಸಿನಿಮಾ ಮುಗಿದ ಬಳಿಕವಷ್ಟೆ ಸೂರ್ಯ ಜೊತೆಗಿನ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:15 am, Fri, 4 September 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರ ಕುಸಿತ
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರ ಕುಸಿತ
ವಿಶ್ವಸಂಸ್ಥೆಯಲ್ಲಿ ಹಫೀಜ್ ಸಯೀದ್ ಪ್ರಶ್ನೆಗೆ ಮುಖ ತಿರುಗಿಸಿದ ಪಾಕ್ ಪಿಎಂ
ವಿಶ್ವಸಂಸ್ಥೆಯಲ್ಲಿ ಹಫೀಜ್ ಸಯೀದ್ ಪ್ರಶ್ನೆಗೆ ಮುಖ ತಿರುಗಿಸಿದ ಪಾಕ್ ಪಿಎಂ
ಬಿಜೆಪಿ ನಾಯಕಿ ಮಾಧವಿ ಲತಾಗೆ ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ
ಬಿಜೆಪಿ ನಾಯಕಿ ಮಾಧವಿ ಲತಾಗೆ ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ
ಧಾರಾಕಾರ ಮಳೆಗೆ ನಡುಗಿದ ಸಿಕ್ಕಿಂ, ರಿಂಬಿ ಗ್ರಾಮದಲ್ಲಿ ಭೂಕುಸಿತ
ಧಾರಾಕಾರ ಮಳೆಗೆ ನಡುಗಿದ ಸಿಕ್ಕಿಂ, ರಿಂಬಿ ಗ್ರಾಮದಲ್ಲಿ ಭೂಕುಸಿತ
ಇಂದು ಅನಂತ ಪದ್ಮನಾಭ ವ್ರತ ಆಚರಣೆಯಿಂದ ಐಶ್ವರ್ಯ ಮತ್ತು ಯಶಸ್ಸು ಲಭ್ಯ
ಇಂದು ಅನಂತ ಪದ್ಮನಾಭ ವ್ರತ ಆಚರಣೆಯಿಂದ ಐಶ್ವರ್ಯ ಮತ್ತು ಯಶಸ್ಸು ಲಭ್ಯ
ಭಾರೀ ಭೂಕುಸಿತ, ತಡೆಗೋಡೆ ಕುಸಿತದಿಂದ ಒಡಿಶಾದ ಕಳಿಂಗ ಘಾಟ್ ರಸ್ತೆ ಬಂದ್
ಭಾರೀ ಭೂಕುಸಿತ, ತಡೆಗೋಡೆ ಕುಸಿತದಿಂದ ಒಡಿಶಾದ ಕಳಿಂಗ ಘಾಟ್ ರಸ್ತೆ ಬಂದ್
ಚಿತ್ರದುರ್ಗ ಎಸ್ಪಿ ವಿರುದ್ಧ ಶಾಸಕ ವೀರೇಂದ್ರ ಪಪ್ಪಿ ಕೆಂಡಾಮಂಡಲ
ಚಿತ್ರದುರ್ಗ ಎಸ್ಪಿ ವಿರುದ್ಧ ಶಾಸಕ ವೀರೇಂದ್ರ ಪಪ್ಪಿ ಕೆಂಡಾಮಂಡಲ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ