ಅಜಯ್ ಹಾಗೂ ತಬು ಒಟ್ಟಾಗಿ ಹಲವು ಸಿನಿಮಾಗಳಲ್ಲಿ ನಟಿಸೋದೇಕೆ? ಇಲ್ಲಿದೆ ಉತ್ತರ

ತಬು ಅವರಿಗೆ ಇಂದು (ನವೆಂಬರ್ 4) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ವಿಶ್ಗಳು ಬರುತ್ತಿವೆ. ಈ ಮೊದಲು ಅಜಯ್ ದೇವಗನ್ ಅವರಿಗೆ ತಬು ಅವರನ್ನೇ ಏಕೆ ಹಾಕಿಕೊಳ್ಳುತ್ತೀರಿ ಎಂದು ಕೇಳಲಾಗಿತ್ತು. ಇದಕ್ಕೆ ತಬು ದೇವಗನ್ ಅವರು ಉತ್ತರ ನೀಡಿದ್ದರು. ಆ ಉತ್ತರ ಏನು? ಇಲ್ಲಿದೆ ನೋಡಿ

ಅಜಯ್ ಹಾಗೂ ತಬು ಒಟ್ಟಾಗಿ ಹಲವು ಸಿನಿಮಾಗಳಲ್ಲಿ ನಟಿಸೋದೇಕೆ? ಇಲ್ಲಿದೆ ಉತ್ತರ
ತಬು, ಅಜಯ್ ದೇವಗನ್
Follow us
 ಶ್ರೀಲಕ್ಷ್ಮೀ ಎಚ್
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 04, 2024 | 9:23 AM

ಅಜಯ್ ದೇವಗನ್ ಸಿನಿಮಾಗಳಲ್ಲಿ ಸಾಮಾನ್ಯವಾಗಿ ತಬುಗೆ ಒಂದು ಪಾತ್ರ ಇದ್ದೇ ಇರುತ್ತದೆ ಎಂಬುದು ಪ್ರೇಕ್ಷಕರಿಗೆ ಮನದಟ್ಟಾಗಿದೆ. ಅದು ಇಂದು ನಿನ್ನೆಯ ಕಥೆಯಲ್ಲ. ಮೊದಲಿನಿಂದಲೂ ತಬು ಹಾಗೂ ಅಜಯ್ ದೇವಗನ್ ಒಟ್ಟಾಗಿ ನಟಿಸಿದ್ದು ಇದೆ. ಈ ಜೋಡಿ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದು 1994ರಲ್ಲಿ. ‘ವಿಜಯಪಥ’ ಅವರು ನಟಿಸಿದ ಮೊದಲ ಸಿನಿಮಾ. ಇತ್ತೀಚಿಗುನ ವರ್ಷಗಳಲ್ಲಿ ರಿಲೀಸ್ ಆದ ‘ದೃಶ್ಯಂ’, ‘ಭೋಲಾ’ ಸಿನಿಮಾಗಳಲ್ಲಿ ಇವರು ತೆರೆ ಹಂಚಿಕೊಂಡಿದ್ದಾರೆ.

90ರ ದಶಕ ಹಾಗೂ 2000ನೇ ಇಸ್ವಿಯಲ್ಲಿ ಅವರು ಸಲ್ಮಾನ್ ಖಾನ್ ಹಾಗೂ ಅಜಯ್ ದೇವಗನ್ ಜೊತೆ ತಬು ಫ್ರೆಂಡ್ಶಿಪ್ ಬೆಳೆಸಿಕೊಂಡಿದ್ದರು. ಅವರು ಇವರನ್ನು ಕುಟುಂಬದವರು ಎಂದೇ ಭಾವಿಸಿದ್ದಾರೆ. ‘ಸಲ್ಮಾನ್ ಖಾನ್ ಹಾಗೂ ದೇವಗನ್ ಅವರು ಏನೇ ಆದರೂ ನನಗಾಗಿ ಇರುತ್ತಾರೆ. ನಮ್ಮ ಗೆಳೆತನ ಕೆಲಸಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಆಳವಾಗಿದೆ. ಸಮಾನ ಗೌರವ ಇದೆ’ ಎಂದು ಅವರು ಹೇಳಿದ್ದರು

ತಬು ಅವರಿಗೆ ಇಂದು (ನವೆಂಬರ್ 4) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ವಿಶ್ಗಳು ಬರುತ್ತಿವೆ. ಈ ಮೊದಲು ಅಜಯ್ ದೇವಗನ್ ಅವರಿಗೆ ತಬು ಅವರನ್ನೇ ಏಕೆ ಹಾಕಿಕೊಳ್ಳುತ್ತೀರಿ ಎಂದು ಕೇಳಲಾಗಿತ್ತು. ಇದಕ್ಕೆ ತಬು ದೇವಗನ್ ಅವರು ಉತ್ತರ ನೀಡಿದ್ದರು. ‘ನನಗೆ ಅವರ ಜೊತೆ ನಟನೆ ಮಾಡೋದು ಸುಲಭ ಎನಿಸುತ್ತದೆ. ನಮ್ಮ ಮಧ್ಯೆ ಇರುವ ಬಾಂಡಿಂಗ್ನಿಂದ ಇದು ಸಾಧ್ಯ ಆಯಿತು’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ‘ಭೂಲ್​ ಭುಲಯ್ಯ 3’ vs ‘ಸಿಂಗಂ ಅಗೇನ್’; ಎರಡೂ ಚಿತ್ರಕ್ಕೆ ಮೊದಲ ದಿನ ಅಬ್ಬರದ ಗಳಿಕೆ

ತಬು ಅವರಿಗೆ ಈ ವರ್ಷ ಒಂದು ಯಶಸ್ಸು ಸಿಕ್ಕಿದೆ. ‘ಕ್ರ್ಯೂ’ ಚಿತ್ರದಿಂದ ಅವರು ಗೆದ್ದು ಬೀಗಿದ್ದಾರೆ. ಈ ಚಿತ್ರದಲ್ಲಿ ಕರೀನಾ ಕಪೂರ್, ಕೃತಿ ಸನೋನ್ ನಟಿಸಿದ್ದಾರೆ. ‘ಔರೋ ಮೇ ಕಹಾ ದಮ್ ಥಾ’ ಚಿತ್ರದಲ್ಲಿ ತಬು ನಟಿಸಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿಲ್ಲ. ಈಗ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ತಬು ಈವರೆಗೆ ಮದುವೆ ಆಗಿಲ್ಲ ಅನ್ನೋದು ವಿಶೇಷ. ಅವರು ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿದ್ದಾರೆ.

ಮತ್ತಷ್ಟು ಸಿನಿಮಾ ಸಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ