ಧೂಮಪಾನ ತ್ಯಜಿಸಿದ ಶಾರುಖ್ ಖಾನ್; ಈ ಮೊದಲು ಬೇಕಿತ್ತು ದಿನಕ್ಕೆ 100 ಸಿಗರೇಟ್​

ನಟ ಶಾರುಖ್ ಖಾನ್ ಅವರು ನವೆಂಬರ್​ 2ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರು ಕೆಲವು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ವೇಳೆ ಅವರು ಒಂದು ಗುಡ್​ ನ್ಯೂಸ್ ನೀಡಿದ್ದಾರೆ. ಶಾರುಖ್​ ಖಾನ್​ ಅವರು ಸ್ಮೋಕಿಂಗ್ ತ್ಯಜಿಸಿದ್ದಾರೆ. ಒಂದು ಸಿಗರೇಟ್​ ಕೂಡ ಅವರ ಮುಟ್ಟುತ್ತಿಲ್ಲ. ಇದು ಅವರ ಅಮಾನಿಗಳಿಗೂ ಮಾದರಿ ಆಗಲಿದೆ.

ಧೂಮಪಾನ ತ್ಯಜಿಸಿದ ಶಾರುಖ್ ಖಾನ್; ಈ ಮೊದಲು ಬೇಕಿತ್ತು ದಿನಕ್ಕೆ 100 ಸಿಗರೇಟ್​
ಶಾರುಖ್ ಖಾನ್
Follow us
ಮದನ್​ ಕುಮಾರ್​
|

Updated on: Nov 04, 2024 | 11:30 AM

ಧೂಮಪಾನದ ಚಟಕ್ಕೆ ಶಾರುಖ್​ ಖಾನ್​ ಅವರು ದಾಸರಾಗಿದ್ದರು. ಒಂದು ಕಾಲದಲ್ಲಿ ಅವರಿಗೆ ಪ್ರತಿ ದಿನ 100 ಸಿಗರೇಟ್ ಬೇಕಿತ್ತು! ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಿದ ಕಾರಣದಿಂದ ಅವರು ವಿವಾದ ಕೂಡ ಮಾಡಿಕೊಂಡಿದ್ದರು. ಆದರೆ ಈಗ ಅವರು ಬದಲಾಗಿದ್ದಾರೆ. ಸಿಗರೇಟ್ ಸೇದುವುದನ್ನು ಅವರು ಸಂಪೂರ್ಣ ತ್ಯಜಿಸಿದ್ದಾರೆ. ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಅವರು ಈ ವಿಷಯವನ್ನು ಎಲ್ಲರಿಗೂ ತಿಳಿಸಿದರು. ‘ಕಡೆಗೂ ನಾನು ಧೂಮಪಾನ ಬಿಟ್ಟಿದ್ದೇನೆ’ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅವರಲ್ಲಿ ಆಗಿರುವ ಈ ಬದಲಾವಣೆಯಿಂದ ಅಭಿಮಾನಿಗಳಿಗೆ ಖುಷಿ ಇದೆ.

ಶಾರುಖ್ ಖಾನ್ ಅವರಿಗೆ ಈಗ 59 ವರ್ಷ ವಯಸ್ಸು. ಇಷ್ಟರನಂತರ ಫಿಟ್ನೆಸ್ ಕಾಪಾಡಿಕೊಳ್ಳುವುದು ಸುಲಭವಲ್ಲ. ಹಾಗಾಗಿ ಅವರು ಧೂಮಪಾನದಿಂದ ದೂರ ಉಳಿಯುವುದು ಸೂಕ್ತ ನಿರ್ಧಾರ. ತಾವು ಸಿಗರೇಟ್​ ತ್ಯಜಿಸಿರುವ ಬಗ್ಗೆ ಶಾರುಖ್ ಖಾನ್ ಮಾತನಾಡಿದ ವಿಡಿಯೋವನ್ನು ಅವರ ಅಭಿಮಾನಿಗಳ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆ ವಿಡಿಯೋ ವೈರಲ್ ಆಗಿದೆ.

ಸಿಗರೇಟ್ ಸೇದುವುದನ್ನು ಸಂಪೂರ್ಣ ನಿಲ್ಲಿಸಿದ್ದರೂ ಕೂಡ ಶಾರುಖ್ ಖಾನ್ ಅವರಿಗೆ ಉಸಿರಾಟದ ಸಮಸ್ಯೆ ಪೂರ್ತಿಯಾಗಿ ಸರಿಯಾಗಿಲ್ಲ. ‘ನಾನು ಯಾವಾಗಲೂ ಉಸಿರಾಟದ ಸಮಸ್ಯೆಯಿಂದ ದೂರ ಇರಬೇಕು ಅಂತ ಬಯಸುತ್ತೇನೆ. ಆದರೆ ಅದು ಇನ್ನೂ ಸಾಧ್ಯವಾಗಿಲ್ಲ. ಶೀಘ್ರದಲ್ಲೇ ಸಾಧ್ಯವಾಗಲಿದೆ. ಸಿಗರೇಟ್​ ತ್ಯಜಿಸಿದ್ದಕ್ಕೆ ನನಗೆ ಖುಷಿ ಇದೆ’ ಎಂದು ಶಾರುಖ್​ ಖಾನ್​ ಅವರು ಹೇಳಿದ್ದಾರೆ.

ಇದನ್ನೂ ಓದಿ: ಏಳು ಸಾವಿರ ಕೋಟಿ ರೂಪಾಯಿ ಒಡೆಯ ಶಾರುಖ್ ಖಾನ್; ಆಸ್ತಿ ಮೂಲಗಳು ಯಾವವು?

‘ಜವಾನ್’, ‘ಪಠಾಣ್’ ಮತ್ತು ‘ಡಂಕಿ’ ಸಿನಿಮಾಗಳ ಮೂಲಕ ಶಾರುಖ್ ಖಾನ್ ಅವರು 2023ರಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡಿದರು. ಆದರೆ 2024ರಲ್ಲಿ ಅವರ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಸ್ಕ್ರಿಪ್ಟ್​ ಆಯ್ಕೆಯಲ್ಲಿ ಅವರು ಬಹಳ ತಾಳ್ಮೆ ಮತ್ತು ಕಾಳಜಿ ವಹಿಸುತ್ತಿದ್ದಾರೆ. ಈಗ ಅವರ ಮಕ್ಕಳ ಕೂಡ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ನಟಿಯಾಗಿ ಪುತ್ರಿ ಸುಹಾನಾ ಖಾನ್​ ಸಕ್ರಿಯರಾಗಿದ್ದರೆ, ಪುತ್ರ ಆರ್ಯನ್​ ಖಾನ್​ ನಿರ್ದೇಶನದ ಕಡೆಗೆ ಗಮನ ಹರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ