ತಮನ್ನಾ ಚಿತ್ರರಂಗಕ್ಕೆ ಬಂದು ಕಳೆಯಿತು 19 ವರ್ಷ; ‘ಇದಿನ್ನೂ ಆರಂಭ’ ಎಂದ ನಟಿ
ತಮನ್ನಾ ಭಾಟಿಯಾ ಅವರು ನಟಿಸಿದ ಮೊದಲ ಸಿನಿಮಾ ‘ಚಾಂದ್ ಸ ರೋಷನ್ ಚೆಹ್ರಾ’ 2005ರ ಮಾರ್ಚ್ 4ರಂದು ಬಿಡುಗಡೆ ಆಗಿತ್ತು. ಚಿತ್ರರಂಗದಲ್ಲಿ 19 ವರ್ಷಗಳ ಕಾಲ ಬೇಡಿಕೆ ಉಳಿಸಿಕೊಳ್ಳುವುದು ಎಂದರೆ ತಮಾಷೆಯ ಮಾತಲ್ಲ. ಈಗಲೂ ತಮನ್ನಾ ಭಾಟಿಯಾ ಅವರ ಕೈಯಲ್ಲಿ ಹಲವು ಆಫರ್ಗಳಿವೆ. ವೈಯಕ್ತಿಕ ಕಾರಣಗಳಿಂದಲೂ ಅವರು ಆಗಾಗ ಸುದ್ದಿ ಆಗುತ್ತಾರೆ.

ಖ್ಯಾತ ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು 19 ವರ್ಷಗಳು ಕಳೆದಿವೆ. ಈ ಸಾಧನೆಗಾಗಿ ಅವರಿಗೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ನಟಿ ಕಾಜಲ್ ಅಗರ್ವಾಲ್ (Kajal Aggarwal) ಅವರು ಕೂಡ ತಮನ್ನಾಗೆ ಕಂಗ್ರ್ಯಾಜುಲೇಷನ್ ತಿಳಿಸಿದ್ದಾರೆ. ಫ್ಯಾನ್ ಪೇಜ್ಗಳಲ್ಲಿ ಕೂಡ ತಮನ್ನಾಗೆ ವಿಶ್ ಮಾಡಲಾಗಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಅವರು, ‘ಇದಿನ್ನೂ ಆರಂಭ ನನ್ನ ಕ್ಯೂಟೀಸ್’ ಎಂದು ಬರೆದುಕೊಂಡಿದ್ದಾರೆ. ಬಹುಭಾಷೆಯ ಚಿತ್ರರಂಗದಲ್ಲಿ ತಮನ್ನಾ ಭಾಟಿಯಾ ಅವರಿಗೆ ಬೇಡಿಕೆ ಇದೆ.
ತಮನ್ನಾ ಭಾಟಿಯಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2005ರಲ್ಲಿ. ಅವರು ನಟಿಸಿದ ಮೊದಲ ಸಿನಿಮಾ ‘ಚಾಂದ್ ಸ ರೋಷನ್ ಚೆಹ್ರಾ’. ಬಳಿಕ ಅವರಿಗೆ ತೆಲುಗು ಮತ್ತು ತಮಿಳಿನಿಂದ ಆಫರ್ಗಳು ಬರಲು ಆರಂಭಿಸಿದವು. ಟಾಲಿವುಡ್ನಲ್ಲಿ ಅವರು ಬಹುಬೇಡಿಕೆಯ ನಟಿಯಾಗಿ ಬೆಳೆದರು. ‘ಬಾಹುಬಲಿ’ ರೀತಿಯ ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಅವರಿಗೆ ಸಿಕ್ಕಿತು.
ಇದನ್ನೂ ಓದಿ: ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ
2023ರಲ್ಲಿ ತಮನ್ನಾ ಭಾಟಿಯಾ ಅವರು ‘ಜೈಲರ್’ ಸಿನಿಮಾದಲ್ಲಿ ಅಭಿನಯಿಸಿದರು. ಆ ಸಿನಿಮಾದಲ್ಲಿ ಅವರು ಡ್ಯಾನ್ಸ್ ಮಾಡಿದ ‘ಕಾವಾಲಾ..’ ಸಾಂಗ್ ಸಖತ್ ಟ್ರೆಂಡ್ ಸೃಷ್ಟಿ ಮಾಡಿತು. ರಜನಿಕಾಂತ್ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿತು. ತಮನ್ನಾ ಭಾಟಿಯಾ ಅವರ ಕೈಯಲ್ಲಿ ಕೈ ತುಂಬ ಅವಕಾಶಗಳು ಇವೆ. ಒಟಿಟಿಯಲ್ಲೂ ಅವರು ಮಿಂಚುತ್ತಿದ್ದಾರೆ.
ಇದನ್ನೂ ಓದಿ: ತಮನ್ನಾ ಭಾಟಿಯಾ ಜೊತೆ ನಟ ವಸಿಷ್ಠ ಸಿಂಹ ನಟನೆ, ಸಿನಿಮಾ ಯಾವುದು?
ತಮನ್ನಾ ಭಾಟಿಯಾ ಅವರಿಗೆ ಈಗ 34 ವರ್ಷ ವಯಸ್ಸು. ವೃತ್ತಿಜೀವನದಲ್ಲಿ ಬ್ಯುಸಿ ಆಗಿರುವ ಅವರು ಮದುವೆ ಬಗ್ಗೆಯೂ ಆಲೋಚನೆ ಮಾಡಿದಂತಿದೆ. ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ತಮನ್ನಾ ಡೇಟಿಂಗ್ ಮಾಡುತ್ತಿದ್ದಾರೆ. ಆ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಆದಷ್ಟು ಬೇಗ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಅನೇಕ ಸಂದರ್ಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ‘ಲಸ್ಟ್ ಸ್ಟೋರೀಸ್ 2’ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಅವರು ಬೋಲ್ಡ್ ದೃಶ್ಯಗಳಲ್ಲಿ ನಟಿಸಿ ಸುದ್ದಿ ಆಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




