ಫೋಟೋದಲ್ಲಿರೋ ಬಾಲಕಿ ಈಗ ಸ್ಟಾರ್ ನಟಿ; ಇವರ ಪರಿಚಯ ನಿಮಗಿದೆಯೇ?
ಸೆಲೆಬ್ರಿಟಿಗಳ ಥ್ರೋಬ್ಯಾಕ್ ಫೋಟೋಗಳು ಮತ್ತು ವೀಡಿಯೊಗಳನ್ನು ಫ್ಯಾನ್ಸ್ ಹೆಚ್ಚು ಇಷ್ಟಪಡುತ್ತಾರೆ. ಕೆಲವನ್ನು ಸೆಲೆಬ್ರಿಟಿಗಳೇ ಶೇರ್ ಮಾಡಿಕೊಂಡರೆ ಇನ್ನೂ ಕೆಲವು ಫೋಟೋಗಳನ್ನು ಫ್ಯಾನ್ಸ್ ಹುಡುಕಿ ತೆಗೆದು ಶೇರ್ ಮಾಡುತ್ತಾರೆ. ಈಗ ನಾಯಕಿಯೊಬ್ಬರು ಬಾಲ್ಯದ ಫೋಟೋ ವೈರಲ್ ಆಗಿದೆ.
ಸಿನಿಮಾ ತಾರೆಯರ ಬಾಲ್ಯದ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಸೆಲೆಬ್ರಿಟಿಗಳ ಥ್ರೋಬ್ಯಾಕ್ ಫೋಟೋಗಳು ಮತ್ತು ವೀಡಿಯೊಗಳನ್ನು ಫ್ಯಾನ್ಸ್ ಹೆಚ್ಚು ಇಷ್ಟಪಡುತ್ತಾರೆ. ಕೆಲವನ್ನು ಸೆಲೆಬ್ರಿಟಿಗಳೇ ಶೇರ್ ಮಾಡಿಕೊಂಡರೆ ಇನ್ನೂ ಕೆಲವು ಫೋಟೋಗಳನ್ನು ಫ್ಯಾನ್ಸ್ ಹುಡುಕಿ ತೆಗೆದು ಶೇರ್ ಮಾಡುತ್ತಾರೆ. ಈಗ ನಾಯಕಿಯೊಬ್ಬರು ಬಾಲ್ಯದ ಫೋಟೋ ವೈರಲ್ ಆಗಿದೆ. ಮೇಲಿನ ಫೋಟೋದಲ್ಲಿರುವ ಹುಡುಗಿ 90ರ ದಶಕದಲ್ಲಿ ಅಭಿಮಾನಿಗಳ ಮನಗೆದ್ದ ನಾಯಕಿ. ಇವರು ನಟಿಸಿದ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈಗ ಅವರ ವಯಸ್ಸು 54. ಆದಾಗ್ಯೂ ಅವರು ಗ್ಲಾಮರ್ ಉಳಿಸಿಕೊಂಡಿದ್ದಾರೆ. ಅವರೇ ಹಿರಿಯ ನಾಯಕಿ ಮಧುಬಾಲಾ (Madhubala).
ಮಧುಬಾಲಾ ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸುಮಾರು 52 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಜನಿಸಿದ್ದು ತಮಿಳುನಾಡಿನಲ್ಲಿ. ಆದರೆ, ಎಲ್ಲಾ ಭಾಷೆಗಳಲ್ಲಿ ನಟಿಸಿದರು. ಅವರ ಮೂಲ ಹೆಸರು ಮಧು. ಆದರೆ ನಿರ್ದೇಶಕ ಬಾಲಚಂದರ್ ಅವರ ಸಲಹೆಯಂತೆ ಮಧುಬಾಲಾ ಎಂದು ಬದಲಾಯಿಸಿಕೊಂಡರು. ಅವರು 1991ರಲ್ಲಿ ‘ಅಳಗನ್’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು.
ನಿರ್ದೇಶಕ ಮಣಿರತ್ನಂ ಅವರ ‘ರೋಜಾ’ ಚಿತ್ರ ಅವರಿಗೆ ಸ್ಟಾರ್‌ಡಮ್ ತಂದುಕೊಟ್ಟಿತು. 1992ರಲ್ಲಿ ತೆಲುಗು, ತಮಿಳು, ಮರಾಠಿ ಮತ್ತು ಹಿಂದಿಯಲ್ಲಿ ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಂಚಲನವನ್ನು ಸೃಷ್ಟಿಸಿತು. ಈ ಚಿತ್ರದಲ್ಲಿ ಮಧುಬಾಲಾ ಅವರ ಅಭಿನಯ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ಆ ನಂತರ ತೆಲುಗು ಚಿತ್ರಗಳಾದ ‘ಅಲ್ಲುರಿ ಪ್ರಿಯುಡು’, ‘ಜಂಟಲ್ ಮೆನ್’, ‘ಮಿಸ್ಟರ್ ರೋಮಿಯೋ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದಲ್ಲೂ ಮಧುಬಾಲಾ ನಟಿಸಿದ್ದಾರೆ. ‘ಅಣ್ಣಯ್ಯ’ ಚಿತ್ರದಲ್ಲಿ ಸರಸ್ವತಿ ಹೆಸರಿನ ಪಾತ್ರ ಮಾಡಿದ್ದರು. ‘ರನ್ನ’ ಚಿತ್ರದಲ್ಲಿ ಸುದೀಪ್ ಅತ್ತೆಯ ಪಾತ್ರ ಮಾಡಿದ್ದರು. ಸದ್ಯ ಅವರು ಪೋಷಕ ಪಾತ್ರಗಳ ಮೂಲಕ ಮಿಂಚುತ್ತಿದ್ದಾರೆ.
ಇದನ್ನೂ ಓದಿ: ಖ್ಯಾತ ನಟಿ ಮಧುಬಾಲಾ ಬಯೋಪಿಕ್ ಘೋಷಣೆ; ಯಾರು ಮಾಡ್ತಾರೆ ನಿರ್ದೇಶನ?
ಈಗ ಮಧುಬಾಲಾ ಅವರ ಬಾಲ್ಯದ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿದ ಯಾರೊಬ್ಬರಿಗೂ ಅವರ ಗುರುತು ಹಿಡಿಯೋಕೆ ಸಾಧ್ಯವೇ ಇಲ್ಲ. ಅವರು ಅಷ್ಟು ಬದಲಾಗಿದ್ದಾರೆ. ಬಹಳ ಸಮಯದಿಂದ ಸಿನಿಮಾದಿಂದ ದೂರ ಉಳಿದಿದ್ದ ಮಧುಬಾಲಾ ಈಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅವರು ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ಪೋಷಕ ಪಾತ್ರ ಮಾಡುತ್ತಿದ್ದಾರೆ. ಸಮಂತಾ ಅಭಿನಯದ ‘ಶಾಕುಂತಲಂ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರವಿತೇಜ ಅಭಿನಯದ ‘ಈಗಲ್’ ಚಿತ್ರದಲ್ಲಿಯೂ ಅವರು ಪ್ರಮುಖ ಪಾತ್ರ ಮಾಡಿದ್ದರು. ಈಗ ಅವರ ಕೈಯಲ್ಲಿ ಇನ್ನಷ್ಟು ಸಿನಿಮಾಗಳಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ