ವಿಜಯ್ ಸಿನಿಮಾಕ್ಕೆ ಚೆನ್ನೈಗಿಂತಲೂ ಬೆಂಗಳೂರಿನಲ್ಲಿ ಹೆಚ್ಚು ಶೋ, ಟಿಕೆಟ್ ದರವೂ ಇಲ್ಲೇ ಹೆಚ್ಚು

GOAT Movie: ದಳಪತಿ ವಿಜಯ್ ನಟನೆ ‘ಗೋಟ್’ ಸಿನಿಮಾದ ನಾಳೆ (ಸೆಪ್ಟೆಂಬರ್ 05) ಬಿಡುಗಡೆ ಆಗಲಿದ್ದು, ಚೆನ್ನೈಗೆ ಹೋಲಿಸಿದರೆ ಬೆಂಗಳೂರಿನಲ್ಲೇ ‘ಗೋಟ್’ ಸಿನಿಮಾದ ಹೆಚ್ಚು ಶೋ ಪ್ರದರ್ಶನವಾಗುತ್ತಿದೆ. ಟಿಕೆಟ್ ಬೆಲೆ ಸಹ ಚೆನ್ನೈಗೆ ಹೋಲಿಸಿದರೆ ಬೆಂಗಳೂರಿನಲ್ಲಿ 3-4 ಪಟ್ಟು ಹೆಚ್ಚಿಗಿದೆ.

ವಿಜಯ್ ಸಿನಿಮಾಕ್ಕೆ ಚೆನ್ನೈಗಿಂತಲೂ ಬೆಂಗಳೂರಿನಲ್ಲಿ ಹೆಚ್ಚು ಶೋ, ಟಿಕೆಟ್ ದರವೂ ಇಲ್ಲೇ ಹೆಚ್ಚು
ಗೋಟ್ ಸಿನಿಮಾ
Follow us
ಮಂಜುನಾಥ ಸಿ.
|

Updated on: Sep 04, 2024 | 11:07 AM

ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ನಟನೆಯ ‘ಗೋಟ್’ (GOAT) ನಾಳೆ (ಸೆಪ್ಟೆಂಬರ್ 05) ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಆರಂಭಗೊಂಡಿದ್ದು, ಬೆಂಗಳೂರಿನಲ್ಲಿ ‘ಗೋಟ್’ ಸಿನಿಮಾಕ್ಕೆ ಚೆನ್ನೈಗಿಂತಲೂ ಹೆಚ್ಚು ಶೋ ನೀಡಿರುವ ಮಾಹಿತಿ ಬುಕ್ ಮೈ ಶೋನಿಂದ ತಿಳಿದು ಬರುತ್ತಿದೆ. ಅದು ಮಾತ್ರವೇ ಅಲ್ಲದೆ, ಚೆನ್ನೈನಲ್ಲಿರುವ ಟಿಕೆಟ್ ದರಕ್ಕಿಂತಲೂ ಮೂರು-ನಾಲ್ಕು ಪಟ್ಟು ಹೆಚ್ಚು ಮೊತ್ತಕ್ಕೆ ಬೆಂಗಳೂರಿನಲ್ಲಿ ಟಿಕೆಟ್ ದರ ಇರಿಸಲಾಗಿದೆ. ‘ಗೋಟ್’ ಸಿನಿಮಾ ಆಗಮನಕ್ಕೆ ಚೆನ್ನಾಗಿ ಪ್ರದರ್ಶನ ಕಾಣುತ್ತಿದ್ದ ಕನ್ನಡದ ‘ಭೀಮ’, ‘ಕೃಷ್ಣಂ ಪ್ರಣಯ ಸಖಿ’, ‘ಪೆಪೆ’, ‘ಲಾಫಿಂಗ್ ಬುದ್ಧ’ ಸಿನಿಮಾಗಳ ಹಲವು ಶೋಗಳನ್ನು ಕಿತ್ತುಕೊಳ್ಳಲಾಗಿದೆ.

ಬೆಂಗಳೂರಿನಲ್ಲಿ ‘ಗೋಟ್’ ಸಿನಿಮಾದ ತಮಿಳು ಆವೃತ್ತಿಗೆ ಮೊದಲ ದಿನ (ಸೆಪ್ಟೆಂಬರ್ 05) ತಮಿಳಿನ 1108 ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಜೊತೆಗೆ ಇದೇ ಸಿನಿಮಾದ 74 ಶೋಗಳು ತೆಲುಗು ಆವೃತ್ತಿಗೆ ಮೀಸಲಿಡಲಾಗಿದೆ. ಬುಕ್​ಮೈಶೋನಲ್ಲಿ ಸೆಪ್ಟೆಂಬರ್ 04ರ ಬೆಳಿಗ್ಗೆ ಲಭ್ಯವಿದ್ದ ಮಾಹಿತಿ ಪ್ರಕಾರ, ತಮಿಳುನಾಡಿನ ಚೆನ್ನೈನಲ್ಲಿ ‘ಗೋಟ್’ ಸಿನಿಮಾದ ಸುಮಾರು 800 ಶೋಗಳನ್ನು ಮಾತ್ರವೇ ಪ್ರದರ್ಶಿಸಲಾಗುತ್ತಿದೆ. ಮಾತ್ರವಲ್ಲದೆ, ಚೆನ್ನೈನಲ್ಲಿ ‘ಗೋಟ್’ ಸಿನಿಮಾದ ಯಾವುದೇ ವಿಶೇಷ ಶೋ ಅಥವಾ ಅರ್ಲಿ ಮಾರ್ನಿಂಗ್ ಶೋ ಪ್ರದರ್ಶಿಸಲಾಗುತ್ತಿಲ್ಲ. ಆದರೆ ಬೆಂಗಳೂರಿನಲ್ಲಿ ಕೆಲವು ಕಡೆ 4 ಗಂಟೆಗೆ ಹಲವು ಕಡೆ 6 ಗಂಟೆಗೆ ‘ಗೋಟ್’ ಸಿನಿಮಾದ ವಿಶೇಷ ಶೋ ಪ್ರದರ್ಶಿಸಲಾಗುತ್ತಿದೆ.

ಇದನ್ನೂ ಓದಿ:ದಳಪತಿ ವಿಜಯ್ ಪಕ್ಷದ ಧ್ವಜ ನೋಡಿ

ಟಿಕೆಟ್ ದರದಲ್ಲಂತೂ ಭಾರಿ ವ್ಯತ್ಯಾಸವಿದೆ. ಈಗ ಬೆಂಗಳೂರಿನಲ್ಲಿ ಪ್ರದರ್ಶನವಾಗುತ್ತಿರುವ ಕನ್ನಡ ಸಿನಿಮಾಗಳಿಗೆ ಹೋಲಿಸಿದರೆ ‘ಗೋಟ್’ ಸಿನಿಮಾದ ಟಿಕೆಟ್​ಗೆ ದುಪ್ಪಟ್ಟು ಬೆಲೆ ಇದೆ. ಚೆನ್ನೈನಲ್ಲಿ ನಿಗದಿಪಡಿಸಲಾಗಿರುವ ಟಿಕೆಟ್ ಬೆಲೆಗೆ ಹೋಲಿಸಿದರೆ ಅಜಗಂಜಾಂತರ ಅಂತರವಿದೆ. ಚೆನ್ನೈನಲ್ಲಿ ಕನಿಷ್ಟ ಬೆಲೆ 60 ರೂಪಾಯಿಗಳು ಮಾತ್ರವೇ ಇದೆ. ಆದರೆ ಬೆಂಗಳೂರಿನಲ್ಲಿ ಸರಾಸರಿ ಕನಿಷ್ಟ ಟಿಕೆಟ್ ಬೆಲೆ 200 ರಿಂದ 250. ಇನ್ನು ಐಮ್ಯಾಕ್ಸ್​ಗಳಲ್ಲಿ ಆರಂಭಿಕ ಬೆಲೆಯೇ 900 ರೂಪಾಯಿ ಇದೆ. ಗರಿಷ್ಠ 1600 ರೂಪಾಯಿಗೆ ಟಿಕೆಟ್​ಗಳು ಬೆಂಗಳೂರಿನ ಐಮ್ಯಾಕ್ಸ್​ಗಳಲ್ಲಿ ಮಾರಾಟವಾಗುತ್ತಿವೆ.

ನೆರೆಯ ಹೈದರಾಬಾದ್​ನಲ್ಲಿ ಪರಿಸ್ಥಿತಿ ಹೀಗಿಲ್ಲ. ಪರಭಾಷೆ ಸಿನಿಮಾಕ್ಕೆ ಹೈದರಾಬಾದ್​ನವರು ಬೆಂಗಳೂರಿನವರಂತೆ ರತ್ನಗಂಬಳಿ ಹಾಸಿಲ್ಲ. ಅಲ್ಲಿ ‘ಗೋಟ್’ ಸಿನಿಮಾದ ತೆಲುಗು ಆವೃತ್ತಿಗೆ ಮೊದಲ ದಿನ ಕೇವಲ 299 ಶೋ ನೀಡಿದ್ದಾರೆ. ತಮಿಳು ಆವೃತ್ತಿಗೆ 102 ಶೋಗಳನ್ನು ಮಾತ್ರವೇ ನೀಡಿದ್ದಾರೆ. ಅಲ್ಲಿಗೆ ‘ಗೋಟ್’ ಸಿನಿಮಾದ ಎಲ್ಲ ಆವೃತ್ತಿ ಸೇರಿ ಹೈದರಾಬಾದ್​ನಲ್ಲಿ ಪ್ರದರ್ಶನ ಕಾಣುತ್ತಿರುವುದು ಸುಮಾರು 400 ಶೋಗಳು ಮಾತ್ರ. ಬೆಂಗಳೂರಿನ ಅರ್ಧದಷ್ಟು ಶೋಗಳು ಸಹ ಅಲ್ಲಿ ಪ್ರದರ್ಶನ ಕಾಣುತ್ತಿಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ ಹೈದರಾಬಾದ್​ನಲ್ಲಿ ತೆಲುಗು ಡಬ್ಬಿಂಗ್​ಗೆ ಹೆಚ್ಚು ಶೋಗಳನ್ನು ನೀಡಲಾಗಿದೆ. ಆದರೆ ಬೆಂಗಳೂರಿನಲ್ಲಿ ‘ಗೋಟ್’ ಸಿನಿಮಾದ ಕನ್ನಡ ಆವೃತ್ತಿಯ ಒಂದು ಶೋ ಸಹ ಪ್ರದರ್ಶನ ಆಗುತ್ತಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ