Asim Riaz: ‘ಬಿಗ್​ ಬಾಸ್​ ಫಿನಾಲೆಯಲ್ಲಿ ನಡೆದಿತ್ತು ಮೋಸ’: ಸತ್ತ ವ್ಯಕ್ತಿ ಬಗ್ಗೆಯೂ ಟೀಕೆ ಮಾಡಿದ ಮಾಜಿ ಸ್ಪರ್ಧಿ

|

Updated on: Feb 27, 2023 | 7:05 PM

Bigg Boss 13 Winner | Sidharth Shukla: ಪ್ರತಿ ಬಾರಿ ಬಿಗ್​ ಬಾಸ್​ ಫಿನಾಲೆ ಮುಗಿದ ಬಳಿಕ ಒಂದು ವರ್ಗದ ಪ್ರೇಕ್ಷಕರು ಅಸಮಾಧಾನ ಹೊರಹಾಕುವುದು ಸಹಜ. ಆದರೆ ಸ್ವತಃ ಸ್ಪರ್ಧಿಗಳೇ ಈ ರೀತಿ ಆರೋಪ ಮಾಡಿದ್ದು ವಿರಳ.

Asim Riaz: ‘ಬಿಗ್​ ಬಾಸ್​ ಫಿನಾಲೆಯಲ್ಲಿ ನಡೆದಿತ್ತು ಮೋಸ’: ಸತ್ತ ವ್ಯಕ್ತಿ ಬಗ್ಗೆಯೂ ಟೀಕೆ ಮಾಡಿದ ಮಾಜಿ ಸ್ಪರ್ಧಿ
ಆಸಿಮ್ ರಿಯಾಜ್, ಸಿದ್ದಾರ್ಥ್ ಶುಕ್ಲಾ
Follow us on

ಕಿರುತೆರೆ ಪ್ರೇಕ್ಷಕರಿಗೆ ‘ಬಿಗ್​ ಬಾಸ್​’ (Bigg Boss) ರಿಯಾಲಿಟಿ ಶೋ ಬಗ್ಗೆ ಎಲ್ಲಿಲ್ಲದ ಕ್ರೇಜ್​ ಇರುತ್ತದೆ. ಹಿಂದಿ, ಕನ್ನಡ, ತಮಿಳು, ಮಲಯಾಳಂ, ತೆಲುಗು ಮುಂತಾದ ಭಾಷೆಗಳಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಹಿಂದಿಯಲ್ಲಿ 16 ಆವೃತ್ತಿಗಳು ಪೂರ್ಣಗೊಂಡಿವೆ. ಹಲವು ವರ್ಷಗಳಿಂದ ನಟ ಸಲ್ಮಾನ್​ ಖಾನ್​ ಅವರು ಈ ಶೋ ನಡೆಸಿಕೊಡುತ್ತಿದ್ದಾರೆ. ಇದೊಂದು ವಿವಾದಿತ ಕಾರ್ಯಕ್ರಮ ಎಂದರೂ ತಪ್ಪಿಲ್ಲ. ದೊಡ್ಮನೆಯ ಒಳಗೆ ಸಾಕಷ್ಟು ಕಿರಿಕ್​ಗಳು ಆಗುತ್ತವೆ. ಮನೆಯಿಂದ ಹೊರಬಂದ ಬಳಿಕವೂ ಸ್ಪರ್ಧಿಗಳು ನೀಡುವ ಕೆಲವು ಹೇಳಿಕೆಗಳಿಂದ ವಿವಾದ ಭುಗಿಲೇಳುತ್ತದೆ. ‘ಹಿಂದಿ ಬಿಗ್​ ಬಾಸ್​ 13’ರಲ್ಲಿ ಸ್ಪರ್ಧಿಸಿದ್ದ ಆಸಿಮ್​ ರಿಯಾಜ್​ (Asim Riaz)​ ಅವರ ಈಗ ಒಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದಿವಂಗತ ನಟ ಸಿದ್ದಾರ್ಥ್​ ಶುಕ್ಲಾ (Sidharth Shukla) ಬಗ್ಗೆ ಅವರು ಟೀಕೆ ಮಾಡಿದ್ದಾರೆ.

‘ಬಿಗ್​ ಬಾಸ್​ 13’ರಲ್ಲಿ ಸಿದ್ದಾರ್ಥ್​ ಶುಕ್ಲಾ ಮತ್ತು ಆಸಿಮ್ ರಿಯಾಸ್​ ಅವರು ಫಿನಾಲೆ ತಲುಪಿದ್ದರು. ಅಂತಿಮವಾಗಿ ಸಿದ್ದಾರ್ಥ್​ ಶುಕ್ಲಾ ಪಾಲಿಗೆ ಟ್ರೋಫಿ ಒಲಿದಿತ್ತು. ಮರುವರ್ಷ ಅವರು ಹೃದಯಾಘಾತದಿಂದ ನಿಧನರಾಗಿದ್ದು ನೋವಿನ ಸಂಗತಿ. ಆದರೆ ಈಗ ಆಸಿಮ್​ ರಿಯಾಜ್​​ ಅವರು ‘ಬಿಗ್​ ಬಾಸ್​ 13’ರ ಫಿನಾಲೆ ಬಗ್ಗೆ ತಕರಾರು ತೆಗೆದಿದ್ದಾರೆ. ಅದರಲ್ಲಿ ಮೋಸ ನಡೆದಿತ್ತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಬಿಗ್​ ಬಾಸ್​ 9’ ವಿನ್ನರ್​ ರೂಪೇಶ್​ ಶೆಟ್ಟಿ

ಇದನ್ನೂ ಓದಿ
Rakesh Adiga: ‘ಬಿಗ್​ ಬಾಸ್​’ ವಿನ್​ ಆಗದಿದ್ರೂ 12 ಲಕ್ಷ ರೂಪಾಯಿಗೂ ಅಧಿಕ ನಗದು ಬಹುಮಾನ ಪಡೆದ ರಾಕೇಶ್​ ಅಡಿಗ
Deepika Das: ದೀಪಿಕಾ ದಾಸ್​ ಬಿಗ್​ ಬಾಸ್​ ಫಿನಾಲೆಗೆ ಬಂದರೂ ಸಿಗಲಿಲ್ಲ ಟ್ರೋಫಿ; ಎಡವಿದ್ದು ಎಲ್ಲಿ?
Bigg Boss Winner Roopesh Shetty: ‘ನಾನು ಗೆದ್ದಿಲ್ಲ, ನೀವು ಗೆಲ್ಲಿಸಿದ್ದೀರಿ’: ಬಿಗ್​ ಬಾಸ್​ ವಿನ್ನರ್​ ರೂಪೇಶ್​ ಶೆಟ್ಟಿ ಮೊದಲ ರಿಯಾಕ್ಷನ್​
Rakesh Adiga: ‘ಬಿಗ್​ ಬಾಸ್​’ ರನ್ನರ್​ ಅಪ್​ ಆದ ರಾಕೇಶ್​ ಅಡಿಗ; ವಿನ್ನರ್​ ಪಟ್ಟ ಜಸ್ಟ್​ ಮಿಸ್​

‘ನಾನು ವಿನ್​ ಆಗುವುದು ಬಿಗ್​ ಬಾಸ್​ ಆಯೋಜಕರಿಗೆ ಇಷ್ಟ ಇರಲಿಲ್ಲ. ಅವರು ತಮ್ಮ ವೋಟಿಂಗ್​ ವ್ಯವಸ್ಥೆ ಬದಲಿಸಿದರು. ಸಿದ್ದಾರ್ಥ್​ ಶುಕ್ಲಾ ವಿನ್​ ಆಗುವ ರೀತಿಯಲ್ಲಿ ತಂತ್ರಗಾರಿಕೆ ಮಾಡಿ ವೋಟಿಂಗ್​ ಲೈನ್ಸ್​ ಓಪನ್​ ಮಾಡಿದರು’ ಎಂದು ಆಸಿಮ್​ ರಿಯಾಜ್​​ ಹೇಳಿದ್ದಾರೆ. ಆ ಮೂಲಕ ‘ಬಿಗ್​ ಬಾಸ್​’ ಕಾರ್ಯಕ್ರಮದಲ್ಲಿ ಮೋಸ ಆಗಿತ್ತು ಎಂದು ಅವರು ಆರೋಪ ಹೊರಿಸಿದ್ದಾರೆ.

ಇದನ್ನೂ ಓದಿ: ಇಷ್ಟು ಸೀಸನ್​ಗಳಲ್ಲಿ ಬಿಗ್​ ಬಾಸ್​ ಗೆದ್ದ ಸ್ಪರ್ಧಿಗಳಿವರು

ಬಿಗ್​ ಬಾಸ್​ ಫಿನಾಲೆ ಮುಗಿದ ಬಳಿಕ ಒಂದು ವರ್ಗದ ಪ್ರೇಕ್ಷಕರು ಅಸಮಾಧಾನ ಹೊರಹಾಕುವುದು ಸಹಜ. ಆದರೆ ಸ್ವತಃ ಸ್ಪರ್ಧಿಗಳೇ ಈ ರೀತಿ ಆರೋಪ ಮಾಡಿದ್ದು ವಿರಳ. ಆಸಿಮ್​ ರಿಯಾಜ್​ ಅವರ ಈ ಹೇಳಿಕೆಯಿಂದ ಸಿದ್ದಾರ್ಥ್​ ಶುಕ್ಲಾ ಅಭಿಮಾನಿಗಳಿಗೆ ಬೇಸರ ಆಗಿದೆ. ಸತ್ತು ಹೋಗಿರುವ ವ್ಯಕ್ತಿಯ ಬಗ್ಗೆ ಇಂಥ ಟೀಕೆ ಮಾಡಿದ್ದು ಸರಿಯಲ್ಲ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ನಿಂದ ಹೊರಬಂದ ನಂತರ ಸಾನ್ಯಾ ಬದಲಾಗಿದ್ದಾರಾ? ರೂಪೇಶ್ ಶೆಟ್ಟಿ ಪ್ರತಿಕ್ರಿಯಿಸಿದ್ದು ಹೀಗೆ

2020ರ ಫೆಬ್ರವರಿಯಲ್ಲಿ ಸಿದ್ದಾರ್ಥ್​ ಶುಕ್ಲಾ ಬಿಗ್​ ಬಾಸ್​ ಟ್ರೋಫಿ ಗೆದ್ದರು. ಆದರೆ 2021ರ ಸೆಪ್ಟೆಂಬರ್​ 2ರಂದು ಅವರು ಹೃದಯಾಘಾತದಿಂದ ನಿಧನರಾದರು. ಏನೇ ಟೀಕೆಗಳು ಇದ್ದರೂ ಕೂಡ ಅವರು ಬದುಕಿದ್ದಾಗಲೇ ಮಾಡಬೇಕಿತ್ತು ಎಂದು ಆಸಿಮ್​ ರಿಯಾಜ್​ ವಿರುದ್ಧ ಸಿದ್ದಾರ್ಥ್​ ಶುಕ್ಲಾ ಅಭಿಮಾನಿಗಳು ಗರಂ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:05 pm, Mon, 27 February 23