AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಗನ್​ಗೆ ಟಾರ್ಗೆಟ್ ಆದ ಆಸಿಯಾ? ಮನೆಯಿಂದ ಹೊರ ಹೋಗುವ ಭಯ

ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಜಟಾಪಟಿ ಆರಂಭವಾಗಿದೆ. ಗಗನ್ ನಡೆಸಿದ ಟಾರ್ಗೆಟ್ ಪ್ಲ್ಯಾನ್‌ಗೆ ಸಿಲುಕಿ ಆಸಿಯಾ ಕಣ್ಣೀರು ಹಾಕಿದ್ದಾರೆ. ಡೈಮಂಡ್ ಟಾಸ್ಕ್‌ನಲ್ಲಿ ಫ್ಲೈಟ್‌ಗೆ ಮರಳಿದ ಆಸಿಯಾಗೆ ನಾಮಿನೇಷನ್ ಭೀತಿ ಎದುರಾಗಿದ್ದು, ದೊಡ್ಮನೆಯಲ್ಲಿ ಈ ತಂತ್ರಗಾರಿಕೆ ಸದ್ಯ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಗಗನ್​ಗೆ ಟಾರ್ಗೆಟ್ ಆದ ಆಸಿಯಾ? ಮನೆಯಿಂದ ಹೊರ ಹೋಗುವ ಭಯ
ಗಗನ್-ಆಸಿಯಾ
ರಾಜೇಶ್ ದುಗ್ಗುಮನೆ
|

Updated on: Sep 09, 2026 | 7:01 AM

Share

ಮುಖ್ಯಾಂಶಗಳು

  • ಮೊದಲ ದಿನವೇ ಟಾರ್ಗೆಟ್ ಗೇಮ್
  • ಗಗನ್ ತಂತ್ರಕ್ಕೆ ಆಸಿಯಾ ಸೈಲೆಂಟ್
  • ಡೈಮಂಡ್ ಟಾಸ್ಕ್‌ನಲ್ಲಿ ಭಾರಿ ಟ್ವಿಸ್ಟ್

ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಕಿತ್ತಾಟ ಶುರುವಾಗಿದೆ. ಉದ್ದೇಶಪೂರ್ವಕವಾಗಿ ಒಬ್ಬರನ್ನೊಬ್ಬರು ಟಾರ್ಗೆಟ್ ಮಾಡುತ್ತಿರುವ ಕುರಿತು ಚರ್ಚೆ ನಡೆಯುತ್ತಿದೆ. ಬಿಗ್ ಬಾಸ್​​ನಲ್ಲಿಆಸಿಯಾರನ್ನು ಗಗನ್ ಉದ್ದೇಶ ಪೂರ್ವಕವಾಗಿ ಟಾರ್ಗೆಟ್ ಮಾಡಿದರೇ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದನ್ನು ಅವರು ಬಾಯಿ ಬಿಟ್ಟೇ ಹೇಳಿದ್ದುಮತ್ತಷ್ಟು ಚರ್ಚೆಗೆ ಕಾರಣ ಆಗಿದೆ.

ಆಸಿಯಾ ಅವರು ಬಿಗ್ ಬಾಸ್ ಮನೆಯಲ್ಲಿ ಉತ್ತಮವಾಗಿ ಆಟ ಆಡುತ್ತಿದ್ದಾರೆ. ತಾವಾಯಿತು, ತಮ್ಮ ಪಾಡಾಯಿತು ಎಂದು ಇರೋ ಅವರು ಈಗ ಒಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಮಿನೇಟ್ ಆಗಿ ಮನೆಯಿಂದ ಹೊರ ಹೋಗುವ ಭಯ ಅವರನ್ನು ಅತಿಯಾಗಿ ಕಾಡುತ್ತಿದೆ. ಈ ಎಲ್ಲ ಬೆಳವಣಿಗೆಯಿಂದ ಅವರು ಕಣ್ಣೀರು ಹಾಕಿದ್ದಾರೆ.

ಸದ್ಯ ಫ್ಲೈಟ್​ನಲ್ಲಿ ಒಂದಷ್ಟು ಜನ ಹಾಗೂ ದೊಡ್ಮನೆ ಒಳಗೆ ಒಂದಷ್ಟು ಜನ ಇದ್ದಾರೆ. ಮನೆಯಲ್ಲಿ ಇರುವವರಿಗೆ ಡೈಮಂಡ್ ಟಾಸ್ಕ್ ನೀಡಲಾಗಿತ್ತು. ಬಿಗ್ ಬಾಸ್ ಮನೆ ಒಳಗಿರುವ ಸದಸ್ಯರಿಗೆ ಒಂದು ಚಿಕ್ಕ ಬಾಕ್ಸ್ ನೀಡುತ್ತಾರೆ. ಓರ್ವ ವ್ಯಕ್ತಿಯ ಬಾಕ್ಸ್​​ನಲ್ಲಿ ಮಾತ್ರ ಡೈಮಂಡ್ ಇರುತ್ತದೆ. ಅವರನ್ನು ಸರಿಯಾಗಿ ಗುರುತಿಸಬೇಕು. ಇದರಲ್ಲಿ ವಿಫಲವಾದಲ್ಲಿ ಡೈಮಂಡ್ ಇರುವ ಸ್ಪರ್ಧಿ ಈ ವಾರದ ನಾಮಿನೇಷನ್​ನಿಂದ ಬಚಾವ್ ಆಗಿ ವಿಐಪಿ ಸ್ಪರ್ಧಿ ಆಗುತ್ತಾನೆ.

ಈ ಸ್ಪರ್ಧೆ ಆರಂಭ ಆಗುವುದಕ್ಕೂ ಮೊದಲೇ ಗಗನ್ ಅವರು ಟಾರ್ಗೆಟ್ ಮಾಡುವ ಪ್ಲ್ಯಾನ್​ನ ವ್ಯಕ್ತಪಡಿಸಿದರು. ಇದು ಆಸಿಯಾ ಕಿವಿಗೂ ಬಿತ್ತು. ಇದನ್ನು ಅವರು ಖಂಡಿಸಿದರು. ಕೊನೆಗೆ ಎಲ್ಲರೂ ಆಸಿಯಾ ಬಳಿಯೇ ಡೈಮಂಡ್ ಇದೆ ಹೇಳಿ ಅವರನ್ನು ಟಾರ್ಗೆಟ್ ಮಾಡಿದರು. ಇದು ಗಗನ್ ಪ್ಲ್ಯಾನ್ ಎಂಬುದು ಆಸಿಯಾ ಆರೋಪ.

ಇದನ್ನೂ ಓದಿ: ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಹಲವು ಸ್ಪರ್ಧಿಗಳು ನಾಮಿನೇಟ್

ಕೊನೆಗೆ ಡೈಮಂಡ್ ಇದ್ದಿದ್ದು ಗಗನ್ ಬಳಿ. ಆದರೆ, ಬಹುತೇಕರು ಹೆಸರು ಹೇಳಿದ್ದು ಆಸಿಯಾ ಅವರದ್ದು. ಹೀಗಾಗಿ, ಆಸಿಯಾ ಅವರು ದೊಡ್ಮನೆಯಿಂದ ಮರಳಿ ಫ್ಲೈಟ್​ಗೆ ಹೋಗಬೇಕಾಯಿತು. ಅವರಿಗೆ ನಾಮಿನೇಟ್ ಆಗಿ ಮನೆಯಿಂದ ಹೊರ ಹೋಗುವ ಭಯ ಕಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More