ಸಂಗೀತಾ ಶೃಂಗೇರಿ ಜನಪ್ರಿಯತೆ ಎಷ್ಟು ಸ್ಪೀಡ್​ನಲ್ಲಿ ಹೆಚ್ಚುತ್ತಿದೆ ಗೊತ್ತಾ? ಇಲ್ಲಿದೆ ಸಾಕ್ಷಿ

| Updated By: ರಾಜೇಶ್ ದುಗ್ಗುಮನೆ

Updated on: Jan 16, 2024 | 10:00 AM

ಕಾರ್ತಿಕ್ ಜೊತೆ ಆದ ಜಗಳದ ಸಂದರ್ಭದಲ್ಲಿ ಸಂಗೀತಾ ಅವರು 15 ಸಾವಿರಕ್ಕೂ ಹೆಚ್ಚು ಫಾಲೋವರ್ಸ್​ನ ಕಳೆದುಕೊಂಡರು. ಆ ಸಂದರ್ಭದಲ್ಲಿ ಅವರ ಇನ್​ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 4.30 ಲಕ್ಷ ಇತ್ತು. ಈಗ ಈ ಸಂಖ್ಯೆಯಲ್ಲಿ ಏರಿಕೆ ಆಗಿದೆ.

ಸಂಗೀತಾ ಶೃಂಗೇರಿ ಜನಪ್ರಿಯತೆ ಎಷ್ಟು ಸ್ಪೀಡ್​ನಲ್ಲಿ ಹೆಚ್ಚುತ್ತಿದೆ ಗೊತ್ತಾ? ಇಲ್ಲಿದೆ ಸಾಕ್ಷಿ
ಸಂಗೀತಾ
Follow us on

ಸಂಗೀತಾ ಶೃಂಗೇರಿ ಅವರು ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಬಂದರು. ನಂತರ ಸಿನಿಮಾಗಳಲ್ಲಿ ನಟಿಸಿದರು. ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾದಲ್ಲಿ (777 Charlie Movie) ನಟಿಸುವ ಮೂಲಕ ಮತ್ತಷ್ಟು ಫೇಮಸ್ ಆದರು. ಈಗ ಅವರು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ 100 ದಿನ ಕಳೆದಿದ್ದಾರೆ. ಈ ಜರ್ನಿಯಲ್ಲಿ ಅವರು ಸಾಕಷ್ಟು ಏರಿಳಿತ ಕಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಬ್ಯಾಕ್ ಟು ಬ್ಯಾಕ್ ಕ್ಯಾಪ್ಟನ್ ಆಗಿ ಗಮನ ಸೆಳೆಯುತ್ತಿದ್ದಾರೆ. ಸಂಗೀತಾ ಅವರನ್ನು ಎಲ್ಲರೂ ಗೆಲ್ಲೋ ಕುದುರೆ ಎಂದು ಕರೆಯುತ್ತಿದ್ದಾರೆ. ಅವರ ಜನಪ್ರಿಯತೆ ಸಾಕಷ್ಟು ಹೆಚ್ಚುತ್ತಿದೆ. ಅದಕ್ಕೆ ಕಾರಣ ಸಾಕಷ್ಟಿದೆ.

ಅಸಮರ್ಥರು ಸಾಲಿನಲ್ಲಿ ಸಂಗೀತಾ ಶೃಂಗೇರಿ ಅವರು ದೊಡ್ಮನೆಗೆ ಬಂದರು. ಮೊದಲ ವಾರವೇ ಅವರು ಎಲ್ಲರ ಗಮನ ಸೆಳೆದರು. ಕಾರ್ತಿಕ್ ಹಾಗೂ ತನಿಷಾ ಜೊತೆ ಅವರಿಗೆ ಒಳ್ಳೆಯ ಸ್ನೇಹ ಬೆಳೆದಿತ್ತು. ಈ ಸ್ನೇಹ ಹೆಚ್ಚು ದಿನ ಮುಂದುವರಿಯಲಿಲ್ಲ. ಕಾರ್ತಿಕ್ ಹಾಗೂ ತನಿಷಾ ಅವರ ಜೊತೆ ಆದ ಕಿರಿಕ್​ನಿಂದ ಆ ಗ್ರೂಪ್​ನಿಂದ ಸಂಗೀತಾ ಹೊರ ನಡೆದರು. ಇದು ಕಾರ್ತಿಕ್ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಹೀಗಾಗಿ, ಇನ್​ಸ್ಟಾಗ್ರಾಮ್​ನಲ್ಲಿ ಸಂಗೀತಾ ಅವರನ್ನು ಅನೇಕರು ಅನ್​ಫಾಲೋ ಮಾಡಿದರು. ಆ ಸಂದರ್ಭದಲ್ಲಿ ಸಂಗೀತಾ ಅವರು 15 ಸಾವಿರಕ್ಕೂ ಹೆಚ್ಚು ಹಿಂಬಾಲಕರನ್ನು ಕಳೆದುಕೊಂಡರು. ಆ ಸಂದರ್ಭದಲ್ಲಿ ಅವರ ಇನ್​ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 4.30 ಲಕ್ಷ ಆಸುಪಾಸಿನಲ್ಲಿ ಇತ್ತು.

ಈಗ ಸಂಗೀತಾ ಶೃಂಗೇರಿ ಹಿಂಬಾಲಕರ ಸಂಖ್ಯೆ 5.09 ಲಕ್ಷಕ್ಕೆ ಏರಿಕೆ ಆಗಿದೆ. ಕೆಲವೇ ವಾರಗಳಲ್ಲಿ ಅವರು 80 ಸಾವಿರಕ್ಕೂ ಅಧಿಕ ಹಿಂಬಾಲಕರ ಹೊಂದಿದ್ದಾರೆ. ದಿನ ಕಳೆದಂತೆ ಸಂಗೀತಾ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ. ಇದು ಅವರ ಫ್ಯಾನ್ಸ್​ಗೆ ಖುಷಿ ನೀಡಿದೆ. ಸಂಗೀತಾಗೆ ಈಗಾಗಲೇ ಫಿನಾಲೆ ಟಿಕೆಟ್ ಸಿಕ್ಕಿದೆ. ಟಾಪ್ ಐದರಲ್ಲಿ ಸಂಗೀತಾಗೆ ಒಂದು ಸ್ಥಾನ ಖಚಿತವಾಗಿದೆ. ಇಡೀ ಮನೆ ಅವರ ವಿರುದ್ಧ ನಿಂತಾಗಲೂ ಸಂಗೀತಾ ಏಕಾಂಗಿ ಆಗಿ ಹೋರಾಟ ಮಾಡಿದ್ದರು. ಈ ಕಾರಣಕ್ಕೆ ಅವರು ಸಾಕಷ್ಟು ಜನರಿಗೆ ಇಷ್ಟ ಆಗುತ್ತಿದ್ದಾರೆ.

ಇದನ್ನೂ ಓದಿ: ವಿನಯ್-ಕಾರ್ತಿಕ್ ಇಬ್ಬರನ್ನೂ ಡಬ್ಬಕ್ಕೆ ಹಾಕಿದ ಸಂಗೀತಾ ಶೃಂಗೇರಿ

ಕಾರ್ತಿಕ್​ಗೆ ಸಂಗೀತಾನೇ ಸಮಸ್ಯೆ

ಕಳೆದ ಕೆಲ ವಾರಗಳಿಂದ ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಕಿತ್ತಾಟ ಜೋರಾಗಿದೆ. ಕಾರ್ತಿಕ್ ಅವರನ್ನು ಕಂಡರೆ ಸಂಗೀತಾ ಸಿಡುಕುತ್ತಾರೆ. ಕಾರ್ತಿಕ್ ಕೂಡ ಇದೇ ಮನಸ್ಥಿತಿಯಲ್ಲಿದ್ದಾರೆ. ಅಡುಗೆ ಮನೆಯಲ್ಲಿ ನಮ್ರತಾ ಗೌಡ, ವಿನಯ್, ಕಾರ್ತಿಕ್ ಹಾಗೂ ಸಂಗೀತಾ ಕುಳಿತಿದ್ದರು. ಕಾರ್ತಿಕ್ ಅವರು ಚಪಾತಿ ಸುಡುತ್ತಿದ್ದರು. ಏನನ್ನೋ ನೆನಪಿಸಿಕೊಂಡು ಸಂಗೀತಾ ನಕ್ಕರು. ಇದು ಕೂಡ ಕಾರ್ತಿಕ್​ಗೆ ಸಮಸ್ಯೆ ಆಗಿ ಪರಿಣಮಿಸಿದೆ! ಅವರು ಈ ವಿಚಾರದಲ್ಲಿ ಸಂಗೀತಾ ಜೊತೆ ಜಗಳ ಆಡಿದ್ದಾರೆ. ಇದನ್ನು ನೋಡಿ ವಿನಯ್ ಹಾಗೂ ನಮ್ರತಾ ಸಿಟ್ಟಾಗಿದ್ದಾರೆ. ಈ ರೀತಿ ಮಾಡಿದ್ದು ಸರಿ ಅಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ