ಬಿಗ್ ಬಾಸ್ನಿಂದ ಅರ್ಧಕ್ಕೆ ಹೊರ ನಡೆದ ಈ ಸ್ಪರ್ಧಿ; ಕಾರಣ ಏನು?
ಬಿಗ್ ಬಾಸ್ನಲ್ಲಿ ಟಾಸ್ಕ್ ಆಡುವಾಗ ಮಾನಸಾ ಕಾಲಿಗೆ ಪೆಟ್ಟಾಗಿದೆ ಎನ್ನಲಾಗಿದೆ. ಈ ಕಾರಣದಿಂದ ಅವರು ಸಾಕಷ್ಟು ನೋವು ಅನುಭವಿಸಿದ್ದಾರೆ. ಅವರನ್ನು ಕೆಲವರು ಟಾಸ್ಕ್ ಒಳಗೆ ತೆಗೆದುಕೊಳ್ಳದೆ ಇರುವುದಕ್ಕೂ ಇದೇ ಕಾರಣ. ಅವರು ಕಾಲನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬೇಕಿದೆ. ಹೀಗಾಗಿ, ಅವರನ್ನು ಆಸ್ಪ್ರೆಗೆ ಸೇರಿಸಲಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಎರಡನೇ ವಾರವನ್ನು ಪೂರ್ಣಗೊಳಿಸುತ್ತಿದೆ. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಎಲ್ಲರಿಗೂ ಗೆಲ್ಲುವ ಹುಮ್ಮಸ್ಸು ಬಂದಿದೆ. ಈ ಕಾರಣಕ್ಕೆ ಟಾಸ್ಕ್ನಲ್ಲಿ ಜೋಶ್ ಹಾಕಿ ಎಲ್ಲರೂ ಆಟ ಆಡುತ್ತಿದ್ದಾರೆ. ಇದುವೇ ಅವರಿಗೆ ಮುಳುವಾಗಿದೆ. ಹೌದು, ತುಕಾಲಿ ಸಂತೋಷ್ ಪತ್ನಿ ಮಾನಸಾ ಅವರ ಕಾಲಿಗೆ ಪೆಟ್ಟಾಗಿದೆ. ಈ ಕಾರಣಕ್ಕೆ ಅವರನ್ನು ಮನೆಯಿಂದ ಹೊರಕ್ಕೆ ಕರೆದುಕೊಂಡು ಹೋಗಲಾಗಿದೆ.
‘ಬಿಗ್ ಬಾಸ್’ನಲ್ಲಿ ಮಾನಸಾ ಬಂದಾಗಿನಿಂದಲೂ ಹೆಚ್ಚಿನ ಕೊಡುಗೆ ಏನೂ ನೀಡಿಲ್ಲ. ಅಲ್ಲಿಲ್ಲಿ ಸುತ್ತಾಡಿಕೊಂಡು ಇದ್ದರು. ಅವರು ಹಾಗೂ ಇತರ ಸ್ಪರ್ಧಿಗಳು ಮಾಡಿದ ತಪ್ಪಿಗೆ ಎಲ್ಲರೂ ನಾಮಿನೇಟ್ ಆಗಬೇಕಾಯಿತು. ಹೀಗಿರುವಾಗಲೇ ಮಾನಸಾ ‘ಬಿಗ್ ಬಾಸ್’ನಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಅವರಿಗೆ ಓಡಾಡೋಕೆ ಕಷ್ಟ ಎಂಬಂತಾಗಿದೆ.
ಬಿಗ್ ಬಾಸ್ನಲ್ಲಿ ಟಾಸ್ಕ್ ಆಡುವಾಗ ಮಾನಸಾ ಕಾಲಿಗೆ ಪೆಟ್ಟಾಗಿದೆ ಎನ್ನಲಾಗಿದೆ. ಈ ಕಾರಣದಿಂದ ಅವರು ಸಾಕಷ್ಟು ನೋವು ಅನುಭವಿಸಿದ್ದಾರೆ. ಅವರನ್ನು ಕೆಲವರು ಟಾಸ್ಕ್ ಒಳಗೆ ತೆಗೆದುಕೊಳ್ಳದೆ ಇರುವುದಕ್ಕೂ ಇದೇ ಕಾರಣ. ಅವರು ಕಾಲನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬೇಕಿದೆ. ಹೀಗಾಗಿ, ಅವರನ್ನು ಆಸ್ಪ್ರೆಗೆ ಸೇರಿಸಲಾಗಿದೆ.
ಮಾನಸಾ ಬೇಗ ಚೇತರಿಕೆ ಕಂಡು ಬರಲಿ ಎಂದು ಅವರ ಫ್ಯಾನ್ಸ್ ಕೋರುತ್ತಿದ್ದಾರೆ. ಈ ವಾರದ ನಾಮಿನೇಷನ್ನಲ್ಲಿ ಮಾನಸಾ ಅವರ ಹೆಸರೂ ಇದೆ. ಅವರು ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಬೇಕಾದ ಅಗತ್ಯವಿದೆ. ಹೀಗಿರುವಾಗಲೇ ಅವರು ಆಸ್ಪತ್ರೆ ಸೇರಿರೋದು ಬೇಸರ ಮೂಡಿಸಿದೆ.
ಇದನ್ನೂ ಓದಿ: ‘ನಾನು ನಿಮ್ಮ ಮನೆಯ ನಾಯಿನಾ?’; ಹಾಸ್ಯ ಕಲಾವಿದರ ಅವಮಾನಿಸಿದ ಜಗದೀಶ್ ವಿರುದ್ಧ ಮಾನಸಾ ಕಿಡಿ
ಮಾನಸಾ ಅವರು ಅಂದುಕೊಂಡಷ್ಟು ಮನರಂಜನೆ ನೀಡುತ್ತಿಲ್ಲ. ಅವರಿಗೆ ಅನೇಕ ಕಡೆಗಳಲ್ಲಿ ಹಿನ್ನಡೆ ಆಗಿದೆ. ಇದೆಲ್ಲವನ್ನೂ ಸಹಿಸಿಕೊಂಡು ಅವರು ಮುನ್ನಡೆಯುತ್ತಿದ್ದಾರೆ. ಅವರು ಈ ವಾರದ ನಾಮಿನೇಷ್ನಿಂದ ಬಚಾವ್ ಆಗುತ್ತಾರಾ ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.