Sign In

By signing in or creating an account, you agree with Associated Broadcasting Company's Terms & Conditions and Privacy Policy.

Amrutha Naidu: ಸಮನ್ವಿ ಇಲ್ಲದೆ ಮಂಕಾಗಿದ್ದ ಅಮೃತಾ ನಾಯ್ಡು ಬಾಳಲ್ಲಿ ಬಂತು ಹೊಸ ಬೆಳಕು; ಗಂಡು ಮಗುವಿಗೆ ಜನ್ಮ ನೀಡಿದ ನಟಿ

Amrutha Naidu | Samanvi: ಪತಿ ರೂಪೇಶ್​ ಜತೆ ಇರುವ ಫೋಟೋವನ್ನು ಅಮೃತಾ ನಾಯ್ಡು ಹಂಚಿಕೊಂಡಿದ್ದಾರೆ. ಈ ಫೋಟೋ ಜೊತೆಯಲ್ಲಿ ಅವರು ಖುಷಿಯ ವಿಷಯವನ್ನು ತಿಳಿಸಿದ್ದಾರೆ.

Amrutha Naidu: ಸಮನ್ವಿ ಇಲ್ಲದೆ ಮಂಕಾಗಿದ್ದ ಅಮೃತಾ ನಾಯ್ಡು ಬಾಳಲ್ಲಿ ಬಂತು ಹೊಸ ಬೆಳಕು; ಗಂಡು ಮಗುವಿಗೆ ಜನ್ಮ ನೀಡಿದ ನಟಿ
ರೂಪೇಶ್​, ಅಮೃತಾ ನಾಯ್ಡು, ಸಮನ್ವಿ
Follow us
TV9 Web
| Updated By: ಮದನ್​ ಕುಮಾರ್​

Updated on: Jul 03, 2022 | 3:17 PM

ನಟಿ ಅಮೃತಾ ನಾಯ್ಡು (Amrutha Naidu) ಅವರು ಶುಭ ಸಮಾಚಾರ ನೀಡಿದ್ದಾರೆ. ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಅವರು ಈ ಖುಷಿಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು, ಸ್ನೇಹಿತರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ತಾಯಿ ಮತ್ತು ಮಗುವಿನ ಆರೋಗ್ಯ ಚೆನ್ನಾಗಿರಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಒಂದಷ್ಟು ತಿಂಗಳ ಹಿಂದೆ ಅಮೃತಾ ನಾಯ್ಡು ಅವರ ಬಾಳಲ್ಲಿ ಕತ್ತಲು ಆವರಿಸಿತ್ತು. ಅವರ ಪುತ್ರಿ, ‘ನನ್ನಮ್ಮ ಸೂಪರ್​ ಸ್ಟಾರ್​’ (Nannamma Super Star) ಖ್ಯಾತಿಯ ಬಾಲ ನಟಿ ಸಮನ್ವಿ (Samanvi) ರಸ್ತೆ ಅಪಘಾತದಲ್ಲಿ ನಿಧನಳಾಗಿದ್ದು ತೀವ್ರ ನೋವುಂಟು ಮಾಡಿತ್ತು. ಈಗ ಅಮೃತಾ ನಾಯ್ಡು ಬದುಕಿನಲ್ಲಿ ಹೊಸ ಬೆಳಕು ಮೂಡಿದೆ. ಪುತ್ರನ ಆಗಮನದಿಂದ ಅವರ ಮುಖದಲ್ಲಿ ಪುನಃ ನಗು ಅರಳಿದೆ.

ಪತಿ ರೂಪೇಶ್​ ಜತೆ ಇರುವ ಫೋಟೋವನ್ನು ಅಮೃತಾ ನಾಯ್ಡು ಹಂಚಿಕೊಂಡಿದ್ದಾರೆ. ಈ ಫೋಟೋ ಜೊತೆಯಲ್ಲಿ ಅವರು ಈ ಖುಷಿಯ ವಿಷಯವನ್ನು ತಿಳಿಸಿದ್ದಾರೆ. ‘ನಮ್ಮ ಕಷ್ಟದ ಸಮಯದಲ್ಲಿ ಜೊತೆಗಿದ್ದ ನಿಮ್ಮೆಲ್ಲರಿಗೂ ಧನ್ಯವಾದಗಳು. ಈಗ ಬದುಕಿನಲ್ಲಿ ಹೊಸ ಆರಂಭ ಆಗಿದೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆಯಿಂದಾಗಿ ರೂಪೇಶ್​ ಮತ್ತು ನಾನು ಗಂಡು ಮಗುವನ್ನು ಪಡೆದಿದ್ದೇವೆ’ ಎಂದು ಅಮೃತಾ ನಾಯ್ಡು ಬರೆದುಕೊಂಡಿದ್ದಾರೆ.

ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಅಮೃತಾ ನಾಯ್ಡು ಅವರು ಸಕ್ರಿಯರಾಗಿದ್ದಾರೆ. ಅನೇಕ ಸೀರಿಯಲ್​ಗಳಲ್ಲಿ ನಟಿಸುವ ಮೂಲಕ ಅವರು ಫೇಮಸ್​ ಆಗಿದ್ದಾರೆ. ಮಗಳು ಸಮನ್ವಿ ಜೊತೆಯಲ್ಲಿ ಅವರು ‘ನನ್ನಮ್ಮ ಸೂಪರ್​ ಸ್ಟಾರ್​’ ಶೋನಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಿಂದಾಗಿ ಸಮನ್ವಿಗೆ ಜನಪ್ರಿಯತೆ ಸಿಕ್ಕಿತ್ತು.

ಇದನ್ನೂ ಓದಿ
Image
Samanvi Funeral: ಬೆಂಗಳೂರಿನಲ್ಲಿ ನೆರವೇರಿದ ಬಾಲನಟಿ ಸಮನ್ವಿ ಅಂತ್ಯಕ್ರಿಯೆ; ಮುಗಿಲುಮುಟ್ಟಿದ ಆಕ್ರಂದನ
Image
ಬಾಲಕಿ ಸಮನ್ವಿಗೆ ಆ್ಯಕ್ಸಿಡೆಂಟ್ ಆಗಲು ಕಾರಣ ಏನು? ಅಸಲಿ ವಿಚಾರ ತೆರೆದಿಟ್ಟ ಸ್ಥಳೀಯರು
Image
ಸಮನ್ವಿ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ;​ ಯಮಸ್ವರೂಪಿಯಾಗಿ ಬಂತು ಟಿಪ್ಪರ್​ ಲಾರಿ
Image
ಸಮನ್ವಿಗೆ ಆ್ಯಕ್ಸಿಡೆಂಟ್​ ಆದ ಸ್ಥಳದಲ್ಲಿ ಏನು ನಡೆಯಿತು? ಪ್ರತ್ಯಕ್ಷದರ್ಶಿಗಳು ತೆರೆದಿಟ್ಟ ಅಸಲಿ ಸತ್ಯ ಇಲ್ಲಿದೆ

ಅಮೃತಾ ನಾಯ್ಡು ಬದುಕಿನ ಆ ಕರಾಳ ದಿನ:

ತಾಯಿ ರೀತಿ ಸಮನ್ವಿ ಕೂಡ ಇನ್ನೇನು ಬಣ್ಣ ಲೋಕದಲ್ಲಿ ಬೆಳೆಯಬೇಕು ಎಂಬಷ್ಟರಲ್ಲಿ ವಿಧಿ ತನ್ನ ಕ್ರೂರತೆ ಮೆರೆದಿತ್ತು. 2022ರ ಆರಂಭದಲ್ಲೇ ಅಮೃತಾ ನಾಯ್ಡು ಅವರು ತೀವ್ರ ಆಘಾತಕ್ಕೆ ಒಳಗಾಗಿಬೇಕಾಯಿತು. ಮಗಳು ಸಮನ್ವಿ ಜೊತೆ ದ್ವಿಚಕ್ರ ವಾಹನದಲ್ಲಿ ಜ.13ರಂದು ತೆರಳುತ್ತಿ​ದಾಗ ಬೆಂಗಳೂರಿನ ವಾಜರಹಳ್ಳಿಯಲ್ಲಿ ಅಪಘಾತ ಸಂಭವಿಸಿತು. ಸಮನ್ವಿ ಸ್ಥಳದಲ್ಲೇ ಮೃತಪಟ್ಟಳು. ಮಗಳ ನಿಧನದಿಂದ ಅಮೃತಾ ಅವರಿಗೆ ದಿಕ್ಕೇ ತೋಚದಂತೆ ಆಗಿತ್ತು. ಈಗ ಪುತ್ರನ ಆಗಮನದಿಂದ ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆದಂತಾಗಿದೆ.

ಇದನ್ನೂ ಓದಿ: ತಾಯಿಯಾದ ನಂತರ ಮೊದಲ ಬಾರಿಗೆ ಫೋಟೋ ಹಂಚಿಕೊಂಡ ಪ್ರಿಯಾಂಕಾ; ಫ್ಯಾನ್ಸ್​ಗೆ ಮತ್ತೊಂದು ಖುಷಿ ಸುದ್ದಿ ನೀಡಿದ ನಟಿ

ಎರಡನೇ ಬಾರಿ ತಂದೆಯಾದ ರಿಷಬ್​ ಶೆಟ್ಟಿ; ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಗತಿ ಶೆಟ್ಟಿ

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್