‘ನನ್ನಮ್ಮ ಸೂಪರ್ ​ಸ್ಟಾರ್​ 2’ ಫಿನಾಲೆಗೆ ವೇದಿಕೆ ಸಜ್ಜು; ರವಿಚಂದ್ರನ್-ವಂಶಿಕಾ ಸಂಭಾಷಣೆ ವೈರಲ್

ವಂಶಿಕಾ ನನ್ನಮ್ಮ ಸೂಪರ್​ ಸ್ಟಾರ್​’ನಿಂದ ಸಾಕಷ್ಟು ಜನಪ್ರಿಯತೆ ಪಡೆದಳು. ಅವಳ ಮಾತು ಕೇಳಿ ಅನೇಕರು ಮೆಚ್ಚಿಕೊಂಡರು. ಈ ಕಾರಣಕ್ಕೆ ಎರಡನೇ ಸೀಸನ್​ಗೆ ಅವಳೇ ಆ್ಯಂಕರ್ ಆದಳು.

‘ನನ್ನಮ್ಮ ಸೂಪರ್ ​ಸ್ಟಾರ್​ 2’ ಫಿನಾಲೆಗೆ ವೇದಿಕೆ ಸಜ್ಜು; ರವಿಚಂದ್ರನ್-ವಂಶಿಕಾ ಸಂಭಾಷಣೆ ವೈರಲ್
ವಂಶಿಕಾ-ರವಿಚಂದ್ರನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 15, 2023 | 2:50 PM

‘ನನ್ನಮ್ಮ ಸೂಪರ್​ ಸ್ಟಾರ್’ (Nannamma Super Star) ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡಿತ್ತು. ಬಣ್ಣದ ಲೋಕದಲ್ಲಿ ಗುರುತಿಸಿಕೊಂಡ ನಟಿಯರು ಹಾಗೂ ಅವರ ಮಕ್ಕಳು ಈ ಶೋಗೆ ಸ್ಪರ್ಧಿಗಳಾಗಿ ಆಗಮಿಸಿದ್ದರು. ಮೊದಲ ಸೀನಸ್​ನಲ್ಲಿ ಯಶಸ್ವಿನಿ ಹಾಗೂ ವಂಶಿಕಾ ವಿನ್ನರ್ ಆಗಿ ಹೊರಹೊಮ್ಮಿದ್ದರು. ಈ ಸೀಸನ್ ಯಶಸ್ಸು ಕಂಡ ಬೆನ್ನಲ್ಲೇ ‘ನನ್ನಮ್ಮ ಸೂಪರ್ ಸ್ಟಾರ್​ ಎರಡನೇ ಸೀಸನ್’ ಆರಂಭಗೊಂಡಿತ್ತು. ಈಗ ಈ ಸೀಸನ್​ ಫಿನಾಲೆ ನಡೆಯುತ್ತಿದೆ. ಯಾರು ಈ ಕಪ್​ ಎತ್ತಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಅವರು ಈ ಶೋಗೆ ಮುಖ್ಯ ಅತಿಥಿಯಾಗಿ ಬಂದಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಇದರ ಪ್ರೋಮೋ ಹಂಚಿಕೊಂಡಿದೆ.

ವಂಶಿಕಾ ನನ್ನಮ್ಮ ಸೂಪರ್​ ಸ್ಟಾರ್​’ನಿಂದ ಸಾಕಷ್ಟು ಜನಪ್ರಿಯತೆ ಪಡೆದಳು. ಅವಳ ಮಾತು ಕೇಳಿ ಅನೇಕರು ಮೆಚ್ಚಿಕೊಂಡರು. ಈ ಕಾರಣಕ್ಕೆ ಎರಡನೇ ಸೀಸನ್​ಗೆ ಅವಳೇ ಆ್ಯಂಕರ್ ಆದಳು. ವಂಶಿಕಾಗೆ ನಿರಂಜನ್ ದೇಶಪಾಂಡೆ ಸಾಥ್ ನೀಡಿದ್ದಾರೆ. ಇಬ್ಬರೂ ಜೊತೆಯಾಗಿ ಫಿನಾಲೆ ನಡೆಸಿಕೊಡುತ್ತಿದ್ದಾರೆ. ಫಿನಾಲೆಯಲ್ಲಿ ಆರು ಜೋಡಿಗಳು ಇದ್ದಾರೆ. ಈ ಪೈಕಿ ಒಬ್ಬರು ‘ನನ್ನಮ್ಮ ಸೂಪರ್ ಸ್ಟಾರ್ ಸೀಸನ್​ 2’ ಕಪ್ ಸಿಗಲಿದೆ.

ವಂಶಿಕಾ ಪ್ರಶ್ನೆಗೆ ರವಿಚಂದ್ರನ್ ಉತ್ತರ

‘ನನ್ನಮ್ಮ ಸೂಪರ್ ಸ್ಟಾರ್​’ ರಿಯಾಲಿಟಿ ಶೋ ಅಮ್ಮ-ಮಕ್ಕಳ ಲೋಕ. ಇಬ್ಬರೂ ಒಟ್ಟಾಗಿ ಸ್ಪರ್ಧೆ ಮಾಡುತ್ತಾರೆ. ಗೆಲುವಿಗಾಗಿ ಪ್ರಯತ್ನ ಮಾಡುತ್ತಾರೆ. ಹೀಗಾಗಿ, ಮಕ್ಕಳ ಬಗ್ಗೆಯೇ ರವಿಚಂದ್ರನ್​ಗೆ ವಂಶಿಕಾ ಪ್ರಶ್ನೆ ಮಾಡಿದ್ದಾಳೆ. ‘ಚಿಕ್ಕ ಮಕ್ಕಳು ಎಂದರೆ ನಿಮಗೆ ಏಕೆ ಇಷ್ಟ?’ ಎಂದು ವಂಶಿಕಾ ಕೇಳಿದಳು. ಇದಕ್ಕೆ ಉತ್ತರಿಸಿದ ರವಿಚಂದ್ರನ್, ‘ನಿಮ್ಮ ಜೊತೆ ಬೆರೆತು ನಾನು ಮಗು ಆಗಬಹುದಲ್ಲ’ ಎಂದರು. ‘ನನ್ನ ಮುಖದಲ್ಲಿ ನಗು ನೋಡಿದರೆ ಆ ನಗುವೇ ನನ್ನ ತಾಯಿ’ ಎಂದರು ಕ್ರೇಜಿ ಸ್ಟಾರ್​. ಈ ರೀತಿಯ ಹಲವು ಸಂಭಾಷಣೆಗಳು ಈ ಫಿನಾಲೆ ಎಪಿಸೋಡ್​ನಲ್ಲಿ ಇರಲಿದೆ.

ರವಿಚಂದ್ರನ್ ಕೈಯಿಂದ ಕಪ್

‘ನನ್ನಮ್ಮ ಸೂಪರ್ ಸ್ಟಾರ್​ ಎರಡನೇ ಸೀಸನ್​’ನಲ್ಲಿ ಕಪ್ ಗೆಲ್ಲೋದು ಯಾರು ಎನ್ನುವ ಪ್ರಶ್ನೆ ಮೂಡಿದೆ. ಈ ಬಾರಿಯ ವಿನ್ನರ್ಸ್​ಗೆ ರವಿಚಂದ್ರನ್ ಅವರು ಆಕರ್ಷಕ ಟ್ರೋಫಿಯನ್ನು ಹಸ್ತಾಂತರ ಮಾಡಲಿದ್ದಾರೆ. ಪ್ರೋಮೋದಲ್ಲಿ ಈ ವಿಚಾರವನ್ನು ರಿವೀಲ್ ಮಾಡಲಾಗಿದೆ.

ಅದ್ದೂರಿ ಫಿನಾಲೆ:

ರಿಯಾಲಿಟಿ ಶೋ ಎಂದರೆ ಅಲ್ಲಿ ಅದ್ದೂರಿತನ ಇರಲೇಬೇಕು. ಅದೇ ರೀತಿ ‘ನನ್ನಮ್ಮ ಸೂಪರ್ ಸ್ಟಾರ್​ ಸೀಸನ್ 2’ ಫಿನಾಲೆ ಕೂಡ ಸಾಕಷ್ಟು ಅದ್ದೂರಿಯಾಗಿ ನಡೆಯುತ್ತಿದೆ. ಈ ವಿಚಾರ ಪ್ರೋಮೋದಲ್ಲಿ ಗೊತ್ತಾಗಿದೆ. ಶನಿವಾರ (ಫೆಬ್ರವರಿ 18) ಹಾಗೂ ಭಾನುವಾರ (ಫೆಬ್ರವರಿ 19) ಫಿನಾಲೆ ಎಪಿಸೋಡ್ ಪ್ರಸಾರ ಕಾಣಲಿದೆ. ರಾತ್ರಿ 7.30ಕ್ಕೆ ಕಾರ್ಯಕ್ರಮ ಪ್ರಸಾರ ಆಗಲಿದೆ. ಸೃಜನ್ ಲೋಕೇಶ್, ತಾರಾ ಹಾಗೂ ಅನು ಪ್ರಭಾಕರ್ ಜಡ್ಜ್​ ಸ್ಥಾನದಲ್ಲಿದ್ದಾರೆ.

ಮುಂದೇನು?

‘ನನ್ನಮ್ಮ ಸೂಪರ್ ಸ್ಟಾರ್​ ಸೀಸನ್ 2’ ಫಿನಾಲೆ ಮುಗಿದ ಬಳಿಕ ಮುಂದೇನು ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ. ಅನೇಕರು ಸೃಜನ್ ಲೋಕೇಶ್ ಅವರ ‘ಮಜಾ ಟಾಕೀಸ್​’ ಆರಂಭ ಆಗಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ಕಲರ್ಸ್ ವಾಹಿನಿ ಅವರು ಈ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಶ್ರೀಲಕ್ಷ್ಮಿ ಎಚ್​.

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ