AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಥಮಾ ಪ್ರಸಾದ್ ಮೊದಲ ವಾರವೇ ಎಲಿಮಿನೇಟ್ ಆಗಲು ಕಾರಣವೇನು?

 ಬಿಗ್ ಬಾಸ್ ಪ್ರಮುಖ ಮನೆಯ ಒಳಗಡೆಯೇ ಕಾಲಿಡದೆ ವಿಮಾನದ ಸೆಟ್‌ನಿಂದಲೇ ನಟಿ ಪ್ರಥಮಾ ಪ್ರಸಾದ್ ಔಟ್ ಆಗಿದ್ದಾರೆ. ವಿಮಾನದಲ್ಲಿದ್ದ ಕಾರಣ ಹೈಲೈಟ್ ಆಗಲು ಸಾಧ್ಯವಾಗದೆ, ಯಾವುದೇ ಮನರಂಜನೆ ನೀಡದೆ ಕೇವಲ ಜಗಳಗಳಲ್ಲೇ ತೊಡಗಿದ್ದ ಅವರಿಗೆ ಪ್ರೇಕ್ಷಕರ ಬೆಂಬಲ ಸಿಗಲಿಲ್ಲ. ಈ ಮೂಲಕ ಅವರ ದುರದೃಷ್ಟದ ಬಿಗ್ ಬಾಸ್ ಪಯಣ ಅಂತ್ಯಗೊಂಡಿದೆ.

ಪ್ರಥಮಾ ಪ್ರಸಾದ್ ಮೊದಲ ವಾರವೇ ಎಲಿಮಿನೇಟ್ ಆಗಲು ಕಾರಣವೇನು?
ಪ್ರಥಮಾ Image Credit source: Colors Kannada
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 14, 2026 | 6:30 AM

Share

ಮುಖ್ಯಾಂಶಗಳು

  • ಮುಖ್ಯ ಮನೆ ಪ್ರವೇಶಿಸುವ ಮೊದಲೇ ಪ್ರಥಮಾ ಔಟ್
  • ಹೈಲೈಟ್ ಆಗದ ವಿಮಾನದ ಸೆಟ್ ಹಾಗೂ ಎಂಟರ್‌ಟೈನ್‌ಮೆಂಟ್ ಕೊರತೆ
  • ಸರಿಹೋಗದ ಜಗಳ-ಮನರಂಜನೆ ಲೆಕ್ಕಾಚಾರ

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ದಿನಕ್ಕೊಂದು ಟ್ವಿಸ್ಟ್ ಎದುರಾಗುತ್ತಿದ್ದು, ಈ ಬಾರಿಯ ಎಲಿಮಿನೇಷನ್ ವೀಕ್ಷಕರಿಗೆ ಭಾರೀ ಆಶ್ಚರ್ಯ ತಂದಿದೆ. ನಟಿ ಹಾಗೂ ಸ್ಪರ್ಧಿ ಪ್ರಥಮಾ ಪ್ರಸಾದ್ ಅವರು ಬಿಗ್ ಬಾಸ್ ಪ್ರಮುಖ ಮನೆಯಿಂದಲೇ ಹೊರಬಿದ್ದಿದ್ದಾರೆ. ಆದರೆ ಇಲ್ಲಿಯವರೆಗೂ ಅವರು ಮುಖ್ಯ ಬಿಗ್ ಬಾಸ್ ಮನೆಯ ಒಳಗಡೆಯೇ ಕಾಲಿಟ್ಟಿರಲಿಲ್ಲ ಎಂಬುದು ಅಸಲಿ ವಿಷಯ.

ಆರಂಭದಿಂದಲೂ ಬಿಗ್ ಬಾಸ್ ಮನೆಯ ಹೊರಭಾಗದಲ್ಲಿ ನಿರ್ಮಿಸಲಾಗಿದ್ದ ವಿಮಾನದ ಸೆಟ್‌ನಲ್ಲೇ ದಿನ ಕಳೆಯುತ್ತಿದ್ದ ಪ್ರಥಮಾ ಅವರಿಗೆ ದುರದೃಷ್ಟ ಬೆನ್ನತ್ತಿತ್ತು. ಅವರು ಮೊದಲ ವಾರವರೇ ದೊಡ್ಮನೆಯಿಂದ ಹೊರ ಹೋದರು. ಕಡಿಮೆ ವೋಟ್ ಪಡೆದು ಅವರು ಹೊರ ಹೋಗಿದ್ದಾರೆ.

ವಿಮಾನದ ಸೆಟ್‌ನಲ್ಲೇ ಉಳಿದುಕೊಂಡಿದ್ದರಿಂದ ಅವರಿಗೆ ಶೋನಲ್ಲಿ ಹೆಚ್ಚು ಹೈಲೈಟ್ ಆಗಲು ಸಾಧ್ಯವಾಗಲಿಲ್ಲ. ಜೊತೆಗೆ, ಸಹ ಸ್ಪರ್ಧಿಗಳೊಂದಿಗೆ ಜಗಳ ಮಾಡಿಕೊಂಡಿದ್ದನ್ನು ಬಿಟ್ಟರೆ, ಪ್ರೇಕ್ಷಕರು ನಿರೀಕ್ಷಿಸಿದ್ದ ಹಾಸ್ಯ ಅಥವಾ ಎಂಟರ್‌ಟೈನ್‌ಮೆಂಟ್ ನೀಡುವಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದರು.

ಯಾವುದೇ ದೊಡ್ಡ ಮಟ್ಟದ ಎಂಟರ್‌ಟೈನ್‌ಮೆಂಟ್ ನೀಡದೆ, ಕೇವಲ ಗಲಾಟೆಗಳಲ್ಲೇ ಸಮಯ ಕಳೆದ ಪ್ರಥಮಾ ಅವರಿಗೆ ವೀಕ್ಷಕರ ಬೆಂಬಲ ಸಿಗಲಿಲ್ಲ. ಗೇಮ್​​ನಲ್ಲೂ ಸಹ ಅವರ ಆಟ ಪರಿಣಾಮಕಾರಿಯಾಗಿ ಇರಲೇ ಇಲ್ಲ. ಪರಿಣಾಮವಾಗಿ, ಮುಖ್ಯ ಮನೆ ಪ್ರವೇಶಿಸುವ ಕನಸು ಈಡೇರದೆ ವಿಮಾನದ ಸೆಟ್‌ನಿಂದಲೇ ಅವರು ಬಿಗ್ ಬಾಸ್ ಪಯಣವನ್ನು ಕೊನೆಗೊಳಿಸಬೇಕಾಯಿತು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಕೇಳಿಬಂತು ಗಂಭೀರ ಆರೋಪ

ಬಿಗ್ ಬಾಸ್ ಮನೆಯಲ್ಲಿ ಈವರೆಗೆ ಈ ರೀತಿ ಆಗಿರಲಿಲ್ಲ. ಈಗ ಪ್ರಥಮಾ ಅವರು ವಿಚಿತ್ರ ರೀತಿಯಲ್ಲಿ ಎಲಿಮಿನೇಟ್ ಆಗಿ ಸಾಕಷ್ಟು ತೊಂದರೆ ಅನುಭವಿಸಬೇಕಾಗಿ ಬಂದಿದೆ. ಸದ್ಯ 15 ಸ್ಪರ್ಧಿಗಳೊಂದಿಗೆ ಆಟ ಮುಂದುವರಿದಿದೆ. ಪ್ರತಿ ಬಾರಿ 18 ಸ್ಪರ್ಧಿಗಳೊಂದಿಗೆ ಆಟ ನಡೆಯುತ್ತಿತ್ತು. ಆದರೆ, ಈ ಬಾರಿ 16 ಸ್ಪರ್ಧಿಗಳೊಂದಿಗೆ ಆಟ ಶುರುವಾಗಿದೆ. ಶೀಘ್ರದಲ್ಲೇ ಕೆಲವು ವೈಲ್ಡ್ ಕಾರ್ಡ್ ಎಂಟ್ರಿಗಳು ನಡೆಯುವ ಸಾಧ್ಯತೆ ಇದೆ. ಅದಕ್ಕಾಗಿ ವೀಕ್ಷಕರು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us